
ಹತ್ತಾರು ಸೂಪರ್ ಕಾರ್‌ಗಳ ಒಡೆಯನಾಗಿರುವ ನಟ ಕಿಚ್ಚ ಸುದೀಪ್ (Kichcha Sudeep) ತಮ್ಮ ಹೊಸ ಸಾಹಸ ರಿವೀಲ್ ಮಾಡಿದ್ದಾರೆ. ಅವರು ಇಂಡಿಯನ್ ಕಾರ್ ರೇಸ್ ಫೆಸ್ಟಿವಲ್‌ನಲ್ಲಿ (Indian Car Race Festival) ಬೆಂಗಳೂರು ತಂಡವನ್ನು (Bengaluru Team) ಖರೀದಿಸಿದ್ದಾರೆ. ಸುದೀಪ್ ಖರೀದಿಸಿದ ತಂಡಕ್ಕೆ ಕಿಚ್ಚಾಸ್ ಕಿಂಗ್ಸ್ (Kicchas Kings) ಎಂಬ ಹೆಸರನ್ನು ಇಡಲಾಗಿದೆ. ಬೆಂಗಳೂರು ಟೀಮ್ ಓನರ್ ಆಗಿರುವ ಕಿಚ್ಚ ತಂಡಕ್ಕೆ ಬೆಂಗಳೂರು ಟೀಮ್ ಎಂದೇ ಹೆಸರಿಡುತ್ತಾರೆ ಎಂದು ಸುದೀಪ್ ಭಾವಿಸಿದ್ದರು. ಆದರೆ ಕಿಚ್ಚಾಸ್ ಕಿಂಗ್ಸ್ ಎಂದು ಹೆಸರಿಟ್ಟಿದ್ದಕ್ಕೆ ಸುದೀಪ್ ಖುಷಿಯಾಗಿದ್ದಾರೆ. ಈ ಮೂಲಕ ಸಿನಿಮಾದಾಚೆಯೂ ಕಿಚ್ಚ ಹೆಜ್ಜೆ ಇಟ್ಟಿದ್ದಾರೆ.
ಸದ್ಯ ವಿಷಯ ಇದೇ ಆದರೂ, ತಮ್ಮ ಕಾರುಗಳ ಸಂಗ್ರಹ ಮತ್ತು ಡ್ರೈವಿಂಗ್‌ಗೆ ಸಂಬಂಧಿಸಿದಂತೆ ವೇದಿಕೆ ಮೇಲೆ ಕೇಳಲಾದ ಒಂದು ಪ್ರಶ್ನೆಗೆ ಸುದೀಪ್ ನೀಡಿದ ಉತ್ತರ ಈಗ ವೈರಲ್ ಆಗಿದೆ. ʼನೀವು ಮೊತ್ತಮೊದಲು ಡ್ರೈವ್ ಮಾಡಿದ ಸೂಪರ್ ಕಾರ್ ಯಾವುದು ಸಾರ್?ʼ ಎಂದು ನಿರೂಪಕ ಕೇಳ್ತಾರೆ. ಆಗ ಕಿಚ್ಚ ಸುದೀಪ್ ಹೇಳಿದ್ದು- ಮಾರುತಿ 800! ಎಲ್ಲರೂ ನಕ್ಕರು. ಆದರೆ ಕಿಚ್ಚ ನಗದೆ ಸೀರಿಯಸ್ಸಾಗಿಯೇ ಉತ್ತರಿಸಿದರು- ʼಇದು ನಿಜ. ಯಾಕೆಂದರೆ ನನ್ನ ತಂದೆ ಬಳಿ ಇದ್ದದ್ದು ಅದು ಮಾತ್ರ. ಹಾಸಿಗೆ ಇದ್ದಷ್ಟು ಕಾಲು ಚಾಚು ಅಂತ ಅವರು ಹೇಳ್ತಾ ಇದ್ರು. ನಮ್ಮ ಕೆಪ್ಯಾಸಿಟಿ ಅಷ್ಟೇ ಇತ್ತು. ಅದನ್ನೂ ಓಡಿಸಿ, ಗುದ್ದಿ, ಡಿಕ್ಕಿ ಹೊಡೆದು, ಎಲ್ಲಾ ಆಗಿದೆʼ ಅಂದರು ಕಿಚ್ಚ. ಆ ಮೂಲಕ ತಮ್ಮ ಪರಿಶ್ರಮದ ದಿನಗಳನ್ನು ಅವರು ನೆನಪಿಸಿಕೊಂಡರು ಎನ್ನಬಹುದು.
ಬೆಂಗಳೂರಿನಲ್ಲಿ ನಡೆದ ಆ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಕಾರು ಓನರ್‌ಶಿಪ್ ಕುರಿತು ಮನಬಿಚ್ಚಿ ಮಾತನಾಡಿದರು. ಚಿತ್ರರಂಗದಲ್ಲಿ ಮಾಡಲಾಗುವ ಆಟಕ್ಕೆ ಈ ರೇಸ್ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೇ ಈ ರೇಸ್ ಸುಲಭದ್ದಲ್ಲ ಎಂದರು. ಓನರ್ ಆಗಿದ್ದರೂ ಸುದೀಪ್‌ಗೆ ರೇಸ್ ಕಾರ್‌ನೊಳಗೆ ಕೂರುವ ಅವಕಾಶ ಇಲ್ಲ. ಯಾಕೆಂದರೆ ಅದರ ಲೈಸೆನ್ಸ್ ಇದ್ದವರು ಮಾತ್ರ ಕೂರಬೇಕಾಗುತ್ತೆ. ಆಗಸ್ಟ್ ತಿಂಗಳಲ್ಲಿ ರೇಸ್ ಆರಂಭವಾಗಲಿದೆ. ಬೆಂಗಳೂರು, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಚೆನ್ನೈ, ಗೋವಾ ಫ್ರಾಂಚೈಸಿಗಳ ಮಧ್ಯೆ ಸ್ಪರ್ಧೆ ನಡೆಯಲಿದೆ.
ಇನ್ನು ಸುದೀಪ್‌ಗೆ ಸೂಪರ್ ಕಾರುಗಳು ಹೊಸತಲ್ಲ. ಒಂದಲ್ಲ, ಎರಡಲ್ಲ ಲಕ್ಷುರಿಯಾಗಿರುವ ಹಲವಾರು ಕಾರುಗಳಿಗೆ ಕಿಚ್ಚ ಸುದೀಪ್ ಮಾಲಿಕ. ದುಬಾರಿ ಕಾರುಗಳನ್ನು ಇಷ್ಟಪಡುವವರು ರೇಂಜ್ ರೋವರ್ ಕಾರು ಖರೀದಿಸದೇ ಇರುವುದಿಲ್ಲ. ಕಿಚ್ಚ ಸುದೀಪ್ ಅವರಲ್ಲಿಯೂ ಈ ಕಾರು ಇದೆ. ಕಿಚ್ಚ ಬಳಿ ಇರುವ 3.0 ಕಾರಿನ ಎಕ್ಸ್ ಶೋ ರೂಮ್ ಬೆಲೆ ಸುಮಾರು 2.11 ಕೋಟಿ. ಸುದೀಪ್ ಜೀಪ್ ರಾಂಗ್ಲರ್ ಕೂಡಾ ಪರ್ಚೆಸ್ ಮಾಡಿದ್ದಾರೆ. ಈ ರೀತಿಯ ಜೀಪ್ಗಳು ಸುಮಾರು 63.84 ಲಕ್ಷ ದಿಂದ ಶುರುವಾಗಿ ವಿಭಿನ್ನ ದರಗಳಲ್ಲಿ ಲಭ್ಯವಿದೆ.
ವಿಜಯ್ ಕಾರ್ತಿಕೇಯ ಜೊತೆ ಮತ್ತೆ ಕಿಚ್ಚ ಸುದೀಪ್ ಸಿನಿಮಾ, 47ನೇ ಸಿನಿಮಾದ ಟೀಸರ್ ಔಟ್!
ಕಿಚ್ಚ ಜೀಪ್ ಮಾಡೆಲ್ನಲ್ಲಿ ರಾಂಗ್ಲರ್ ಮಾತ್ರವಲ್ಲದೆ ಅದೇ ಕಂಪನಿಯ ಕಪ್ಪು ಬಣ್ಣದ ಜೀಪ್ ಕಂಪಾಸ್ ಅನ್ನು ಕೂಡ ಹೊಂದಿದ್ದಾರೆ. ಇದರ ಎಕ್ಸ್ ಶೋ ರೂಂ ಬೆಲೆ 21.73 ಲಕ್ಷದಿಂದ ಶುರುವಾಗಿ ಹೆಚ್ಚುತ್ತಾ ಹೋಗುತ್ತದೆ. ಇದು ಅತ್ತ ಜೀಪ್ ಅಲ್ಲ, ಇತ್ತ ಕಾರು ಕೂಡಾ ಅಲ್ಲ ಎನ್ನುವ ರೀತಿ ವಿನ್ಯಾಸ. ಅವರಲ್ಲಿ BMWಎಂ5 ಕಾರು ಕೂಡಾ ಇದೆ. ಆದರೆ ಇದು ಸುದೀಪ್ ಖರೀದಿಸಿದ್ದಲ್ಲ. 2020ರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಕಿಚ್ಚನಿಗೆ ಬಿಎಂಡಬ್ಲ್ಯೂ ಎಂ5 ಕಾರನ್ನು ಗಿಫ್ಟ್ ಕೊಟ್ಟಿದ್ದರು. ಇದರ ಬೆಲೆ 1.5 ಕೋಟಿ ರೂಪಾಯಿ. ಇನ್ನು ಕಿಚ್ಚ ಸಿಲ್ವರ್ ಶೇಡ್ನ ಜಾಗ್ವಾರ್ ಎಕ್ಸ್ ಜೆಎಲ್ ಸೆಡಾನ್ ಕಾರು ಹೊಂದಿದ್ದಾರೆ. ಇದರ ಬೆಲೆ ಒಂದು ಕೋಟಿ ರೂಪಾಯಿ. ಸುದೀಪ್ ಈ ಕಾರನ್ನು ಹೆಚ್ಚಾಗಿ ಹೊರಗಡೆ ಓಡಾಡಲು ಬಳಸುತ್ತಾರೆ.
ಸುದೀಪ್ ಅವರು ಕೆಂಪು ಬಣ್ಣದ ವೋಲ್ವೋ xc90 ಕಾರನ್ನು ಕೂಡ ಹೊಂದಿದ್ದಾರೆ. ಈ ಕಾರಿನ ಸ್ಟಾರ್ಟಿಂಗ್ ಪ್ರೈಸ್81 ಲಕ್ಷ ರೂಪಾಯಿ ಇದೆ. ಆದರೆ ಇದು ಫಂಕಿ ಕಲರ್ನಲ್ಲಿ ಅಟ್ರಾಕ್ಟಿವ್ ಆಗಿದೆ. ಕಾರುಗಳ ಜೊತೆಗೆ ಬೈಕ್ಗಳನ್ನೂ ಹೊಂದಿದ್ದಾರೆ. ಮೂರು ಬಿಎಂಡಬ್ಲ್ಯೂ ಬೈಕ್‌ಗಳು ಇವೆ. ಇಷ್ಟೇ ಅಲ್ಲದೇ ಇವುಗಳ ಜೊತೆಗೆ ಒಂದು ಸೈಕಲ್ ಕೂಡ ಹೊಂದಿದ್ದಾರೆ.
ಯಶ್ ನಿರ್ಮಾಣದ "ರಾಮಾಯಣ"ದ ಬಗ್ಗೆ ಹೊರಬಂತು ಅತಿದೊಡ್ಡ ಭವಿಷ್ಯವಾಣಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.