ನಟ ವಿವೇಕ್ ಒಬೆರಾಯ್ ಭಾವುಕ, ಕ್ಯಾನ್ಸರ್ ವಿರುದ್ದ ಹೋರಾಡಿ ಗೆದ್ದ ದತ್ತು ಪುತ್ರಿ ಈಗ ಸಿನಿಮಾ ನಾಯಕಿ

Published : Sep 23, 2026, 05:48 PM IST
vivek oberoi

ಸಾರಾಂಶ

ಬಾಲಿವುಡ್ ನಟ ವಿವೇಕ್ ಒಬೆರಾಯ್ ಭಾವುಕರಾಗಿದ್ದಾರೆ. ನಟನ ದತ್ತು ಪುತ್ರಿ ಸಿನಿಮಾ ನಾಯಕಿಯಾಗಿ ಬಡ್ತಿ ಪಡೆದಿದ್ದಾರೆ. ಮೊದಲ ಸಿನಿಮಾಗೆ ಸಹಿ ಹಾಕಿದ್ದಾರೆ. ನೇಪಾಳಿ ಸಿನಿಮಾಗೆ ದತ್ತು ಪುತ್ರಿ ಸಹಿ ಹಾಕಿದ್ದಾರೆ. ಹಲವರಿಗೆ ಗೊತ್ತಿಲ್ಲದ ವಿವೇಕ್ ಒಬೆರಾಯ ದತ್ತು ಪುತ್ರಿಯ ಡಿಟೇಲ್ಸ್ ಇಲ್ಲಿದೆ.

ನವದೆಹಲಿ (ಸೆ.23) ಬಾಲಿವುಡ್ ನಟ ವಿವೇಕ್ ಒಬೆರಾಯ್ ಹಾಗೂ ಪತ್ನಿ ಪ್ರಿಯಾಂಕಾ ಆಳ್ವ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 13 ವರ್ಷದ ವಿಹಾನ್ ಒಬೆರಾಯ್, 11 ವರ್ಷದ ಮಗಳು ಅಮೇಯಾ ನಿರ್ವಾನ ಒಬೆರಾಯ್ ಕುರಿತು ಎಲ್ಲರಿಗೂ ತಿಳಿದಿದೆ. ಆದರೆ ಈ ಇಬ್ಬರು ಮಕ್ಕಳನ್ನು ಹೊರತುಪಡಿಸಿ ವಿವೇಕ್ ಒಬೆರಾಯ್‌ಗೆ ದತ್ತು ಪುತ್ರಿಯೊಬ್ಬಳಿದ್ದಾಳೆ. ಆಕೆ ಹೆಸರು ಸಹಾರ ಶಾ, 22 ವರ್ಷದ ಸಹಾರಾ ಶಾ ಇದೀಗ ಮೊದಲ ಸಿನಿಮಾಗೆ ನಾಯಕಿಯಾಗಿ ಸಹಿ ಹಾಕಿದ್ದಾರೆ. ನೇಪಾಳಿ ಸಿನಿಮಾದಲ್ಲಿ ಸಹಾರಾ ಶಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಎರಡೂವರೆ ವರ್ಷವಿದ್ದಾಗ ದತ್ತು ಪಡೆದ ವಿವೇಕ್

ಸಹರಾ ಶಾಗೆ ಎರಡೂವರೆ ವರ್ಷವಿದ್ದಾಗ ವಿವೇಕ್ ಒಬೆರಾಯ್ ದತ್ತು ಪಡೆದಿದ್ದಾರೆ. ಈಕೆ ಪುಟ್ಟ ಕಂದಮ್ಮವಿರುವಾಗಲೇ ಕ್ಯಾನ್ಸರ್‌ನಿಂದ ಬಳಲಿದ್ದಳು. ಹೀಗಾಗಿ ಈಕೆಯನ್ನು ವಿವೇಕ್ ಒಬೆರಾಯ್ ದತ್ತು ಪಡೆದಿದ್ದರು. ಈಕೆ ಮಾತ್ರವಲ್ಲ ಹೀಗೆ ಕ್ಯಾನ್ಸರ್ ಪೀಡಿತ ಹಲವು ಮಕ್ಕಳನ್ನು ವಿವೇಕ್ ಒಬೆರಾಯ್ ದತ್ತು ಪಡೆದು ಸಾಕಿ ಸಲಹಿದ್ದಾರೆ. ಸಹಾರಾ ಶಾಳನ್ನು ದತ್ತು ಪಡೆದು ಆಕೆಗೆ ಚಿಕಿತ್ಸೆ ಸೇರಿದಂತೆ ಎಲ್ಲಾ ಖರ್ಚು ವೆಚ್ಚಗಳನ್ನು ವಿವೇಕ್ ಒಬೆರಾಯ್ ನೋಡಿಕೊಂಡಿದ್ದಾರೆ.

ಹೊಸ ಬದುಕು, ಹೊಸ ವೃತ್ತಿ

ಖಾಸಗಿ ಎನ್‌ಜಿಒ ಮೂಲಕ ವಿವೇಕ್ ಒಬೆರಾಯ್ ಹಲವು ಮಕ್ಕಳಿಗೆ ನೆರವಾಗಿದ್ದಾರೆ. ಸಹಾರಾ ಶಾ ಬಡ ಕುಟುಂಬದ ಹೆಣ್ಣುಮಗಳು. ಆಕೆಯ ಕ್ಯಾನ್ಸರ್ ರೋಗ ತೀವ್ರಗೊಂಡಿತ್ತು. ಪೋಷಕರು ಅಸಾಹಯಕರಾಗಿದ್ದರು. ಎನ್‌ಜಿಒ ಮೂಲಕ ದತ್ತು ಪಡೆದ ವಿವೇಕ್ ಒಬೆರಾಯ ಆಕೆಯ ಚಿಕಿತ್ಸೆ, ವಿದ್ಯಾಭ್ಯಾಸ ಸೇರಿದಂತೆ ಎಲ್ಲಾ ಖರ್ಚು ವೆಚ್ಚ ನೋಡಿಕೊಂಡಿದ್ದಾರೆ. ಈ ಪುಟ್ಟ ಕಂದಮ್ಮ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದಿದ್ದಾಳೆ. ಇದರ ಜೊತೆಗೆ ವಿದ್ಯಾಭ್ಯಾಸ ಮುಂದುವರಿಸಿದ ಸಹಾರಾ ಶಾ ಇದೀಗ ಹೊಸ ವೃತ್ತಿಗೆ ಕಾಲಿಟ್ಟಿದ್ದಾಳೆ.

ನೇಪಾಳಿ ಸಿನಿಮಾಗೆ ನಾಯಕಿ

ಸಹರಾ ಶಾ ಇದೀಗ ನೇಪಾಳಿ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಕುರಿತ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಕುರಿತು ಸಂತಸ ಹಂಚಿಕೊಂಡಿದ್ದಾರೆ. ಕ್ಯಾನ್ಸರ್ ರೋಸ್ ಡೇ ಕಾರ್ಯಕ್ರಮದಲ್ಲಿ ವಿವೇಕ್ ಒಬೆರಾಯ್ ಅತಿಥಿಯಾಗಿ ಪಾಲ್ಗೊಂಡಿದ್ದರು. ಇದೇ ಕಾರ್ಯಕ್ರಮದಲ್ಲಿ ಸಹಾರಾ ಶಾ ತಮ್ಮ ಸಂಚಸ ಹಂಚಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಸಹಾರಾ ಶಾ, ನಾನು ಚಿಕ್ಕಂದಿನಿಂದಲೂ ನಿಮ್ಮ ನೋಡಿ ಬೆಳೆದಿದ್ದೇನೆ. ನಿಮ್ಮ ನೆರವು, ನಿಮ್ಮ ಪ್ರೋತ್ಸಾಹದಿಂದ ಇಲ್ಲೀವರೆಗೂ ಬಂದಿದ್ದೇನೆ. ನಿಮ್ಮ ದಾರಿಯಲ್ಲಿ ನಡೆಯಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ. ಮುಂದಿನ ವರ್ಷ ನೇಪಾಳಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ಸಹಾರಾ ಶಾ ಹೇಳಿದ್ದಾರೆ.

ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹದಿಂದ ನನಗೆ ಸಾಧ್ಯವಾಗಿದೆ. ಸಾಹಾರಾ ಮಾತುಗಳಿಂದ ವಿವೇಕ್ ಒಬೆರಾಯ್ ಭಾವುಕರಾಗಿದ್ದಾರೆ. ಕಣ್ಣಾಲಿ ತುಂಬಿಬಂದಿತ್ತು. ಇದೇ ವೇಳೆ ಮಾತನಾಡಿದ ವಿವೇಕ್ ಒಬೆರಾಯ್, ನನಗೆ ಅತೀವ ಸಂತಸವಾಗಿದೆ. ಕೀಮೋಥೆರಪಿ ಪಡೆಯುತ್ತಿದ್ದ ಪುಟ್ಟ ಸಹಾರಾಳನ್ನು ನಾನು ನೋಡಿದ್ದೇನೆ. ಎರಡುವರೆ ವರ್ಷದಲ್ಲಿ ಪುಟ್ಟ ಕಂದಮ್ಮನ ನೋವು ತೀವ್ರ ಸಂಕಟಪಡುವಂತೆ ಮಾಡಿತ್ತು. ಆದರೆ ಇಂದು ಆಕೆ ಸಿನಿಮಾ ನಾಯಕಿಯಾಗಿದ್ದಾಳೆ ಎಂದಾಗ ಸಂತಸ ಹೇಳತೀರದು ಎಂದು ವಿವೇಕ್ ಒಬೆರಾಯ್ ಕಣ್ಣೀರು ಒರೆಸುತ್ತಾ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2006 ರಿಂದ 2026 ರವರೆಗೆ! ಕಾದಂಬರಿಯಿಂದ… ಲಕ್ಷ್ಮೀ ನಿವಾಸ… ನಟಿ ಅನಿಕಾ ನಟನಾ ಜರ್ನಿಗೆ 20 ವರ್ಷ
'ಹೃದಯ ಜಾರಿತು ಪ್ರೀತಿ ಉಳಿಯಿತು' ನಾಟಕ ವೇಳೆ ಹೃದಯಾಘಾತ, ರಂಗಮಂಟಪದಲ್ಲೇ ಉಸಿರು ಬಿಟ್ಟ ಕಲಾವಿದ