
1. ಹಳ್ಳಿ ಹುಡುಗಿ, ಕಾಲೇಜ್ ಗಲ್‌ರ್, ಪೊಲೀಸ್ ಅಧಿಕಾರಿ, ಲೇಡಿ ಡಾನ್, ಐಟಂ ಡ್ಯಾನ್ಸ್, ಅತಿಥಿ ಪಾತ್ರ ಹೀಗೆ ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲ ರೀತಿಯ ಪಾತ್ರಗಳನ್ನು ಮಾಡಿಕೊಂಡು ಬಂದಿದ್ದೇನೆ. ಒಂದು ರೀತಿಯ ಪಾತ್ರಕ್ಕೆ ನಾನು ಸೀಮಿತಗೊಳ್ಳಲಿಲ್ಲ.
2. ಈ ಎಲ್ಲ ರೀತಿಯ ಪಾತ್ರಗಳನ್ನೂ ನನ್ನನ್ನು ಪ್ರೇಕ್ಷಕರು, ಕನ್ನಡ ಚಿತ್ರರಂಗಕ್ಕೆ ಪ್ರೀತಿಯಿಂದಲೇ ಸ್ವಾಗತಿಸಿ, ಮೆಚ್ಚಿಕೊಂಡಿದೆ. ಪ್ರೇಕ್ಷಕರು ಕೊಟ್ಟಈ ಗೆಲವು, ಚಿತ್ರರಂಗ ಕೊಟ್ಟಅವಕಾಶಗಳಿಂದಲೇ ನಾನು ಈ ಹತ್ತು ವರ್ಷ ಇಷ್ಟುಉತ್ಸಾಹದಿಂದ ಕೆಲಸ ಮಾಡುವುದಕ್ಕೆ ಸಾಧ್ಯವಾಯಿತು.
3. ಒಬ್ಬ ನಟಿ ಚಿತ್ರರಂಗದಲ್ಲಿ ಬಹು ಬೇಡಿಕೆಯ ತಾರೆಯಾಗಿ ಹತ್ತು ವರ್ಷ ಪೂರೈಸುವುದೇ ದೊಡ್ಡ ವಿಷಯ ಎನ್ನುತ್ತಾರೆ. ನನ್ನ ಮಟ್ಟಿಗೆ ಅದು ಸಾಧ್ಯವಾಗಿದೆ. ಈಗ ನನಗೆ ಹೊಸ ರೀತಿಯ ಪಾತ್ರಗಳನ್ನು ಮಾಡುವ ಕನಸು ಮತ್ತು ಆಸೆ ಹುಟ್ಟಿಕೊಂಡಿದೆ.
4. ರೆಗ್ಯೂಲರ್ ಕಮರ್ಷಿಯಲ್ ಚಿತ್ರಗಳಲ್ಲಿ ಬರುವ ಪಾತ್ರಗಳ ಹೊರತಾಗಿರುವ ಕ್ಯಾರೆಕ್ಟರ್, ಕತೆಗಾಗಿ ನಾನು ಎದುರು ನೋಡುತ್ತಿದ್ದೇನೆ. ಇದು ನನ್ನ ಕನಸಿನ ಆಲೋಚನೆಯೂ ಹೌದು.
5. ಮುಖ್ಯವಾಗಿ ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸಬೇಕು. ಜತೆಗೆ ಸ್ಪೋರ್ಟ್ಸ್ ಆಧಾರಿತ ಕತೆಗಳನ್ನು ಒಳಗೊಂಡ ಸಿನಿಮಾಗಳು ಹಾಗೂ ಬಯೋಪಿಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಕನಸು ಇದೆ. ಅಂದರೆ ಬಾಲಿವುಡ್ನಂತೆಯೇ ಕನ್ನಡದಲ್ಲೂ ಚಿರಪರಿಚಿತವಾಗಿರುವ ವ್ಯಕ್ತಿಗಳ ಜೀವನ ಪುಟಗಳನ್ನು ಸಿನಿಮಾ ಮಾಡಿದರೆ ಖಂಡಿತ ಅಂಥ ಚಿತ್ರಗಳಲ್ಲಿ ನಾನು ಕಾಣಿಸಿಕಳ್ಳುವೆ.
6. ಸದ್ಯಕ್ಕೆ ಈಗ ನಾನು ಜೋಗಿ ಪ್ರೇಮ್ ಅವರ ‘ಗಾಂಧಿಗಿರಿ’ ಚಿತ್ರದಲ್ಲಿ ನಟಿಸುತ್ತಿರುವ. ಈ ಚಿತ್ರದ ನಂತರ ಮತ್ತಷ್ಟುಒಳ್ಳೆಯ ಸಿನಿಮಾಗಳು ನನ್ನ ಮುಂದಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.