ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸುತ್ತಿರುವ, ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಚಿತ್ರಕ್ಕೆ ನಾಯಕಿಯಾಗಿ ಅನುಷಾ ರಂಗನಾಥ್ ಆಯ್ಕೆ ಆಗಿದ್ದಾರೆ.
ಬಾಕ್ಸರ್ ಚಿತ್ರದಲ್ಲಿ ಅನುಷಾ ಬ್ಯಾಂಕ್ ಉದ್ಯೋಗಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ನಟನೆಗೆ ಸ್ಕೋಪ್ ಇರುವ ಪಾತ್ರ. ಚಿತ್ರಕ್ಕೆ ಸಾಕಷ್ಟು ತಿರುವು ಕೊಡುವ ಪಾತ್ರವಿದು. ಮೊದಲ ಬಾರಿಗೆ ಇಂಥ ಚಿತ್ರದಲ್ಲಿ ನಟಿಸುತ್ತಿದ್ದೇನೆ’ ಎಂದು ಅನುಷಾ ಹೇಳಿಕೊಳ್ಳುತ್ತಾರೆ.
'ಕೇಸರಿ' ಧರಿಸಿದ ರಾಜ್‌ಕುಮಾರ್ ಮೊಮ್ಮಗ ?
ಕಿರುತೆರೆಯಲ್ಲಿ ನಟಿಸುತ್ತಿದ್ದಾಗಲೇ ನಟ ದರ್ಶನ್ ಅವರ ಮೆಚ್ಚಿನ ನಟಿಯಾಗಿದ್ದವರು. ಆ ನಂತರ ‘ದಿ ಗ್ರೇಟ್ ಸೋಡಾಬುಡ್ಡಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್‌ಗೆ ಬಂದ ನಟಿ. ಆ ನಂತರ ‘ಕೌರವ 2’ ಚಿತ್ರದಲ್ಲಿ ನಟಿಸಿದರು. ಈಗ ತೆರೆಗೆ ಸಜ್ಜಾಗುತ್ತಿರುವ ‘ಅಂದವಾದ’ ಚಿತ್ರದಲ್ಲೂ ನಾಯಕಿ. ತಮ್ಮ ನಟನೆಯ ಮೂರನೇ ಸಿನಿಮಾ ತೆರೆಗೆ ಬರುವ ಮುನ್ನವೇ ವಿನಯ್ ರಾಜ್ ಕುಮಾರ್ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಈ ಚಿತ್ರಕ್ಕೆ ಸಿನಿಮಾಟೋಗ್ರಾಫರ್ ಕರಮ್ ಚಾವ್ಲಾ ನಿರ್ದೇಶಕರು.
ರಗಡ್ ಬಾಕ್ಸರ್ ಆದ ವಿನಯ್ ರಾಜ್‌ಕುಮಾರ್!