
ಮೊನ್ನೆ ಮೊನ್ನೆ ಗಾಂಧೀನಗರದ ಹೊಟೇಲೊಂದರಲ್ಲಿ ಬೈಟೂ ಟೀ ಕುಡಿಯುತ್ತಾ ವೆಂಕಟ್ ಮತ್ತು ಪ್ರಥಮ್ ಮಾತಾಡಿಕೊಂಡದ್ದು ನಮ್ಮ ಕಿವಿಗೂ ಬಿದ್ದಿದೆ. ಅವರ ಮಾತುಗಳಲ್ಲಿ ಎಲ್ಲರೂ ಕೇಳಬಹುದಾದ ಕೆಲವನ್ನು ಹೆಕ್ಕಿ ಕೊಟ್ಟಿದ್ದೇವೆ. ಕೇಳಿಸಿಕೊಂಡರೆ ನಿಮ್ಮ ಕಿವಿ ಪುನೀತವಾಗುತ್ತದೆ.
ವೆಂಕಟ್: ನಮಸ್ಕಾರ
ಪ್ರಥಮ್: ನಾನಿದನ್ನ ಖಂಡಿಸ್ತೀನಿ. ಮೊದಲು ಚಿಕ್ಕೋರು ದೊಡ್ಡೋರಿಗೆ ನಮಸ್ಕಾರ ಹೇಳಬೇಕು.
ವೆಂಕಟ್: ದುರ್ಜನಂ ಪ್ರಥಮಂ ವಂದೇ, ಸಜ್ಜನಂ ತದನಂತರಮ್! ಅಂದ್ರೆ ಕೆಟ್ಟೋರಿಗೆ ಮೊದ್ಲು ನಮಸ್ಕಾರ ಮಾಡಬೇಕಂತೆ. ರೆಸ್ಪೆಕ್ಟ್ ಟ್ರೆಡಿಷನ್ ಮ್ಯಾನ್!
ಪ್ರಥಮ್: ನನ್ ಎಕ್ಕಡ.
ವೆಂಕಟ್: ಏಯ್, ಇಡೋ ಅಲ್ಲಿ ಅದನ್ನ. ಎಕ್ಕಡ ನಂದು, ನಾನೊಬ್ಬನೇ ಯೂಸ್ ಮಾಡ್ಬೇಕು. ನೀನು ಮುಟ್ಟಿದ್ರೆ ಖಂಡಿಸ್ತೀನಿ.
ಪ್ರಥಮ್: ಹೋಗ್ಲಿ ಬಿಡಪ್ಪ, ಎಷ್ಟಾದ್ರೂ ಹಳೇವಿದ್ಯಾರ್ಥಿ ನೀನು.
ವೆಂಕಟ್: ಯಾರಿಗೆ ಹೇಳ್ತೀಯ ಹಳೇ ವಿದ್ಯಾರ್ಥಿ ಅಂತ. ನಾನು ಯಾವತ್ತಿದ್ರೂ ಹೊಸ ವಿದ್ಯಾರ್ಥಿ. ರೆಸ್ಪೆಕ್ಟ್!
ಪ್ರಥಮ್: ಹಂಗೆಲ್ಲ ಬಿರಾದಾರ್ ಥರ ಭಿಕ್ಷೆ ಎತ್ತಬಾರದು, ರೆಸ್ಪೆಕ್ಟ್ ರೆಸ್ಪೆಕ್ಟ್ ಅಂತ. ಕೊಟ್ರೆ ತಗೋಬೇಕು.
ವೆಂಕಟ್: ಕೊಟ್ರೆ ತಗೊಳ್ಳೋನು ಕೊಟ್ರೇಶಿ. ತಗೊಂಡು ಬಿಟ್ಟು ಕೊಡೋನು..
ಪ್ರಥಮ್: ತಗಡೇಶಿ. ನೋಡಪ್ಪ.. ನೀನೆಷ್ಟೇ ಕಿರುಚಾಡಿದ್ರೂ, ಏನೇ ಮಾತಾಡಿದ್ರೂ ನಾನೇ ಬಿಗ್‌ಬಾಸ್ ಗೆದ್ದಿರೋನು. ನೀನು ಆಚೆ ಬಿದ್ದಿರೋನು. ನೀನು ನಂಗೆ ರೆಸ್ಪೆಕ್ಟ್ ಕೊಡಬೇಕು.
ವೆಂಕಟ್: ನೋಡಪ್ಪ, ನಂಗೂ ನಿಂಗೂ ಗಲಾಟೆ ಯಾಕೆ? ನಿಮ್ಮನೆ ಕನ್ನಡಿ ಮುಂದೆ ನೀನು ನಿಂತ್ರೆ ನಾನೇ ತಾನೇ ಕಾಣೋದು. ನಮ್ಮನೆ ಕನ್ನಡಿ ಮುಂದೆ ನಾನು ನಿಂತ್ರೆ ನೀನೇ ತಾನೇ ಕಾಣೋದು.
ಪ್ರಥಮ್: ಇರಬಹುದು, ಆದ್ರೆ ನಾನು ಹುಚ್ಚ ಅಲ್ಲ
ವೆಂಕಟ್: ನಾನು ವೆಂಕಟಾನೂ ಅಲ್ಲ.
ಪ್ರಥಮ್: ಕೆಲವರು ವೆಂಕಟ ಅಂತಾರೆ, ಮಿಕ್ಕೋರು ಸಂಕಟ ಅಂತಾರೆ, ಹೆಣ್ಮಕ್ಕಳು ಕಂಟಕ ಅಂತಾರೆ
ವೆಂಕಟ್: ನನ್ ಮಗಂದ್.. ಯಾರೇನೇ ಅಂದ್ರೂ ವೆಂಕಟ ಬದಲಾಗಲ್ಲ.
ಪ್ರಥಮ್: ಕರೆಕ್ಟಾಗಿರೋರೇ ಕೆಡೋದು, ನಿಂಗೇನೂ ಆಗಲ್ಲ ಬಿಡಣ್ಣೋ!
ವೆಂಕಟ್: ನನ್ನ ಸೇನೆ ಗೊತ್ತಲ್ಲ. ನನ್ನ ಬಗ್ಗೆ ಒಂದ್ ಮಾತ್ ಅಂದ್ರೂ ಅಟ್ಟಿಸ್ಕೊಂಡು ಬರ್ತದೆ.
ಪ್ರಥಮ್: ಪಾಪ! ಅಟ್ಟಿಸ್ಕೊಂಡ್ ಬರ್ತಾನೇ ಇರಬೇಕಾಗತ್ತೆ ಅದು. ಯಾಕೆಂದ್ರೆ ಎಲ್ಲರೂ ಏನೋ ಒಂದ್ ಅಂತಾನೇ ಇರ್ತಾರಲ್ಲ!
ವೆಂಕಟ್: ಬಿಗ್‌ಬಾಸಲ್ಲಿ ಕಾಸ್ ಬಂತಲ್ಲ, ಅದನ್ನ ಯಾರಿಗೋ ಕೊಡ್ತೀನಿ ಅಂದಿದ್ದೆ. ಕೊಟ್ಯಾ!
ಪ್ರಥಮ್: ನಾನು ಹೇಳಲ್ಲ..
ವೆಂಕಟ್: ಯಾಕ್ ಹೇಳಲ್ಲ.. ಹೇಳು..
ಪ್ರಥಮ್: ಹೇಳಲ್ಲ.. ಅದ್ರೆ ಹೇಳಲ್ಲ..
ವೆಂಕಟ್: ಅಂದ್ರೆ ನೀನು ಯಾರಿಗೂ ಕಾಸು ಕೊಟ್ಟಿಲ್ಲ.
ಪ್ರಥಮ್: ನನ್ ಮಗಂದ್. ಕೊಟ್ಟಿಲ್ಲ ಅಂದರೆ ಖಂಡಿಸ್ತೀನಿ.
ವೆಂಕಟ್: ಮತ್ತೆ ಕೊಟ್ಟಿದ್ದೀನಿ ಅಂತ ಎದೆ ಮುಟ್ಕೊಂಡು ಹೇಳು.
ಪ್ರಥಮ್: ಏನ್ ಮುಟ್ಕೊಂಡು ಹೇಳಲ್ಲ. ನಮ್ಮಪ್ಪ ಹೇಳವ್ರೆ, ಬಲಗೈ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಅಂತ.
ವೆಂಕಟ್: ಹೋಗ್ಲಿ ಬಿಡಪ್ಪ, ಕೊಟ್ಟೋನಿಗಾದ್ರೂ ಗೊತ್ತಾಗಬೇಕಲ್ಲ!
ಪ್ರಥಮ್: ವೆಂ...ಕೂ
ವೆಂಕಟ್: ಪ್ರ...ಥೂ.. ಯಾಕೋ ಲವ್ವು!
ಪ್ರಥಮ್: ಕೊಡೋದು ತಗೊಳ್ಳೋದು ಬಿಟ್ಟು ಬಿಡೋಣ. ನಾವಿಬ್ಬರೂ ಇನ್ನು ಮೇಲೆ ಫ್ರೆಂಡ್ಸ್ ಆಗೋಣ.
ವೆಂಕಟ್: ಆಗ್ ಬಿಟ್ಟು..
ಪ್ರಥಮ್: ಒಟ್ಟಿಗೆ ಪಿಚ್ಚರ್ ಮಾಡೋಣ. ಕನ್ನಡದಲ್ಲೂ ಮಲ್ಟಿಸ್ಟಾರ್ ಪಿಚ್ಚರ್ ಬರತ್ತೆ ಅಂತ ತೋರಿಸೋಣ.
ವೆಂಕಟ್: ಮಲ್ಟಿಸ್ಟಾರಾ? ಇನ್ನೊಬ್ಬ ಯಾರು?
ಪ್ರಥಮ್: ನೀನೇ ಕಣೋ.
ವೆಂಕಟ್: ನಾನು ಗೊತ್ತು. ಇನ್ನೊಬ್ಬ ಯಾರು.
ಪ್ರಥಮ್: ನಾನೇ..
ವೆಂಕಟ್: ನನ್ ಎಕ್ಕಡ.
ಪ್ರಥಮ್: ಅದನ್ನ ವಿಲನ್ ಮಾಡೋಣ. ಒಂದ್ ಸೀನಲ್ಲಿ ವಿಲನ್ ನಿನ್ ಕಪಾಳಕ್ಕೆ ಬಾರಿಸ್ತಾನೆ!
ವೆಂಕಟ್: ನನ್ ಮಗಂದ್..
ಪ್ರಥಮ್: ಅವನಿಗೂ ಬಾರಿಸ್ತಾನೆ!
ವೆಂಕಟ್: ನೋಡೋ, ನಾವಿಬ್ರೂ ಒಂದೇ ದೇಹ, ಎರಡು ಜೀವ.
ಪ್ರಥಮ್: ಥೂ ನಿನ್ನ, ಕರೆಕ್ಟಾಗಿ ಹೇಳೋ ಎರಡು ದೇಹ, ಒಂದೇ ಜೀವ.
ವೆಂಕಟ್: ಎಲ್ಲಾ ಒಂದೇ, ನೋಡೋ ನಮ್ ಸ್ಟಾರ್'ಗಳೆಲ್ಲ ಕಿತ್ತಾಡ್'ಕೊಂಡು ಮಾರ್ಕೆಟ್ ಕಳ್ಕೋತವ್ರೆ. ನಾವು ಒಗ್ಗಟ್ಟಾಗಿ ನಿಂತ್ಕೋಬೇಕು. ನನ್ನ ಪಿಚ್ಚರ್‌ಗೆ ನೀನು ಸ್ಟಾರ್ ಕಟ್ಟು, ನಿನ್ನ ಪಿಚ್ಚರ್ ಬಂದ್ರೆ ನಾನು ಸ್ಟಾರ್ ಕಟ್ತೀನಿ. ನಂಗೆ ನೀನು ಹಾಲು ಹುಯ್ಯಿ, ನಾನು ನಿಂಗೆ ಹಾಲು ಹುಯ್ತೀನಿ. ನನ್ನ ಪಿಚ್ಚರ್‌ಗೆ ನೀನು ಹಾಡು, ನಿನ್ನ ಪಿಚ್ಚರ್ ಆಡಿಯೋ ನಾನ್ ರಿಲೀಸ್ ಮಾಡ್ತೀನಿ.
ಪ್ರಥಮ್: ನನ್ ಪಿಚ್ಚರ್ ನೀನ್ ನೋಡು. ನಿನ್ ಪಿಚ್ಚರ್ ನಾನ್ ನೋಡ್ತೀನಿ! ನಾವ್ ನಾವೇ ನೋಡ್ಕೊಂಡು ಹಾಯಾಗಿರೋಣ.
ವೆಂಕಟ್: ವೆರಿಗುಡ್ ಗುರೂ. ನಿನಗೆ ನಾನು. ನನಗೆ ನೀನು!
ಪ್ರಥಮ್: ನನಗೆ ನಾನು.. ನಿನಗೆ ನೀನು!
(ಓದುಗರೆ, ಇದು ಏಪ್ರಿಲ್ 1ರ ಫೂಲ್ ಡೇ ದಿನಕ್ಕಾಗಿ ನಾವು ಮಾಡಿದ ತಮಾಷೆಯಷ್ಟೇ..! ಪ್ರಥಮ್ ಮತ್ತು ಹುಚ್ಚ ವೆಂಕಟ್ ಭೇಟಿಯಾದರೆ ಹೇಗಿರಬಹುದು ಎಂದು ಕಲ್ಪಿಸಿ ಬರೆದ ವಿನೋದ ಬರಹವಿದು)
epaper.kannadaprabha.in
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.