ಮುಗಿಯದ ವಿಷ್ಣು ಸ್ಮಾರಕ ವಿವಾದ

By Suvarna Web DeskFirst Published Nov 20, 2016, 3:19 PM IST
Highlights

ಸರ್ಕಾರಗುರುತುಮಾಡಿರುವಜಾಗಕೂಡವಿವಾದಸೃಷ್ಟಿಸಿದೆ. ಸರ್ಕಾರಗುರುತುಮಾಡಿದಜಾಗಗೋಮಾಳ. ಮೂರುತಲೆಮಾರಿನಿಂದಕಷಿಮಾಡಿಕೊಂಡುಬಂದಿರುವಹಾಲಾಳುಗ್ರಾಮದನಾರಾಯಣಕುಟುಂಬವಿಷ್ಣುಸ್ಮಾರಕಕ್ಕೆಜಮೀನುನೀಡುವುದಿಲ್ಲಅಂತಪಟ್ಟುಹಿಡ್ದಿದೆ

ಡಾ.ವಿಷ್ಣುವರ್ಧನ್​ ಸ್ಮಾರಕ ವಿವಾದ ಬೆಂಗಳೂರಿನಿಂದ ಮೈಸೂರಿಗೆ ಶಿಫ್ಟ್​ ಆಗಿದೆ. ವಿಷ್ಣು ಸಮಾಧಿಗೆ ಜಾಗ ನೀಡುವ ಸಂಬಂಧ ಬೆಂಗಳೂರಿನ ಅಭಿಮಾನ್​ ಸ್ಟುಡಿಯೋದಲ್ಲಿ ವಿವಾದ ಉಂಟಾದ ಮೇಲೆ ಮೈಸೂರಲ್ಲಿ ಸ್ಮಾರಕ ನಿರ್ಮಾಣಕ್ಕೆ ತೀರ್ಮಾನ ಮಾಡಲಾಯಿತು. ಇದಕ್ಕಾಗಿ ರಾಜ್ಯ ಸರ್ಕಾರ ಹಾಲಾಳು ಗ್ರಾಮದ ಸರ್ವೆ ನಂಬರ್​ 8 ರಲ್ಲಿ 5 ಎಕರೆ ಜಾಗವನ್ನ ಗುರುತಿಸಿದೆ. ಆದ್ರೆ, ಸರ್ಕಾರ ಗುರುತು ಮಾಡಿರುವ ಜಾಗ ಕೂಡ ವಿವಾದ ಸೃಷ್ಟಿಸಿದೆ. ಸರ್ಕಾರ ಗುರುತು ಮಾಡಿದ ಜಾಗ ಗೋಮಾಳ. ಮೂರು ತಲೆಮಾರಿನಿಂದ ಕಷಿ ಮಾಡಿಕೊಂಡು ಬಂದಿರುವ ಹಾಲಾಳು ಗ್ರಾಮದ ನಾರಾಯಣ ಕುಟುಂಬ ವಿಷ್ಣು ಸ್ಮಾರಕಕ್ಕೆ ಜಮೀನು ನೀಡುವುದಿಲ್ಲ ಅಂತ ಪಟ್ಟು ಹಿಡ್ದಿದೆ.. 40 ಸದಸ್ಯರ ಕುಟುಂಬದ ಜೀವನ ನಿರ್ವಹಣೆ ಸರ್ಕಾರ ಗುರುತು ಮಾಡಿರುವ ಭೂಮಿಯಿಂದಲೇ ನಡೀತಿದೆ. ಹಾಗಾಗಿ ಭೂಮಿಯನ್ನು ವಿಷ್ಣು ಸ್ಮಾರಕಕ್ಕೆ ನೀಡುವುದಾದರೆ ನಮ್ಮ ಸಮಾಧಿಯನ್ನೂ ಇಲ್ಲಿಯೇ ಮಾಡಲಿ ಅಂತ ತಮ್ಮ ಅಸಹಾಯಕತೆ ಹೊರ ಹಾಕಿದ್ದಾರೆ.

click me!