ರಗಡ್‌ ಬಾಕ್ಸರ್‌ ಆದ ವಿನಯ್‌ ರಾಜ್‌ಕುಮಾರ್!

By Web DeskFirst Published May 6, 2019, 11:08 AM IST
Highlights

ಬೆಂಗಳೂರಿನ ಸದಾಶಿವನಗರದಲ್ಲಿರುವ ಡಾ ರಾಜ್‌ಕುಮಾರ್ ಮನೆಯಲ್ಲಿ ಸಂಭ್ರಮಗಳು ರಂಗೇರಿವೆ. ಒಂದು ಕಡೆ ರಾಘವೇಂದ್ರ ರಾಜ್ ಕುಮಾರ್ ಕಿರಿಯ ಪುತ್ರ ಯುವರಾಜ್‌ಕುಮಾರ್ ಮದುವೆ ಸಂಭ್ರಮ. ಇದೇ ತಿಂಗಳಲ್ಲಿ ಅವರ ಮದುವೆ. ಹೀಗಾಗಿ ಇಡೀ ಚಿತ್ರರಂಗಕ್ಕೆ ಮದುವೆ ಆಹ್ವಾನ ನೀಡಲಾಗುತ್ತಿದೆ.

ಇದೇ ಮೇ.7ರಂದು ನಟ ವಿನಯ್ ರಾಜ್‌ಕುಮಾರ್ ಅವರ ಹುಟ್ಟು ಹಬ್ಬ. ಇದರ ಜತೆಗೆ ಅವರ ಹೊಸ ಚಿತ್ರದ ಮೊದಲ ಲುಕ್‌ನ ಪೋಸ್ಟರ್ ಬಿಡುಗಡೆ. ಹೀಗೆ ಮೂರು ಸಂಭ್ರಮಗಳಲ್ಲಿ ಮುಳುಗಿರುವ  ದೊಡ್ಡ ಮನೆಯ ಮೂರನೇ ಸಂಭ್ರಮಕ್ಕೆ ಕಾರಣವಾಗಿ ರುವುದು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಹೊಸ ಸಿನಿಮಾ. ಈ ಚಿತ್ರದ ನಾಯಕ ವಿನಯ್ ರಾಜ್ ಕುಮಾರ್.

ಡಾ. ರಾಜ್ ಹೇಗೆ ಸಂಗೀತ ಪ್ರಾಕ್ಟೀಸ್ ಮಾಡ್ತಾ ಇದ್ರು ಗೊತ್ತಾ?

ಇನ್ನೂ ಹೆಸರಿಡದ, ಪುಷ್ಕರ್ ನಿರ್ಮಾಣದ 11ನೇ ಚಿತ್ರ ವಿನಯ್ ನಟನೆಯಲ್ಲಿ ಸೆಟ್ಟೇರುತ್ತಿದೆ. ವಿಶೇಷ ಅಂದರೆ ಈ ಚಿತ್ರದ ಮೂಲಕ ಸಿನಿಮಾಟೋಗ್ರಾಫರ್ ಕರಮ್ ಚಾವ್ಲಾ ಅವರು ನಿರ್ದೇಶಕರಾಗುತ್ತಿದ್ದಾರೆ. ಈಗಾಗಲೇ ‘ಉಳಿದವರು ಕಂಡಂತೆ’, ‘ಕಿರಿಕ್ ಪಾರ್ಟಿ’, ‘ಹಂಬಲ್ ಪೊಲಿಟಿಷಿಯನ್ ನೊಗರಾಜ್’, ‘ಅವನೇ ಶ್ರೀಮನ್ನಾರಾಯಣ’ ಹಾಗೂ ‘ರನ್ ಆ್ಯಂಟೋನಿ’ ಚಿತ್ರಗಳಿಗೆ ಕ್ಯಾಮೆರಾ ಹಿಡಿದವರು ಕರಮ್ ಚಾವ್ಲಾ. ಇದೊಂದು ಬಾಕ್ಸಿಕ್ ಗೇಮ್ ಸುತ್ತ ನಡೆಯುವ ಸಿನಿಮಾ. ಇಂಥ ಗೇಮ್ ಸಿನಿಮಾದಲ್ಲಿ ನಟಿಸುತ್ತಿರುವ ವಿನಯ್ ನಟಿಸುತ್ತಿದ್ದಾರೆ.

ಚಿತ್ರ ವಿಮರ್ಶೆ: ಅನಂತು ವರ್ಸಸ್ ನುಸ್ರತ್

ಈಗಾಗಲೇ ಹಿಂದಿಯಲ್ಲಿ ಬಂದಿರುವ ‘ಮುಕ್ಕಾಬಾಜ್’ ಹಾಗೂ ‘ಗಲ್ಲಿಬಾಯ್’ ಚಿತ್ರಗಳ ಫ್ಲೇವರ್ ಒಳಗೊಂಡಿರುವ ಈ ಸಿನಿಮಾ ತಮಗೆ ಬಹು ದೊಡ್ಡ ಸವಾಲು ಎನ್ನುತ್ತಿರುವ ವಿನಯ್ ಅವರು ತಮ್ಮ ಹೊಸ ಚಿತ್ರದ ಕುರಿತು ಹೇಳಿದ್ದಿಷ್ಟು-

  • ಚಿಕ್ಕಂದಿನಿಂದಲೂ ನನಗೆ ಬಾಕ್ಸಿಂಗ್ ಅಂದರೆ ಇಷ್ಟ. ಈಗ ಅದೇ ಗೇಮ್ ಸಿನಿಮಾದಲ್ಲಿ ನಟಿಸುತ್ತಿರುವುದು ಖುಷಿ ಕೊಟ್ಟಿದೆ.
  • ಬಾಕ್ಸಿಂಗ್ ಕತೆಯನ್ನು ಆಧರಿಸಿದ ಒಂದು ರಿಯಲಿಸ್ಟಿಕ್ ಕಮರ್ಷಿಯಲ್ ಸಿನಿಮಾ. ಹೀಗಾಗಿ ಇದಕ್ಕೆ ನಾನು ಸಾಕಷ್ಟು ತಯಾರಿ ಮಾಡಿಕೊಂಡೇ ಕ್ಯಾಮೆರಾ ಮುಂದೆ ಹೋಗಬೇಕಿದೆ.
  • ಇದು ನನ್ನ ಕನಸಿನ ಸಿನಿಮಾ. ಇದಕ್ಕೆ ಮಾನಸಿಕವಾಗಿ, ದೈಹಿಕವಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಿದೆ. ಸಿಕ್ಕಾಪಟ್ಟೆ ಶ್ರಮ ಬೇಡುವ ಸಿನಿಮಾ. ಚಿತ್ರಕ್ಕಾಗಿ ಮೊದಲ ಬಾರಿಗೆ ನನ್ನ ದೇಹದ ಮೇಲೆ ನಾನು ಪ್ರಯೋಗ ಮಾಡಿಕೊಳ್ಳುತ್ತಿದ್ದೇನೆ.
  • ಸಾಮಾನ್ಯ ಹುಡುಗ ಬಾಕ್ಸರ್ ಆಗುವ ಕತೆ ಇಲ್ಲಿದೆ. ಪುಷ್ಕರ್ ತುಂಬಾ ಪ್ಯಾಷನ್ ಇರುವ ನಿರ್ಮಾಪಕರು. ಕ್ವಾಲಿಟಿ ಸಿನಿಮಾಗಳಿಗೆ ಒತ್ತು ಕೊಡುತ್ತಾರೆ. ಈಗ ಅವರ ಜತೆ ಕೆಲಸ ಮಾಡುತ್ತಿರುವುದು ಖುಷಿ ಕೊಟ್ಟಿದೆ.
  • ಒಳ್ಳೆಯ ತಂಡದ ಸಿನಿಮಾ ಇದು. ನನ್ನ ಹುಟ್ಟು ಹಬ್ಬದಂದು ಚಿತ್ರದ ಪೋಸ್ಟರ್ ಬಿಡುಗಡೆ ಮಾಡುತ್ತಿದ್ದಾರೆ. ಇದು ನನಗೆ ದಕ್ಕುತ್ತಿರುವ ಮತ್ತೊಂದು ಸಂಭ್ರಮ. 

 

click me!