
ಮೊದಲ ಮೆಟ್ಟಿಲು ಎನ್ನುವಂತೆ ಚಿತ್ರತಂಡ ಮೊನ್ನೆಯಷ್ಟೆಟ್ರೇಲರ್ ಬಿಡುಗಡೆ ಮಾಡಿತು. ಮಧು ಬಾಲ, ಸುಧಾರಾಣಿ, ಪ್ರಮೋದ್, ಜಹಾಂಗೀರ್, ಹಿತಾ ಚಂದ್ರಶೇಖರ್ ಹೀಗೆ ಹಲವು ಕಲಾವಿದರ ದಂಡು ಈ ಚಿತ್ರದಲ್ಲಿದೆ. ಹಾಸ್ಯಕ್ಕೆ ಮಾತ್ರ ಸೀಮಿತ, ಡಬಲ್ ಮೀನಿಂಗ್ ಡೈಲಾಗ್ಗಳನ್ನು ಹೇಳುವುದಕ್ಕಷ್ಟೆಜಗ್ಗೇಶ್ ಇದ್ದಾರೆ ಎನ್ನುವವರಿಗೆ ಹೊಸ ರೀತಿಯ ಕಿಕ್ ಕೊಡುವ ಸಿನಿಮಾ ಇದು. ಅಂಥದ್ದೊಂದು ಕತೆ ಚಿತ್ರಲ್ಲಿದೆಯಂತೆ. ‘ಇದು ಹೊಸ ತಂಡದ, ಹೊಸ ರೀತಿಯ ಸಿನಿಮಾ. ವಿಶಾಲ ಹೃದಯದಿಂದ ಹೊಸಬರ ಚಿತ್ರಗಳನ್ನು ಪೋ›ತ್ಸಾಸಬೇಕು. ಇದರಿಂದ ಹೊಸ ಕಲಾವಿದ ಹುಟ್ಟಿಕೊಳ್ಳುತ್ತಾರೆ. ಚಿತ್ರರಂಗದಲ್ಲಿ ಕೆಲವೇ ಸ್ಟಾರ್ಗಳು ಇದ್ದಾರೆ. ಕೆಲವರನ್ನು ನಂಬಿ ಚಿತ್ರರಂಗ ನಡೆಯಲ್ಲ. ಈ ಕಾರಣಕ್ಕೆ ಇಂಥ ಚಿತ್ರಗಳನ್ನು ಜನ ನೋಡಬೇಕು’ ಎಂದರು ಜಗ್ಗೇಶ್.
ಕಿರುತೆರೆಯಲ್ಲಿ ಹೆಸರು ಮಾಡಿರುವ ರಮೇಶ್ ಇಂದಿರಾ ಹಾಗೂ ಶ್ರುತಿ ನಾಯ್ಡು ಅವರಿಗೆ ಹಿರಿತೆರೆ ಪಯಣ ಹೊಸದು. ಆದರೂ ಒಳ್ಳೆಯ ಚಿತ್ರ ಮಾಡಿರುವ ಸಂತಸದಲ್ಲಿದ್ದರು ಅವರು. ‘ಸಂಬಂದಗಳ ಮೇಲೆ ಬದುಕು ಸಾಗಲಿದೆ. ಆ ಸಂಬಂಧಗಳು ದೂರವಾದ ಮೇಲೆ ಏನಾಗುತ್ತದೆ. ಕಥನಾಯಕನ ಬಳಿ ಪ್ರೀಮಿಯರ್ ಪದ್ಮಿನಿ ಕಾರು ಇರುತ್ತದೆ. ಸೆಂಟಿಮೆಂಟ್ ಸಲುವಾಗಿ ಹೊಸ ಕಾರನ್ನು ಖರೀದಿಸದೆ ಅದರಲ್ಲೇ ಜೀವನ ಸಾಗಿಸುತ್ತಿರುತ್ತಾನೆ. ಎಲ್ಲಾ ಇದ್ದರೂ ಏನು ಇಲ್ಲದಂತೆ ಕೊರಗುತ್ತಾ ಇರುವುದು. ಅದೆಲ್ಲಾವನ್ನು ಬದಿಗಿಟ್ಟು ಇರುವುದರಲ್ಲೆ ಸುಖ ಕಂಡುಕೊಂಡರೆ, ಬಾಳು ಬಂಗಾರವಾಗಿರುತ್ತದೆ. ಎನ್ನುವ ಕತೆ ಈ ಚಿತ್ರದಲ್ಲಿದೆ’ ಎಂದು ಚಿತ್ರದ ಕುರಿತು ಹೇಳಿಕೊಂಡಿದ್ದು ನಿರ್ದೇಶಕರು. ಕಾರು ಚಾಲಕನಾಗಿ ಕಾಣಿಸಿಕೊಂಡಿರುವ ಪ್ರಮೋದ್ ತುಂಬಾ ಚೆನ್ನಾಗಿ ನಟಿಸಿದ್ದಾರಂತೆ. ಮದ್ಯಮ ವರ್ಗದ ಸಂಭ್ರಮಗಳೇ ಈ ಸಿನಿಮಾ ತಳಪಾಯ. ಪ್ರತಿ ದೃಶ್ಯಗಳು ನೋಡುಗರಿಗೆ ಅವರದೇ ರೀತಿಯಲ್ಲಿ ಸಂದೇಶ ಇರುವಂತೆ ಭಾಸವಾಗುತ್ತದಂತಂತೆ. ಈ ಸಿನಿಮಾ ಎಲ್ಲ ಪ್ರೇಕ್ಷಕ ವರ್ಗಕ್ಕೆ ತಲುಪುತ್ತದೆ ಎಂಬ ನಂಬಿಕೆ ವ್ಯಕ್ತಪಡಿಸಿದರು ಶ್ರುತಿ ನಾಯ್ಡು. ಸಂಗೀತ ಅರ್ಜುನ್‌ಜನ್ಯಾ, ಅದ್ವೈತ್ ಗುರುಮೂರ್ತಿ ಕ್ಯಾಮೆರಾ ಚಿತ್ರಕ್ಕಿದೆ. ಹಿತಾ ಚಂದ್ರಶೇಖರ್ ಅವರು ಇಲ್ಲಿ ನ್ಯೂ ಜನರೇಷನ್ ಅನ್ನು ಪ್ರತಿನಿಧಿಸುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರೀಮಿಯರ್ ಪದ್ಮಿನಿ’ ಕಾರ್ ಕ್ರೇಜ್ ಗೆ ಬೆರಗಾದ ದಚ್ಚು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.