ಪ್ರಭಾಸ್ ಅವರೊಂದಿಗಿನ ಬಂಧದ ಬಗ್ಗೆ ಅನುಷ್ಕಾ ಶೆಟ್ಟಿ ಹೇಳಿದ್ದೇನು?

By Suvarna Web Desk  |  First Published Jan 19, 2018, 3:22 PM IST

ಪ್ರಭಾಸ್ ಅವರೊಂದಿಗೆ ಮದುವೆ ವಿಚಾರವಾಗಿ ಈಗ್ಗೆ ಅನೇಕ ದಿನಗಳಿಂದ ಹರಿದಾಡುತ್ತಿರುವ ಗಾಸಿಪ್‌ಗಳಿಗೆ ಅನುಷ್ಕಾ ಶೆಟ್ಟಿ ಹೇಳಿದ್ದೇನು?


'ಬಾಹುಬಲಿ' ಸೇರಿ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಮದುವೆಯಾಗುತ್ತಾರೆಂಬ ಸುದ್ದಿ ಆಗಾಗ ಟಾಲಿವುಡ್ ಸೇರಿ ದೇಶದ ಚಿತ್ರರಂಗದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಹರಿದಾಡುತ್ತಿರುತ್ತದೆ.

ಅದೂ ಅಲ್ಲದೇ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಈ ಜೋಡಿಯ ಆಂಗಿಕ ಭಾಷೆ ನೋಡಿದರೆ, ಇವರಿಬ್ಬರ ಏನೋ ಇದೆ ಎಂದೆನಿಸುವುದು ಸುಳ್ಳಲ್ಲ. ಇವರಿಬ್ಬರೂ ಮದುವೆಯಾದರೆ ಚೆಂದ ಎನ್ನುವುದು ಇವರ ಅನೇಕ ಅಭಿಮಾನಿಗಳ ಅಭಿಪ್ರಾಯವೂ ಹೌದು.

Tap to resize

Latest Videos

ಆದರೆ, ಈ ಊಹಾಪೋಹಗಳಿಗೆ ತೆರೆ ಎಳೆದ ಅನುಷ್ಕಾ ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಪ್ರಭಾಸ್ ಅವರೊಂದಿಗಿನ ಸಂಬಂಧದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.

ಭಾಗಮತಿ ಚಿತ್ರದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿರುವ ಅನುಷ್ಕಾ, 'ನನ್ನ ಹಾಗೂ ಪ್ರಭಾಸ್ ಮದುವೆ ಸಂಬಂಧವಾಗಿ ಸಾಕಷ್ಟು ಸುದ್ದಿಗಳಿವೆ. ಆದರೆ, ನಾವಿಬ್ಬರು ಒಳ್ಳೇಯ ಸ್ನೇಹಿತರೇ ಹೊರತು, ಅದನ್ನು ಮದುವೆಯವರೆಗೂ ತೆಗೆದುಕೊಂಡು ಹೋಗಲು ಇಚ್ಛಿಸುವುದಿಲ್ಲ. ಖಂಡಿತಾ ನಾವಿಬ್ಬರೂ ಮದುವೆಯಾಗುವುದಿಲ್ಲ,' ಎಂದಿದ್ದಾರೆ.

ಈ ತಿಂಗ 26ರಂದು ಅನುಷ್ಕಾ ಅಭಿನಯದ ಭಾಗಮತಿ ತೆರೆ ಕಾಣಲಿದೆ.

click me!