ದರ್ಶನ್​ ಬಿಡುಗಡೆಗಾಗಿ ದರ್ಗಾದ ಮೊರೆ ಹೋದ ವಿಜಯಲಕ್ಷ್ಮಿ: ಪತಿ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿಜಿ

Published : Nov 21, 2026, 03:58 PM IST
Vijayalakshmi Darshan

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಪತಿ ದರ್ಶನ್ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮಿ ಅವರು ವಿವಿಧ ದೇವಸ್ಥಾನಗಳ ಜೊತೆಗೆ ಇದೀಗ ದರ್ಗಾಕ್ಕೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅಲ್ಲದೆ ಇತ್ತೀಚಿನ ದರ್ಶನ್-ಪವಿತ್ರಾ ಗೌಡ ಅವರ ಕೋರ್ಟ್ ವಿಡಿಯೋ ಕಾನ್ಫರೆನ್ಸ್ ಘಟನೆ ನಂತರ ವಿಜಯಲಕ್ಷ್ಮಿ ಅವರು ಮಾಡಿರುವ ಪರೋಕ್ಷ ಪೋಸ್ಟ್ ಕುತೂಹಲ ಮೂಡಿಸಿತ್ತು.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಅವರು ಜೈಲುಪಾಲಾಗಿರುವ ನಡುವೆಯೇ, ವಿಜಯಲಕ್ಷ್ಮಿ ದರ್ಶನ್​ ಅವರು ಇದಾಗಲೇ ಹಲವಾರು ದೇವಸ್ಥಾನಗಳಿಗೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸುತ್ತಿರುವುದು ತಿಳಿದೇ ಇದೆ. ಕಳೆದ ಎರಡು ವರ್ಷಗಳಿಂದ ವಿಜಯಲಕ್ಷ್ಮಿ ಅವರು ಇದೇ ರೀತಿ ಹಲವು ಹೋಮ-ಹವನಗಳನ್ನು ಮಾಡಿಸಿದ್ದೂ ಅಲ್ಲದೇ, ದೇವಸ್ಥಾನಗಳಿಗೂ ಭೇಟಿ ನೀಡುತ್ತಲೇ ಇದ್ದಾರೆ. ಇದೀಗ ವಿಜಯಲಕ್ಷ್ಮಿ ಅವರು, ಬೆಂಗಳೂರಿನ ಒಟಿಸಿ ರಸ್ತೆಯಲ್ಲಿರುವ ದರ್ಗಾಕ್ಕೆ ತೆರಳಿ ಅವರು ಪೂಜೆ ಸಲ್ಲಿಸಿದ್ದಾರೆ. ದರ್ಶನ್ ಅವರನ್ನು ಜೈಲಿಂದ ಹೊರತರಲು ವಿಜಯಲಕ್ಷ್ಮಿಯವರು ಹಲವು ದೇವಾಲಯಗಳ ಮೊರೆ ಹೋಗಿದ್ದರು. ಇದೀಗ ದರ್ಗಾಕ್ಕೆ ತೆರಳಿ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದ್ದಾರೆ.

ವಿಜಯಲಕ್ಷ್ಮಿ ದರ್ಶನ್ ಅವರು ಗಂಡನಿಗಾಗಿ ಆನೇಕಲ್ ಪಟ್ಟಣದ ಶಕ್ತಿದೇವತೆ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ನೆರವೇರಿಸಿದ್ದಾರೆ. ಇದು ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಈ ತಿಂಗಳ ಆರಂಭದಲ್ಲಿ ಅವರು ದೇವಸ್ಥಾನಕ್ಕೆ ಹೋಗಿದ್ದರು. ಇದೀಗ ದರ್ಗಾಕ್ಕೆ ಭೇಟಿ ನೀಡಿ, ಪತಿಯ ಬಿಡುಗಡೆಗಾಗಿ ಕೋರಿದ್ದಾರೆ.

ಸದ್ದು ಮಾಡಿದ್ದ ದರ್ಶನ್​-ಪವಿತ್ರಾ ಎಡವಟ್ಟು

ಈಚೆಗಷ್ಟೇ ವಿಜಯಲಕ್ಷ್ಮಿ ಅವರು ಸದ್ದು ಮಾಡಿದ್ದು, ದರ್ಶನ್​-ಪವಿತ್ರಾ ಗೌಡ ಕೋರ್ಟ್​ನಲ್ಲಿ ಮಾಡಿಕೊಂಡ ಎಡವಟ್ಟಿನ ಬೆನ್ನಲ್ಲೇ ಕುತೂಹಲದ ಪೋಸ್ಟ್​ ಹಾಕಿದಾಗ. ನಟ ದರ್ಶನ್ ಮತ್ತು ನಟಿ ಪವಿತ್ರಾ ಗೌಡ ನಡುವಿನ ರಹಸ್ಯ ಸಂಭಾಷಣೆಯೊಂದು ಕೋರ್ಟ್ ವಿಡಿಯೋ ಕಾನ್ಫರೆನ್ಸ್ (Video Conference) ವೇಳೆ ಬಹಿರಂಗವಾಗಿ ತಲ್ಲಣ ಉಂಟಾಗಿತ್ತು. ವಿಚಾರಣೆಯ ಸಂದರ್ಭದಲ್ಲಿ ನಡುವೆ ಸಂಪರ್ಕ ಕಡಿತಗೊಂಡಿದೆ ಎಂದು ಭಾವಿಸಿ ಇಬ್ಬರೂ ಪರಸ್ಪರ ಮಾತನಾಡಿಕೊಂಡಿದ್ದು, ಆ ಮಾತುಗಳು ಎಲ್ಲರಿಗೂ ಕೇಳಿಸಿವೆ. ಈ ವೇಳೆ 'ಇನ್ನು ಕೇವಲ 4 ರಿಂದ 5 ತಿಂಗಳು ಸಹಿಸಿಕೊ, ಹೈಕೋರ್ಟ್‌ನಲ್ಲಿ ಜಡ್ಜ್ ಬದಲಾಗುತ್ತಾರೆ' ಎಂದು ದರ್ಶನ್ ಹೇಳಿದ್ದು, ಇದೀಗ ಸಿಕ್ಕಾಪಟ್ಟೆ ಚರ್ಚೆಗೂ ಗ್ರಾಸವಾಗಿದೆ. ವಿಜಯಲಕ್ಷ್ಮಿ ಬರ್ತ್​ಡೇ ಸಂದರ್ಭದಲ್ಲಿ ಈ ರೀತಿ ನಡೆದಿದ್ದು ಇನ್ನೂ ಶಾಕಿಂಗ್ ಆಗಿತ್ತು.ಈ ಎಲ್ಲ ಬೆಳವಣಿಗೆ ಮಧ್ಯೆ ವಿಜಯಲಕ್ಷ್ಮಿ ಯಾವಾಗ ಪ್ರತಿಕ್ರಿಯಿಸ್ತಾರೆ ಎಂದು ಎಲ್ಲರೂ ಕಾಯುತ್ತಿದ್ದರು.

ಅದರ ಬೆನ್ನಲ್ಲೇ ವಿಜಯಲಕ್ಷ್ಮಿ ಅವರು, ತಮ್ಮ ಜಾಲತಾಣದಲ್ಲಿ ಪೋಸ್ಟ್​ ಒಂದನ್ನು ಶೇರ್​ ಮಾಡಿಕೊಂಡಿದ್ದು, ಇದು ಪರೋಕ್ಷವಾಗಿ ಇದೇ ಘಟನೆಗೆ ಸಂಬಂಧಿಸಿದ್ದು ಎನ್ನಲಾಗಿದೆ. ಅಷ್ಟಕ್ಕೂ ಇದರಲ್ಲಿ ವಿಜಯಲಕ್ಷ್ಮಿ (Vijayalakshmi Darshan) ಹೇಳಿರುವುದು ಏನೆಂದರೆ, 'ನಿಮಗೆ ದ್ರೋಹ ಬಗೆಯುವುದು ನಿಮ್ಮ ಶತ್ರುಗಳಲ್ಲ, ಬದಲಾಗಿ ನಿಮ್ಮ ಜೊತೆಯಲ್ಲಿ ಒಂದೇ ತಟ್ಟೆಯಲ್ಲಿ ಉಂಡವರು' ಎಂದಿದ್ದಾರೆ. ವಿಬೋಧ್ & ವಿನೀಶ್ ದರ್ಶನ್ ಎನ್ನುವ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ ವಿಡಿಯೋವನ್ನು ವಿಜಯಲಕ್ಷ್ಮಿ ಅವರು ತಮ್ಮ ಇನ್​ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ಹಂಚಿಕೊಂಡಿದ್ದರು.

ಇತ್ತೀಚೆಗೆ ವಿಜಯಲಕ್ಷ್ಮಿ ಹಾಗೂ ಧನ್ವೀರ್(Dhanveer) ನಡುವೆ ಜಟಾಪಟಿ ನಡೆದಿತ್ತು. ಇಬ್ಬರ ನಡುವಿನ ವಾಗ್ವಾದ ಮತ್ತು ನಿಂದನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಧನ್ವೀರ್‌ಗೆ ಹೈಕೋರ್ಟ್‌ನಿಂದ ರಿಲೀಫ್ ಸಿಕ್ಕಿತ್ತು. ಧನ್ವೀರ್ ವಿರುದ್ಧ ದಾಖಲಾಗಿರುವ ಮೂರು ಪ್ರತ್ಯೇಕ ಎಫ್‌ಐಆರ್‌ಗಳ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಚಿಕ್ಕಣ್ಣ ಇನ್ನೆರಡು ವರ್ಷದಲ್ಲಿ ದೊಡ್ಡ ಸೂಪರ್‌ ಸ್ಟಾರ್‌ ಆಗ್ತಾರೆ: ಭವಿಷ್ಯ ನುಡಿದ ಶಿವಣ್ಣ
ಕರ್ನಾಟಕದಿಂದ ಪತ್ರಕರ್ತರು ಚಿತ್ರೋತ್ಸವಕ್ಕೆ ಬರುತ್ತಿಲ್ಲವೇಕೆ? 1974ರಲ್ಲಿ ಕೇಳಿದ್ದ ಪ್ರಶ್ನೆಗೆ ಇಲ್ಲಿದೆ ಉತ್ತರ!