
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮದುವೆಯಾಗಿ ಒಂದು ವರ್ಷವಾಗುತ್ತಿದೆ. 2017ರ ಡಿಸೆಂಬರ್ 11ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಮದುವೆಯಾಗಿ ಇನ್ನೂ ಒಂದು ವರ್ಷವಾಗಿಲ್ಲ, ಅಷ್ಟರಲ್ಲೇ ಪರಸ್ಪರ ಜಗಳವಾಡಲಾರಂಭಿಸಿದ್ದಾರೆ. ಗೆಳೆಯರ ಮದುವೆಗೆಂದು ಇಬ್ಬರೂ ಒಟ್ಟಾಗಿ ತೆರಳಿದ್ದಾರೆ. ಆದರೆ ಮದುವೆ ಮಂಟಪಕ್ಕೆ ತಲುಪಿದ ವಿರಾಟ್ ನೇರವಾಗಿ ಮದುಮಗನ ಬಳಿ ಹೋಗಿ 'ಮದುವೆ ಯಾಕಾಗುತ್ತಿದ್ದೀಯಾ?' ಎಂದು ಪ್ರಶ್ನಿಸುತ್ತಾರೆ. ಅಷ್ಟರಲ್ಲಿ ವಧುವಿನ ಬಳಿ ಬಂದ ಅನುಷ್ಕಾ 'ಇನ್ನೊಂದು ಬಾರಿ ಯೋಚಿಸು' ಎನ್ನುತ್ತಾರೆ. ಇದಾದ ಬಳಿಕ ವಿರಾಟ್ ಹಾಗೂ ಅನುಷ್ಕಾ ಪರಸ್ಪರ ಒಬ್ಬರ ಮೇಲೊಬ್ಬರು ಅಪವಾದ ಹೊರಿಸುವುದನ್ನು ಕಾಣಬಹುದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಎರಡನೇ ಭಾಗ ಮಾತ್ರ ಬಹಳಷ್ಟು ಸುಂದರವಾಗಿದೆ.
ಇದನ್ನೂ ಓದಿ: ಕ್ಯಾಪ್ಟನ್ ಕೊಹ್ಲಿಗೇ ಅವಾಜ್ ಹಾಕಿದಳಾ ಹೆಂಡತಿ ಅನುಷ್ಕಾ?
ಸಾಮಾಜಿಕ ಜಾಲತಾಣಗಳಲ್ಲಿ ವಿರುಷ್ಕಾ ದಂಪತಿ ನಟಿಸಿರುವ ಜಾಹೀರಾತಿನ ವಿಡಿಯೋ ಒಂದು ವೈರಲ್ ಅಗುತ್ತಿದೆ. ಇಲ್ಲಿ ಆರಂಭದಲ್ಲಿ ಪರಸ್ಪರ ಅಪವಾದ ಹೊರಿಸುವ ವಿರಾಟ್ ಕೊಹ್ಲಿ, ಅಂತಿಮ ಭಾಗದಲ್ಲಿ ಮಾತ್ರ ತಮ್ಮ ಅಪವಾದಗಳನ್ನು ಬದಿಗಿರಿಸಿ ಅಸಮಾಧಾನದ ನಡುವೆಯೂ ದಾಂಪತ್ಯ ಜೀವನದಲ್ಲಿರುವ ಖುಷಿಯ ವಿಚಾರಗಳನ್ನು ವ್ಯಕ್ತಪಡಿಸುತ್ತಾರೆ. ಬಳಿಕ ತಮ್ಮ ಗೆಳೆಯರಿಗೆ ಮದುವೆ ಮಾಡಿಸುತ್ತಾರೆ.
ವಾಸ್ತವವಾಗಿ ವಿರುಷ್ಕಾ ದಂಪತಿ ಮಾನ್ಯಾವರ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಕಳೆದ ವರ್ಷ ಬಿಡುಗಡೆಯಾಗಿದ್ದ ಜಾಹೀರಾತಿನಲ್ಲಿ ಇಬ್ಬರೂ ಜೊತೆ ಇರುವುದಾಗಿ ಮಾತು ನೀಡಿದ್ದರು. ಈ ಜಾಹೀರಾತು ಬಿಡುಗಡೆಯಾಗಿ ಒಂದು ವರ್ಷವಾಗುತ್ತಿದ್ದಂತೆಯೇ ಮತ್ತೊಂದು ಜಾಹೀರಾತು ಬಿಡುಗಡೆಗೊಳಿಸಿದ ಮಾನ್ಯಾವರ್ ಮದುವೆ ನಂತರದ ಕಥೆಯನ್ನು ನೀಡಿದೆ. ಸದ್ಯ ಈ ಜಾಹೀರಾತಿನ ವಿಡಿಯೋ ಪ್ರೇಕ್ಷಕರ ಮನಗೆದ್ದಿದ್ದು, ವ್ಯಾಪಕವಾಗಿ ಶೇರ್ ಆಗುತ್ತಿದೆ.
ಇದನ್ನೂ ಓದಿ: ತನ್ನ ಪ್ರತಿಮೆ ನೋಡಿ ಬೆಕ್ಕಸ ಬೆರಗಾದ ಅನುಷ್ಕಾ!
ವಿರಾಟ್ ಕೊಹ್ಲಿ, ಅನುಷ್ಕಾ ಇಬ್ಬರೂ ದೀರ್ಘ ಕಾಲದವರೆಗೆ ಉತ್ತಮ ಗೆಳೆಯರಾಗಿದ್ದರು. ಈ ನಡುವೆ ಹಲವಾರು ಬಾರಿ ಇಬ್ಬರ ನಡುವಿನ ಸಂಬಂಧದ ಕುರಿತು ಹಲವಾರು ಪ್ರಶ್ನೆಗಳೆದ್ದಿದ್ದರೂ ಇಬ್ಬರೂ ಅವುಗಳನ್ನು ಸಮರ್ಥವಾಗಿ ಎದುರಿಸಿದ್ದರು. ಅಂತಿಮವಾಗಿ ಮದುವೆಯಾಗುವ ನಿರ್ಧಾರ ಕೈಗೊಂಡ ಈ ಜೋಡಿ 2017ರ ಡಿಸೆಂಬರ್ 11ರಂದು ಮದುವೆಯಾಗಿ ಎಲ್ಲಾ ವದಂತಿಗಳಿಗೆ ಪೂರ್ಣವಿರಾಮವಿಟ್ಟಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.