Wink Girl Priya Prakash Varrier: 2018ರಲ್ಲಿ ಕಣ್ಸನ್ನೆಯಿಂದ ನ್ಯಾಷನಲ್ ಕ್ರಶ್ ಆದ ಪ್ರಿಯಾ ಪ್ರಕಾಶ್ ವಾರಿಯರ್, ಈಗ ಏನು ಮಾಡ್ತಿದ್ದಾರೆ ಗೊತ್ತಾ?
ಬೆಂಗಳೂರು: ಅದು 2018, ಮಾಲಿವುಡ್ ಸಿನಿಮಾದವೊಂದರ ಟ್ರೈಲರ್ ತುಣುಕು ಇಡೀ ದೇಶದ ಗಮನ ಸೆಳೆದಿತ್ತು. ಕಣ್ಸನ್ನೆ ಮೂಲಕವೇ 18 ವರ್ಷದ ಮಲಯಾಳಿ ಕುಟ್ಟಿ ಪ್ರಿಯಾ ಪ್ರಕಾಶ್ ವಾರಿಯರ್ ನ್ಯಾಷನಲ್ ಕ್ರಶ್ ಆಗಿದ್ದರು. ಓರು ಆಡಾರ್ ಲವ್ ಸಿನಿಮಾದ ಆ ಒಂದು ಕಣ್ಸನ್ನೆಯ ದೃಶ್ಯ, ಎಲ್ಲಾ ಸಾಮಾಜಿಕ ಜಾಲತಾಣಗಳನ್ನೆಲ್ಲಾ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ರಾಜಕೀಯ ನಾಯಕರಾದ ನರೇಂದ್ರ ಮೋದಿ, ರಾಹುಲ್ ಗಾಂಧಿ ಸೇರಿದಂತೆ ಜಾಗತಿಕ ನಾಯಕರೊಂದಿಗೆ ಪ್ರಿಯಾ ವಿಡಿಯೋ ಸೇರಿಸಿ ಟ್ರೋಲ್ ಮಾಡಲಾಗುತ್ತಿದೆ. ಒಂದೇ ಒಂದು ಕಣ್ಸನ್ನೆಯಿಂದ ಇಡೀ ದೇಶದ ಗಮನ ಸೆಳೆದಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಇಂದು ಏನು ಮಾಡುತ್ತಿದ್ದಾರೆ ಗೊತ್ತಾ? ಆ ಕುರಿತ ವರದಿ ಇಲ್ಲಿದೆ.
ಪ್ರಿಯಾ ಪ್ರಕಾಶ್ ವಾರಿಯರ್ ನಟನೆಯ ಮೊದಲ ಸಿನಿಮಾ ಓರು ಅಡಾರ್ ಲವ್ 2019ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಸ್ಕೂಲ್ ಗರ್ಲ್ ಆಗಿ ಕಾಣಿಸಿಕೊಂಡಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ತನ್ನ ಸಹಪಾಠಿ ಹುಡುಗನೊಂದಿಗೆ ಕಣ್ಸನ್ನೆಯಲ್ಲಿಯೇ ಸಂಭಾಷಣೆ ನಡೆಸುತ್ತಾರೆ. ಈ ಕಣ್ಸನ್ನೆ ಸಂಭಾಷಣೆಯ ನೋಡುಗರನ್ನು ಸೆಳೆದಿತ್ತು. ಈ ಕ್ಲಿಪ್ ಇಂಟರ್‌ನೆಟ್‌ನಲ್ಲಿ ಸುನಾಮಿಯನ್ನೇ ಸೃಷ್ಟಿಸಿತ್ತು.
ಒಂದೆರಡು ಸೆಕೆಂಡ್‌ನ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರು ಯಾರು ಈ ಚೆಲುವೆ ಎಂದು ಗೂಗಲ್‌ನಲ್ಲಿ ಹುಡುಕಾಡಿದ್ದರು. 2018ರಲ್ಲಿ ಈ ಕ್ಲಿಪ್ ರಿಲೀಸ್ ಆಗಿತ್ತು. ಭಾರತದಲ್ಲಿ ಅತಿ ಹೆಚ್ಚು ಹುಡುಕಿದ ವ್ಯಕ್ತಿಗಳಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಹೆಸರು ಸೇರ್ಪಡೆಯಾಯ್ತು. ಓರು ಅಡಾರ್ ಲವ್ ಚಿತ್ರದ ಟೀಸರ್ ಮತ್ತು ಟ್ರೈಲರ್ ದೀರ್ಘ ಸಮಯದವರೆಗೆ ಟ್ರೆಂಡಿಂಗ್ ನಂಬರ್ 1 ಸ್ಥಾನದಲ್ಲಿ ಉಳಿದುಕೊಳ್ಳುವ ಮೂಲಕ ದಾಖಲೆ ಬರೆದಿದ್ದವು. ಇದಾದ ಬಳಿಕ ಪ್ರಿಯಾ ಪ್ರಕಾಶ್ ವಾರಿಯರ್‌ಗೆ ಎಲ್ಲಾ ಭಾಷೆಯ ಸಿನಿಮಾಗಳಿಂದ ಅವಕಾಶಗಳು ಅರಸಿ ಬಂದವು.
ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳಲ್ಲಿ ಅಮೆರಿಕನ್ ಸಿಂಗರ್, ನಟಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಅವರನ್ನ ಸಹ ಪ್ರಿಯಾ ವಾರಿಯರ್ ಹಿಂದಿಕ್ಕಿದ್ದರು. ಇದೇ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ 4ನೇ ಸ್ಥಾನದಲ್ಲಿದ್ದರು. ಸಪ್ನಾ ಚೌಧರಿ ಮತ್ತು ಸೋನಮ್ ಕಪೂರ್ ಪತಿ ಆನಂದ್ ಅಹುಜಾ 3 ಮತ್ತು 5ನೇ ಸ್ಥಾನದಲ್ಲಿದ್ದರು. ಇದೇ ವರ್ಷ ಸೋನಂ ಕಪೂರ್-ಆನಂದ್ ಅಹುಜಾ ಮತ್ತು ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್ ಮದುವೆ ನಡೆದಿದ್ದರೂ ಅವರಗಿಂತ ಪ್ರಿಯಾ ಪ್ರಕಾಶ್ ವಾರಿಯರ್ ಅವರ ವಿಡಿಯೋ, ಸಂದರ್ಶನಗಳು ಟ್ರೆಂಡಿಂಗ್‌ನಲ್ಲಿದ್ದವು. ಪ್ರಿಯಾ ಕಣ್ಸನ್ನೆ ಮಾಡಿದ ಹಾಡಿನ ವಿಡಿಯೋ 2018ರಲ್ಲಿ 110 ಮಿಲಿಯನ್ ವ್ಯೂವ್ ಪಡೆದುಕೊಂಡಿತ್ತು.
ಇದನ್ನೂ ಓದಿ: ಓಮನ್‌ನಲ್ಲಿ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ ಆಚರಣೆ, ಯಾರ ಜೊತೆಗೆ?
ಈಗ ಏನ್ ಮಾಡ್ತಿದ್ದಾರೆ ಪ್ರಿಯಾ?
ಓರು ಅಡಾರ್ ಲವ್ ಚಿತ್ರದ ಬಳಿಕ ಪ್ರಿಯಾ ಪ್ರಕಾಶ್ ವಾರಿಯರ್ ಎಲ್ಲಾ ಭಾಷೆಯ ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ 7 ಮಿಲಿಯನ್‌ಗೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿರುವ ಪ್ರಿಯಾ, 2024ರಲ್ಲಿ ಬಿಡುಗಡೆಯಾದ 'ಯಾರಿಯಾನ್ 2' ಸಿನಿಮಾ ಮೂಲಕ ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ಮಲಯಾಳಂ ಜೊತೆಯಲ್ಲಿಯೇ ತೆಲಗು ಮತ್ತು ತಮಿಳು ಸಿನಿಮಾಗಳಲ್ಲಿಯೂ ಪ್ರಿಯಾ ಕೆಲಸ ಮಾಡುತ್ತಿದ್ದಾರೆ. ಯಶ್ ನಿರ್ಮಾಣದ 'ರಾಮಯಣ' ಸಿನಿಮಾಗೂ ಪ್ರಿಯಾ ಸಹಿ ಮಾಡಿದ್ದಾರೆ. 21ನೇ ಫೆಬ್ರವರಿಯಂದು ಪ್ರಿಯಾ ನಟನೆ 'ವಿಷ್ಣು ಪ್ರಿಯಾ' ಸಿನಿಮಾ ರಿಲೀಸ್ ಅಗಿತ್ತು.
ಇದನ್ನೂ ಓದಿ: 'ನನ್ನ ಜೀವನದಲ್ಲಿ ಏನೇನೋ ಆಯ್ತು, ಇದು ತಂದೆಗೆ ಕಷ್ಟ ಆಯ್ತು'-ನಿವೇದಿತಾ ಗೌಡ ಮಾತು ಕೇಳಿ ರಜತ್ ಕಣ್ಣಲ್ಲೂ ನೀರು...!