
ನವರಸನಾಯಕ ಜಗ್ಗೇಶ್ ಅವರಿಗೆ ಮೊದಲಿಂದಲೂ ರಾಜ್'ಕುಮಾರ್ ಅವರ ಬಗ್ಗೆ ಪ್ರೀತಿ, ಅಭಿಮಾನ ಹೆಚ್ಚು. ಆ ಪ್ರೀತಿ, ಅಭಿಮಾನವನ್ನು ಆಗಾಗ ವ್ಯಕ್ತಪಡಿಸುತ್ತಾ ಇರುತ್ತಾರೆ. ಈಗ ಅಣ್ಣಾವ್ರ ಮಕ್ಕಳ ಮೇಲೂ ಅದೇ ಪ್ರೀತಿಯನ್ನು ತೋರಿಸುತ್ತಾರೆ. ವಿಶೇಷ ಅಂದ್ರೆ ಅಣ್ಣಾವ್ರಿಗೂ ಜಗ್ಗೇಶ್ ಮೇಲೆ ಅಷ್ಟೇ ಪ್ರೀತಿ ಇತ್ತು. ಜಗ್ಗೇಶ್ ಅಂದ್ರೆ ತುಂಬಾ ಇಷ್ಟಪಡುತ್ತಿದ್ದರಂತೆ. ಅಷ್ಟೇ ಅಲ್ಲ, ಅಣ್ಣಾವ್ರು ಜಗ್ಗೇಶ್ ಅವರನ್ನು ಕರ್ನಾಟಕದ ರಜನೀಕಾಂತ್ ಅಂತ ಕರೆಯುತಿದ್ದರಂತೆ. ಈ ಕುತೂಹಲಕರ ಕತೆಯನ್ನು ಪರಿಮಳಾ ಜಗ್ಗೇಶ್ ಅವರು ಹಂಚಿಕೊಂಡಿದ್ದಾರೆ. ತಾನು ಮೊದಲ ಸಲ ಪುನೀತ್ ರಾಜ್'ಕುಮಾರ್'ನನ್ನು ಭೇಟಿ ಮಾಡಿದ ಕ್ಷಣ ನಂಗಿನ್ನೂ ನೆನಪಿದೆ. ಡಾ.ರಾಜ್‌ಕುಮಾರ್ ಅವರು ಪುನೀತ್ ಅವರಿಗೆ ಜಗ್ಗೇಶ್'ರನ್ನು ಕರ್ನಾಟಕದ ರಜನಿಕಾಂತ್ ಎಂದು ಪರಿಚಯಿಸಿಕೊಟ್ಟರು ಎಂದು ಅವರು ಬರೆದುಕೊಂಡಿದ್ದಾರೆ. ಆ ಸಂದರ್ಭದಲ್ಲಿ ತೆಗೆದ ಅಪರೂಪದ ಫೋಟೋ ಇಲ್ಲಿದೆ. ಅಣ್ಣಾವ್ರು ಪರಿಚಯಿಸುವುದನ್ನು ನೋಡಬಹುದು.
epaper.kannadaprabha.in
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.