70ರ ದಶಕದ ನಟಿಯರ ಮಾದಕ ಫೋಟೋ ಹಾಕಿ ಸನ್ನಿ ಹೇಳುತ್ತಿರುವುದೇನು?

Published : Dec 21, 2017, 06:02 PM ISTUpdated : Apr 11, 2018, 01:12 PM IST
70ರ ದಶಕದ ನಟಿಯರ ಮಾದಕ ಫೋಟೋ ಹಾಕಿ ಸನ್ನಿ ಹೇಳುತ್ತಿರುವುದೇನು?

ಸಾರಾಂಶ

* ಬೆಂಗಳೂರು ವರ್ಷಾಚರಣೆ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬೇಸರಗೊಂಡ ಸನ್ನಿ ಲಿಯೋನ್. * 70 ದಶಕದ ಬಾಲಿವುಡ್ ನಟಿಯರಂತೆ ನಾನೂ ಎಂದು ಹೇಳುವ ಸ್ಟೇಟಸ್ ಹಾಕಿದ ಬಾಲಿವುಡ್ ನಟಿ. * ನನ್ನಿಂದ ಭಾರತೀಯ ಸಂಸ್ಕೃತಿಗೆ ಆಗಿಲ್ಲ ಧಕ್ಕೆ ಎನ್ನುತ್ತಿದ್ದಾರಾ ಈ ಕಲಾವಿದೆ?

ಬೆಂಗಳೂರು: ನಗರದಲ್ಲಿ ಆಯೋಜನೆಗೊಂಡ ಹೊಸ ವರ್ಷಾಚರಣೆ ಕಾರ್ಯಕ್ರಮವನ್ನು ರದ್ದುಗೊಳಿಸಿದ ಬಾಲಿವುಡ್ ಮಾದಕ ನಟಿ ಸನ್ನಿ ಲಿಯೋನ್, ತುಸು ಡಿಸ್ಟರ್ಬ್ ಆದಂತೆ ಕಾಣಿಸುತ್ತಿದೆ. ತಮಗೆ 70 ದಶಕದ ನಟಿಯರೇ ಸ್ಫೂರ್ತಿ ಎನ್ನುವ ಮೂಲಕ ಭಾರತೀಯ ಸಂಸ್ಕೃತಿಗೆ ಧಕ್ಕೆ ತಂದಿಲ್ಲವೆಂದು ಸೂಚ್ಯವಾಗಿ ಹೇಳಿದಂತಿದೆ.

 ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಳ್ಳಲು ಸನ್ನಿ ನಗರಕ್ಕೆ ಆಗಮಿಸುವ ಸಂಬಂಧವಾಗಿ, ಕನ್ನಡ ಪರ ಸಂಘಟನೆಗಳು ರೊಚ್ಚಿಗೆದ್ದಿದ್ದು, ಆಕೆ ಆಗಮನದಿಂದ ನಾಡಿನ ಸಂಸ್ಕೃತಿಗೆ ಧಕ್ಕೆಯಾಗಲಿವೆ ಎಂದು ಆರೋಪಿಸಿದ್ದವು. ಈ ಹಿನ್ನೆಲೆಯಲ್ಲಿ ಬೇಸರಗೊಂಡ ಸನ್ನಿ, 'ಸುರಕ್ಷತೆ ಮುಖ್ಯ, ನಾನು ಬೆಂಗಳೂರಿಗೆ ಬರೋಲ್ಲ,' ಎಂದು ಟ್ಟೀಟ್ ಮಾಡಿದ್ದರು.

ಸನ್ನಿ ಕನ್ನಡತಿಯೂ ಅಲ್ಲ, ಭಾರತೀಯಳೂ ಅಲ್ಲವೆಂದು ಹೀಯಾಳಿಸಿದ್ದ ಕನ್ನಡಿಗರ ಆಕ್ರೋಶಕ್ಕೆ ನೊಂದ ಸನ್ನಿ, 70ರ ಬಾಲಿವುಡ್ ನಟಿಯರ ಮಾದಕ ಫೋಟೋಗಳನ್ನು ಹಾಕುವ ಮೂಲಕ, ಭಾರತೀಯ ನಟಿಯರೂ ತುಂಡುಡುಗೆ ತೊಡಲು ಹಿಂದೇಟು ಹಾಕುತ್ತಿರಲಿಲ್ಲವೆಂದು ಸೂಚ್ಯವಾಗಿ ಹೇಳಿದ್ದಾರೆಂದು ಎನಿಸುತ್ತಿದೆ. 'ಶರ್ಮಿಳಾ ಠಾಗೋರ್, ಮಂದಾಕಿನಿ, ಡಿಂಪಲ್ ಕಪಾಡಿಯಾ, ಜೀನತ್ ಅಮಾನ್ ಅವರೇ ನನಗೆ ಸ್ಫೂರ್ತಿ,' ಎಂದಿದ್ದಾರೆ ಸನ್ನಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ದೃಷ್ಟಿಬೊಟ್ಟು' ಮೂಲಕ ಕನ್ನಡಿಗರ ಮನಗೆದ್ದ ಅರ್ಪಿತಾ ಮೋಹಿತೆ ಈಗ ತೆಲುಗು ಸೀರಿಯಲ್ ನಾಯಕಿ
ಕನ್ನಡ ಇಂಡಸ್ಟ್ರಿಗೆ ಪ್ರಾಣ ಕೊಟ್ಟರೂ ಚೆನ್ನಾಗಿ ನೋಡಿಕೊಂಡಿಲ್ಲ: ಕಣ್ಣೀರು ಹಾಕಿದ ತುಪ್ಪದ ಬೆಡಗಿ ರಾಗಿಣಿ ಹೇಳಿದ್ದೇನು?