
ಪ್ರಶ್ನೆ ಇರುವುದು ಅವರು ಸಿನಿಮಾ ತಿರಿಸ್ಕರಿಸಿದರು ಎನ್ನುವುದಕ್ಕಲ್ಲ, ಸ್ಟಾರ್ ನಟರ ಸಿನಿಮಾ ಆಗಿದ್ದರೆ ಅವರು ಅಭಿನಯಿಸದೇ ಇರುತ್ತಿದ್ದಾರಾ ಎನ್ನುವುದು ಚಿತ್ರ ತಂಡದ ಅಳಲು. ಚಿತ್ರದ ಟೀಸರ್ ಲಾಂಚ್ ಸಂದರ್ಭದಲ್ಲಿ ಚಿತ್ರದ ನಾಯಕ ನಟ ರಾಜ್ ಸೂರ್ಯನ್ ತಮ್ಮ ಅಳಲು ಹೊರ ಹಾಕುವ ಮೂಲಕ ಚಿತ್ರದ ಹಾಟ್ ನ್ಯೂಸ್ ರಿವೀಲ್ ಮಾಡಿದರು.
ವಿದೇಶಿ ಹುಡುಗನ ಜತೆ ಫಾರಿನ್ ಬೀಚ್‌ನಲ್ಲಿ ತಲೆಕೆಳಗಾದ ಸಂಯುಕ್ತಾ!
‘ಚಿತ್ರದ ನಾಯಕಿ ಪಾತ್ರ ಸ್ವಲ್ಪ ಬೋಲ್ಡ್ ಆಗಿದೆ. ತೆಲುಗಿನ ಅರ್ಜುನ್ ರೆಡ್ಡಿ ಸಿನಿಮಾದಲ್ಲಿರುವ ನಾಯಕಿಯ ಹಾಗೆ, ಕೆಲವು ಲಿಪ್‌ಲಾಕ್ ಸನ್ನಿವೇಶಗಳು ಇವೆ. ಈ ಪಾತ್ರಕ್ಕೆ ನಾವು ಕನ್ನಡದ ನಟಿಯರನ್ನೇ ಆಯ್ಕೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದೆವು. ಅದಕ್ಕೆ ಆಡಿಷನ್ ಕೂಡ ಮಾಡಿದೆವು. ಯಾರು ಕೂಡ ಈ ಪಾತ್ರದಲ್ಲಿ ಅಭಿನಯಿಸಲು ಒಪ್ಪಲಿಲ್ಲ. ಹಾಗೆಯೇ ಕನ್ನಡದ ಬಹಳಷ್ಟು ನಟಿಯರನ್ನು ಭೇಟಿ ಮಾಡಿ ಬಂದೆವು. ಅವರು ಕೂಡ ಒಪ್ಪಿಕೊಳ್ಳಲಿಲ್ಲ. ಕೊನೆಗೆ ಮುಂಬೈ ಮೂಲದ ಆಕರ್ಷಕ ಹಾಗೂ ನಸ್ರೀನ್ ಒಪ್ಪಿಕೊಂಡು ಬಂದರು. ಹೊಸಬರೆಂದರೆ ಕನ್ನಡದ ನಟಿಯರು ಲಿಪ್‌ಲಾಕ್ ಮಾಡಲು ಒಪ್ಪಿಕೊಳ್ಳುವುದಿಲ್ಲ’ ಅಂತ ರಾಜ್ ಸೂರ್ಯನ್ ತಮ್ಮೊಳಗಿನ ಬೇಸರದ ಮಾತುಗಳನ್ನು ಕೊಂಚ ಜೋರು ಧ್ವನಿಯಲ್ಲೇ ಹೇಳಿಕೊಂಡರು. ಹಾಗಾದ್ರೆ, ನಿಮ್ಮ ಚಿತ್ರಕ್ಕೆ ನಾಯಕಿ ಆಗಲು ಒಪ್ಪಿಕೊಳ್ಳದೆ ಹೋದ ಕನ್ನಡ ನಟಿಯರ ಪೈಕಿ ಕೆಲವರ ಹೆಸರು ಬಹಿರಂಗ ಪಡಿಸಬಹುದೇ ಎನ್ನುವ ಪ್ರಶ್ನೆಗೆ ರಾಜ್ ಸೂರ್ಯನ್, ಮೊದಲು ನಿರಾಕರಿಸಿದರು. ಕೊನೆಗೆ ಕನ್ನಡದ ನಟಿಯರನ್ನು ಸಾರಾಸಗಟಾಗಿ ಈ ರೀತಿ ದೂರುವುದು ಎಷ್ಟು ಸರಿ ಅಂದಾಗ ಅವರ ಬಾಯಲ್ಲಿ ಮೊದಲ ಬಂದ ಹೆಸರು ನಟಿ ಸಂಯುಕ್ತ ಹೆಗಡೆ ಅವರದ್ದು.
ಮತ್ತೆ ಬಿಕಿನಿ ತೊಟ್ಟು ಮೋಡಿ ಮಾಡಿದ ಕಿರಿಕ್ ಬೆಡಗಿ!
ಹೆಸರು ಹೇಳುವುದಕ್ಕೇನು ನನಗೆ ಭಯವಿಲ್ಲ. ಎರಡು ಸಾವಿರಕ್ಕೂ ಹೆಚ್ಚು ಹುಡುಗಿಯರು ಆಡಿಷನ್‌ಗೆ ಬಂದಿದ್ದರು. ಅವರು ಕೂಡ ಒಪ್ಪಿಕೊಳ್ಳಲಿಲ್ಲ. ಕೊನೆಗೆ ಕನ್ನಡದ ನಟಿಯರನ್ನೇ ಆಯ್ಕೆ ಮಾಡಿಕೊಳ್ಳೋಣ ಅಂತ ಒಬ್ಬೊಬ್ಬರನ್ನೇ ಕೇಳುತ್ತಾ ಹೋದೆವು. ಯಾರು ಕೂಡ ನಮ್ಮನ್ನು ಎಂಟರ್‌ಟೈನ್ ಮಾಡಲಿಲ್ಲ. ಸಂಯುಕ್ತ ಹೆಗಡೆ ಬಿಲ್‌ಕುಲ್ ಮಾಡಲ್ಲ ಅಂದರು ಅಂತ ರಾಜ್ ಸೂರ್ಯನ್ ಹೇಳುವ ತಮ್ಮ ಚಿತ್ರದ ಇಬ್ಬರು ನಾಯಕಿಯರ ಪಾತ್ರಕ್ಕೆ ಮುಂಬೈ ಬೆಡಗಿಯರು ಯಾಕೆ ಬಂದರು ಅಂತ ಸ್ಪಷ್ಟನೆ ನೀಡಿದರು. ಮೈ ನೇಮ್ ಈಸ್ ರಾಜಾ ಚಿತ್ರದಲ್ಲೀಗ ಮುಂಬೈ ಮೂಲದ ಆಕರ್ಷಕ ಹಾಗೂ ನಸ್ರೀನ್ ನಾಯಕಿಯರಾಗಿ ಅಭಿನಯಿಸಿದ್ದಾರೆ. ಇಬ್ಬರು ಬೋಲ್ಡ್ ಪಾತ್ರಗಳಲ್ಲೇ ಅಭಿನಯಿಸಿದ್ದಾರಂತೆ. ಯಾವುದೇ ಕಂಡಿಷನ್ಸ್ ಇಲ್ಲದೆ ಬಂದಿದ್ದೇನೆ ಅಂತ ಆಕರ್ಷಕ ಹೇಳಿಕೊಂಡರೆ, ನಸ್ರೀನ್, ಸೆಕ್ಸಿ ಸಾಂಗ್ಸ್‌ನಲ್ಲೂ ಕುಣಿದಿದ್ದೇನೆ ಅಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.