
1. ನಾವೆಲ್ಲ ಏನೇನೋ ಅಂದುಕೊಳ್ಳುತ್ತೇವೆ. ಆದ್ರೆ ಅಂದುಕೊಂಡಂತೆ ಎಲ್ಲವೂ ಆಗೋದಿಲ್ಲ. ಎಲ್ಲಕ್ಕೂ ಒಂದು ಕಾಲ, ಘಳಿಗೆ ಅನ್ನೋದು ಇದ್ದೇ ಇರುತ್ತೆ. ಆ ಸಮಯ ಬಂದಾಗಲೇ ಅವೆಲ್ಲವೂ ಸುಸೂತ್ರವಾಗಿ ನಡೆದುಹೋಗುತ್ತವೆ. ಈ ಚಿತ್ರದ ವಿಚಾರದಲ್ಲೂ ಅದೇ ಆಗಿದೆ. ನಿರ್ಮಾಪ ಎಂ.ಎನ್. ಕುಮಾರ್, ನಿರ್ದೇಶಕ ಎ. ಹರ್ಷ ಮತ್ತು ನಾನು ಒಂದಾಗಿ ಈ ಸಿನಿಮಾ ಮಾಡುತ್ತಿದ್ದೇವೆ ಅಂತ ಎರಡು ವರ್ಷಗಳ ಹಿಂದೆಯೇ ಸುದ್ದಿ ಆಗಿತ್ತು. ಆಗ ನಾವೆಲ್ಲ ಒಂದೆಡೆ ಕುಳಿತು ಮಾತನಾಡಿದ್ದು ನಿಜ. ಆದರೆ, ಆಗ ನಾವೆಲ್ಲ ನಮ್ಮದೇ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿ ಆಗಿದ್ದೆವು. ಚಿತ್ರ ಶುರು ಮಾಡುವುದಕ್ಕೆ ವಿಳಂಬ ಆಯಿತು. ಈ ವರ್ಷ ಅದಕ್ಕೆ ಕಾಲ ಕೂಡಿ ಬಂತು. ಚಿತ್ರದ ಶೀರ್ಷಿಕೆಯ ಹಾಗೆ ಆ ಅಂಜನೇಯನೇ ಎಲ್ಲವೂ ಕೂಡಿ ಬರುವಂತೆ ಮಾಡಿದ.
2 . ಹರ್ಷ ಮತ್ತು ನನ್ನ ಕಾಂಬಿನೇಷನ್ ಮೊದಲ ಚಿತ್ರವಿದು. ಹಾಗಂತ, ನಾವಿಬ್ಬರೂ ಹೊಸಬರೇನು ಅಲ್ಲ. ಸುಮಾರು 20 ವರ್ಷಗಳ ಸ್ನೇಹಿತರು. ಚಾನೆಲ್’ವೊಂದಕ್ಕೆ ರಿಯಾಲಿಟಿ ಶೋಗೆ ಡ್ಯಾನ್ಸಿಂಗ್ ಟ್ರೈನಿಂಗ್ ಕೊಡುತ್ತಿದ್ದಾಗ ಅವರು ಪರಿಚಯವಾಗಿದ್ದರು. ಕೊರಿಯೋಗ್ರಾಫರ್ ಆದ್ರು. ನನ್ನದೇ ಚಿತ್ರಗಳಲ್ಲಿ ನೃತ್ಯ ನಿರ್ದೇಶನ ಮಾಡುತ್ತಾ ಬಂದರು. ಇಬ್ಬರ ಸ್ನೇಹ ಮತ್ತಷ್ಟು ಗಟ್ಟಿ ಆಯಿತು. ಅಲ್ಲಿಂದಲೇ ಇಬ್ಬರೂ ಸಿನಿಮಾ ಮಾಡುವ ಆಸೆ ಇತ್ತು. ಈ ಚಿತ್ರದೊಂದಿಗೆ ಅದು ಈಡೇರಿದೆ.
3. ಪಾತ್ರಕ್ಕೆ ನನ್ನಿಂದ ಏನೇನೂ ಬೇಕಿತ್ತೋ ಅದೆಲ್ಲವನ್ನು ಹರ್ಷ ತೆಗೆಸಿಕೊಂಡಿದ್ದಾರೆ. ಹರ್ಷ ಏನೇ ಮಾಡಿದ್ರು ನೀಟ್‌ನೆಸ್. ಅವರ ಜತೆಗೆ ಕೆಲಸ ಮಾಡುವುದಕ್ಕೆ ಖುಷಿ ಆಗುತ್ತೆ. ಶೂಟಿಂಗ್ ಎಲ್ಲೂ ಬೋರ್ ಆಗಿಲ್ಲ. ಫುಲ್ ಎಂಜಾಯ್ ಮಾಡುತ್ತಾ ಚಿತ್ರೀಕರಣ ಮಾಡಿದೆವು. ಮೇಕಿಂಗ್ ವಿಚಾರದಲ್ಲಿ ಇದು ಯಾವುದಕ್ಕೂ ಕಮ್ಮಿ ಇಲ್ಲ. ಅದರ ಕ್ರೆಡಿಟ್ ನಿರ್ಮಾಪಕರಾದ ಎಂ.ಎನ್. ಕುಮಾರ್ ಮತ್ತು ನಿರ್ದೇಶಕ ಹರ್ಷ ಅವರಿಗೆ ಸಲ್ಲುತ್ತದೆ.
4. ಇದು ರಿಮೇಕ್. ಆದ್ರೆ ಈ ಚಿತ್ರವನ್ನು ತೆರೆ ಮೇಲೆ ನೋಡಿದಾಗ ಇದೊಂದು ರಿಮೇಕ್ ಚಿತ್ರ ಅಂತ ಯಾರು ಕೂಡ ಖಂಡಿತವಾಗಿಯೂ ಹೇಳೋದಿಲ್ಲ. ಅಷ್ಟೊಂದು ಚೇಂಜಸ್ ಇಲ್ಲಿದೆ. ರಿಮೇಕ್ ಅಂದಾಕ್ಷಣ ಯಥಾವತ್ ಬರಬೇಕು ಅಂತೇನಿಲ್ಲ. ಮೂಲ ಕತೆಗೆ ಧಕ್ಕೆ ಆಗದ ಹಾಗೆ ಇಲ್ಲಿನ ನೇಟಿವಿಟಿಗೆ ಬದಲಾಯಿಸಿಕೊಳ್ಳುವುದರಲ್ಲೂ ಬುದ್ಧಿವಂತಿಕೆ ಬೇಕಾಗುತ್ತೆ. ಹರ್ಷ ಆ ಕೆಲಸ ಮಾಡಿದ್ದಾರೆ. ಮೊದಲು ರಿಮೇಕ್ ಅನ್ನೋ ಅಂಜಿಕೆ ನನ್ನಲ್ಲಿ ಇತ್ತಾದರೂ, ಅದು ಇಲ್ಲಿಗೆ ತಕ್ಕಂತೆ ರಿಚ್ ಆಗಿ ಬಂದಿದ್ದನ್ನು ನೋಡಿದಾಗ ನನಗೂ ಖುಷಿ ಆಗಿದೆ. ಫ್ಯಾಮಿಲಿ ಸೆಂಟಿಮೆಂಟ್ ಈ ಚಿತ್ರದ ಜೀವಾಳ.
5. ಆ್ಯಕ್ಷನ್ ಸೀನ್‌ಗಳಲ್ಲಿ ಮೈನವೀರೆಳುವಂತೆ ಮಾಡಿದ್ದಾರೆ ಸ್ಟಂಟ್ ಮಾಸ್ಟರ್ ರವಿವರ್ಮ. ಕೆಲವೊಮ್ಮೆ ನಾನೇ ಭಯ ಪಟ್ಟಿದ್ದೇನೆ. ಅಷ್ಟು ರಿಯಲಿಸ್ಟಿಕ್ ಸೀನ್‌ಗಳನ್ನು ಸ್ಕ್ರೀನ್‌ಗೆ ತರಲಾಗಿದೆ. ಇನ್ನು ಚಿತ್ರಕ್ಕೆ ‘ಅಂಜನಿಪುತ್ರ’ ಅಂತ ಟೈಟಲ್ ಯಾಕೆ ಇಟ್ಟಿದ್ದೀರಿ ಅಂತಲೂ ಕೆಲವರು ಕೇಳುತ್ತಾರೆ. ಅದಕ್ಕೂ ಇಲ್ಲಿ ಉತ್ತರವಿದೆ. ಚಿತ್ರದ ಹಾಡುಗಳಂತೂ ಸೂಪರ್ ಹಿಟ್. ರವಿ ಬಸ್ರೂರು ಕೆಲಸ ನಿಮಗೆ ಮೆಚ್ಚುಗೆ ಆಗುತ್ತೆ.
6. ಇದು ದೊಡ್ಡ ತಾರಾಗಣದ ಚಿತ್ರ. ರಶ್ಮಿಕಾ ಮಂದಣ್ಣ, ರಮ್ಯಕೃಷ್ಣ , ಹರಿಪ್ರಿಯಾ, ರವಿಶಂಕರ್, ಸಾಧು ಕೋಕಿಲ, ಚಿಕ್ಕಣ್ಣ, ಗಿರೀಶ್, ಮನೋಹರ್, ಮುಖೇಶ್ ತಿವಾರಿ ಹಾಗೂ ಅಖಿಲೇಂದ್ರ ಮಿಶ್ರಾ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಇಲ್ಲಿ ಹಲವರ ಜತೆಗೆ ನಾನು ಅಭಿನಯಿಸಿದ್ದು ಇದೇ ಮೊದಲು.
7. ‘ಕಿರಿಕ್ ಪಾರ್ಟಿ’ ದೊಡ್ಡ ಸಕ್ಸಸ್ ನಂತರ ಸಾಕಷ್ಟು ಜನಪ್ರಿಯತೆ ಪಡೆದ ರಶ್ಮಿಕಾ ಮಂದಣ್ಣ ಜತೆಗೆ ಇದೇ ಮೊದಲು ನಟಿಸುತ್ತಿದ್ದೇನೆ. ನನ್ನ ಅರ್ಧ ವಯಸ್ಸು ಅವರಿಗೆ. ರಿಯಲೀ ವಂಡರ್‌ಫುಲ್.
8. ನನಗಿಲ್ಲಿ ವಿಶೇಷ ಎನಿಸಿದ್ದು ರಮ್ಯ ಕೃಷ್ಣ ಮೇಡಂ. ಅವರನ್ನು ಭೇಟಿ ಮಾಡಿದ್ದು ಇದೇ ಮೊದಲು. ಅವರಂತಹ ದೊಡ್ಡ ನಟಿ ಜತೆಗೆ ಅಭಿನಯಿಸುವ ಅವಕಾಶ. ಅನೇಕ ಬಾರಿ ಹೈದ್ರಾಬಾದ್‌ಗೆ ಹೋದರೂ ಭೇಟಿ ಮಾಡಲು ಆಗಿರಲಿಲ್ಲ. ಅವರಿಂದ ಸಾಕಷ್ಟು ಕಲಿತೆ. ಹಾಗೇ, ಮುಖೇಶ್ ತಿವಾರಿ, ಅಖಿಲೇಂದ್ರ ಮಿಶ್ರಾ ಅಭಿನಯ ಅದ್ಭುತ. ಸಾಧುಕೋಕಿಲ, ರವಿಶಂಕರ್ ಬಗ್ಗೆ ಹೇಳುವುದೇ ಬೇಡ. ಅವರೆಲ್ಲರ ಜತೆಗೆ ನಾನಿದ್ದೇನೆ ಅನ್ನೋದು ಖುಷಿ.
9. ‘ರಾಜಕುಮಾರ’ ಚಿತ್ರಕ್ಕೆ ದೊಡ್ಡ ಸಕ್ಸಸ್ ಕೊಟ್ಟಿದ್ದೀರಿ. ಅದಕ್ಕೆ ನೀವೇ ಕಾರಣರು. ಆ ಚಿತ್ರದ ಸಕ್ಸಸ್ ನನ್ನ ಜವಾಬ್ದಾರಿ ಹೆಚ್ಚಿಸಿದೆ. ಮುಂದೆ ಎಂತಹ ಚಿತ್ರಗಳನ್ನು ಮಾಡಬೇಕು, ಪ್ರೇಕ್ಷಕರನ್ನು ರಂಜಿಸಲು ಕತೆ ಹೇಗಿರಬೇಕು ಅನ್ನೋ ವಿಚಾರದಲ್ಲಿ ನಾನು ಇನ್ನಷ್ಟು ಎಚ್ಚರಿಕೆ ವಹಿಸುವಂತೆ ಮಾಡಿದ್ದೀರಿ. ಆದ್ರೆ ಒಬ್ಬ ನಟನಾಗಿ ನಾನು ಅಂಥದ್ದೇ ಮತ್ತೊಂದು ಚಿತ್ರ ಮಾಡಬೇಕು ಅಂತ ಕೂರುವುದು ಸರಿಯಲ್ಲ. 10 ಈಗ ಒಳ್ಳೆಯ ಸಿನಿಮಾ ಮಾಡ್ಬೇಕು ಎನ್ನುವ ಎಚ್ಚರಿಕೆಯಲ್ಲಿ ಹೊಸ ಕತೆ ಆಯ್ಕೆ ಮಾಡಿಕೊಳ್ಳಬೇಕಿದೆ. ಹೊಸ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ನಾನು ಆಯ್ಕೆ ಮಾಡಿಕೊಂಡ ಚಿತ್ರವಿದು. ರಿಮೇಕ್ ಅನ್ನೋದು ಗೊತ್ತಿದ್ದೇ ಆಯ್ದುಕೊಂಡಿದ್ದೇನೆ. ಆ ಕಾರಣಕ್ಕಾಗಿ ನೀವೆಲ್ಲ ‘ರಾಜಕುಮಾರ’ ಗುಂಗಿನಿಂದ ಹೊರಬಂದು ಈ ಚಿತ್ರವನ್ನು ನೋಡಿ. ಚಿತ್ರ ಇಷ್ಟವಾದರೆ ಇಡೀ ತಂಡದ ಶ್ರಮ ಸಾರ್ಥಕವಾಗುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.