ಹೊಸ ಚಿತ್ರಕ್ಕೆ ಶೂಟಿಂಗ್ ಆರಂಭಿಸಿದ ರಾಧಿಕಾ ಪಂಡಿತ್

Published : Dec 21, 2017, 04:43 PM ISTUpdated : Apr 11, 2018, 12:55 PM IST
ಹೊಸ ಚಿತ್ರಕ್ಕೆ ಶೂಟಿಂಗ್ ಆರಂಭಿಸಿದ ರಾಧಿಕಾ ಪಂಡಿತ್

ಸಾರಾಂಶ

* ರಾಕ್‌ಲೈನ್ ನಿರ್ಮಾಣದ ಚಿತ್ರದಲ್ಲಿ ನಟಿಸುತ್ತಿರುವ ರಾಧಿಕಾ ಪಂಡಿತ್ * ಯಶ್ ಅವರನ್ನು ವರಿಸಿದ ನಂತರ ರಾಧಿಕಾ ನಟಿಸುತ್ತಿರುವ ಮೊದಲ ಚಿತ್ರವಿದು * ಮಣಿರತ್ನಮ್ ಅವರೊಂದಿಗೆ ಕಾರ್ಯನಿರ್ವಹಿಸಿರುವ ಪ್ರಿಯಾ ಈ ಚಿತ್ರದ ನಿರ್ದೇಶಕರು. *ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ಈ ಚಿತ್ರದ ನಟ

ಬೆಂಗಳೂರು: ಮದುವೆಯಾದ ನಂತರ ಇದೇ ಮೊದಲ ಬಾರಿಗೆ ರಾಧಿಕಾ ಪಂಡಿತ್ ನಟಿಸುತ್ತಿರುವ ರಾಕ್‌ಲೈನ್ ನಿರ್ಮಾಣದ ಚಿತ್ರದ ಚಿತ್ರೀಕರಣ ಆರಂಭಗೊಂಡಿದೆ. ಮೊದಲ ದಿನದ ಶೂಟಿಂಗ್‌ನಲ್ಲಿ ಪಾಲ್ಗೊಂಡ ರಾಧಿಕಾ, ತಮ್ಮ ಫೇಸ್‌ಬುಕ್ ಪೇಜಿನಲ್ಲಿ ಪೋಸ್ಟ್ ಹಾಕಿದ್ದು, ಎಲ್ಲರಿಂದ ಶುಭ ಹಾರೈಕೆಗಳು ಬೇಕೆಂದು ಹೇಳಿದ್ದಾರೆ.

ಇನ್ನೂ ಹೆಸರಿಡದ ಈ ಚಿತ್ರದಲ್ಲಿ ರಾಧಿಕಾ, 'ರಂಗಿತರಂಗ' ಖ್ಯಾತಿಯ ನಿರೂಪ್ ಭಂಡಾರಿಯೊಂದಿಗೆ ತೆರೆಯನ್ನು ಹಂಚಿಕೊಳ್ಳಲ್ಲಿದ್ದಾರೆ.

ತಮಿಳು ಚಿತ್ರಗಳಲ್ಲಿ ಮಣಿರತ್ನಂ ಅವರಿಗೆ ಸಹಾಯಕರಾಗಿ ಕಾರ್ಯ ನಿರ್ವಹಿಸಿರುವ ವಿ. ಪ್ರಿಯಾ ಅವರು ಈಗಾಗಲೇ ಮೂರು ದೊಡ್ಡ ಬಜೆಟ್‌ವುಳ್ಳ ತಮಿಳು ಚಿತ್ರಗಳನ್ನು ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಕನ್ನಡ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಇದೀಗ ತಾನೇ ತಮ್ಮ ಮೊದಲ ವರ್ಷದ ಮದುವೆ ವಾರ್ಷಿಕೋತ್ಸವನ್ನು ಆಚರಿಸಿಕೊಂಡು ಮರಳಿರುವ ರಾಧಿಕಾ, ಸ್ವಲ್ಪ ದಿನಗಳ ಬ್ರೇಕ್ ನಂತರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೌಟುಂಬಿಕ ಮನೋರಂಜನಾ ಚಿತ್ರವೆಂದು ಹೇಳುತ್ತಿರುವ ಈ ಸಿನಿಮಾದ ಬಗ್ಗೆ ವೀಕ್ಷಕರು ಅಪಾರ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ.

ರಾಜರಥ ಚಿತ್ರೀಕರಣದ ವೇಳೆ ಗಾಯಗೊಂಡ ನಿರೂಪ್ ಸುಧಾರಿಸಿಕೊಂಡಿದ್ದು, ಈ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!