ಕನ್ನಡದ ಕೋಟ್ಯಾಧಿಪತಿ vs ವೀಕೆಂಡ್ ವಿತ್ ರಮೇಶ್: ಶುರುವಾಯ್ತು ಕಿರುತೆರೆ ಪೈಪೋಟಿ ?

Published : Apr 09, 2019, 12:01 PM IST
ಕನ್ನಡದ ಕೋಟ್ಯಾಧಿಪತಿ vs ವೀಕೆಂಡ್ ವಿತ್ ರಮೇಶ್: ಶುರುವಾಯ್ತು ಕಿರುತೆರೆ ಪೈಪೋಟಿ ?

ಸಾರಾಂಶ

ಕಿರುತೆರೆಯ ಅತ್ಯಂತ ಮನೋರಂಜನೆ ಹಾಗೂ ಖ್ಯಾತ ಕಾರ್ಯಕ್ರಮಗಳಾದ ವೀಕೆಂಡ್ ವಿತ್ ರಮೇಶ್ ಹಾಗೂ ಕನ್ನಡದ ಕೋಟ್ಯಾಧಿಪತಿ ಶುರುವಾಗಲು ಸಿದ್ಧವಾಗಿದೆ.

ಜೀ ಕನ್ನಡ ವಾಹಿನಿಯ ಸೆಲೆಬ್ರಿಟಿ ಕಾರ್ಯಕ್ರಮ ‘ವೀಕೆಂಡ್ ವಿತ್ ರಮೇಶ್’ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದು ಮುಂಬರುವ ಸೀಸನ್ ನಲ್ಲಿ ಯಾರೆಲ್ಲಾ ಬರುತ್ತಾರೆ ಎಂಬುದರ ಬಗ್ಗೆ ಎಲ್ಲೂ ರಿವೀಲ್ ಆಗಿಲ್ಲ. ವೀಕೆಂಡ್ ವಿತ್ ರಮೇಶ್ ಮೊದಲ ಅತಿಥಿಯಾಗಿ ವೀರೆಂದ್ರ ಹೆಗ್ಗಡೆ ಬರುವುದು ಖಚಿತವಾಗಿದೆ.

ಮತ್ತೊಂದು ಕಡೆ ಸ್ಟಾರ್ ಸುವರ್ಣ ಮನರಂಜನೆ ವಾಹಿನಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸುವ ಕಾಮನ್ ಮ್ಯಾನ್ ರಿಯಾಲಿಟಿ ಶೋ ‘ಕನ್ನಡದ ಕೋಟ್ಯಾಧಿಪತಿ’ ಶುರುವಾಗುತ್ತಿದೆ.

ಎರಡೂ ಕಾರ್ಯಕ್ರಮಗಳು ಒಟ್ಟಾಗಿ ನಾಲ್ಕನೇ ಸೀಸನ್ ಗೆ ಕಾಲಿಡುತ್ತಿದೆ. ಬೇರೆ ಬೇರೆ ವಾಹಿನಿ ಆದ ಕಾರಣ ಪೈಪೋಟಿ ಹೆಚ್ಚಿರುತ್ತದೆ ಎಂಬ ಮಾತಿದೆ. ಕನ್ನಡ ಕೋಟ್ಯಾಧಿಪತಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತಿದ್ದು ವೀಕೆಂಡ್ ಕಾರ್ಯಕ್ರಮ ಶನಿವಾರ ಹಾಗೂ ಭಾನುವಾರ ಪ್ರಸಾರವಾಗುತ್ತದೆ. ಈ ಎರಡು ಕಾರ್ಯಕ್ರಮ ಪ್ರಸಾರವಾಗುವ ದಿನಾಂಕ ಇನ್ನೂ ನಿಗದಿ ಆಗಿಲ್ಲ.

’ವೀಕೆಂಡ್ ವಿತ್ ರಮೇಶ್’ ಮೊದಲ ಗೆಸ್ಟ್ ಯಾರು ಗೊತ್ತಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?
ಅಬ್ಬಬ್ಬಾ! ಟ್ವಿಸ್ಟ್‌ ಅಂದ್ರೆ ಇದಪ್ಪಾ- ಎದ್ದು ಬಂದ ಸತ್ತ ಸಂಧ್ಯಾ: ಲಾಯರ್‌ ಭಾರ್ಗವಿನೇ ಜೈಲಿಗೆ ಹೋಗ್ತಾಳಾ?