
ಹಳೇ ಸಿನಿಮಾಗಳ ಶೀರ್ಷಿಕೆಗಳೇ ಮತ್ತೊಂದು ಸಿನಿಮಾಕ್ಕೆ ಟೈಟಲ್ ಆಗುತ್ತಿರುವ ಟ್ರೆಂಡ್‌ನಲ್ಲೀಗ 'ಪ್ರೇಮ ಯುದ್ಧ' ಚಿತ್ರದ ಸರದಿ. ಟೈಗರ್ ಪ್ರಭಾಕರ್, ಅರ್ಜುನ್ ಸರ್ಜಾ ಹಾಗೂ ಜಯಮಾಲ ಅಭಿನಯದಲ್ಲಿ ಹಲವು ವರ್ಷಗಳ ಹಿಂದೆಯೇ ಬಂದು ಹೋಗಿದ್ದ ಈ ಚಿತ್ರದ ಟೈಟಲ್ ಮತ್ತೊಂದು ಚಿತ್ರಕ್ಕೆ ಟೈಟಲ್ ಆಗಿದೆ. ಅಂದ ಹಾಗೆ, ಇದು ಆ ಚಿತ್ರದ ಸೀಕ್ವೆಲ್ ಅಲ್ಲ. ಇವೆರಡಕ್ಕೂ ಯಾವುದೇ ಕಲೆಕ್ಷನ್ ಕೂಡ ಇಲ್ಲ. ಇದೊಂದು ಹೊಸಬರ ಚಿತ್ರ. ಹಾಗೆಯೇ ಹೊಸ ಬಗೆಯ ಕತೆಯಂತೆ.
ಅದರಾಚೆ, ಈ ಚಿತ್ರ ವಿಶೇಷವಾಗಿ ಗಮನ ಸೆಳೆದಿದ್ದು ನಟ ವಿನೋದ್ ಆಳ್ವಾ ಆಗಮನದ ಮೂಲಕ. ಯಾಕಂದ್ರೆ, ನಾಲ್ಕೈದು ವರ್ಷಗಳ ನಂತರ ಬಹುಭಾಷಾ ನಟ ವಿನೋದ್ ಆಳ್ವಾ ಈ ಚಿತ್ರದೊಂದಿಗೆ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಎಂದಿನಂತೆ ಅವರಿಲ್ಲಿ ತಮ್ಮ ನೆಚ್ಚಿನ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.