
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅವರು ಜೈಲುಪಾಲಾಗಿರುವ ನಡುವೆಯೇ, ವಿಜಯಲಕ್ಷ್ಮಿ ದರ್ಶನ್ ಅವರು ಹಿರಿಯ ನಟಿ ಅರುಂಧತಿ ನಾಗ್ ಅವರನ್ನು ಭೇಟಿಯಾಗಿದ್ದು, ಆ ಬಗ್ಗೆ ಪೋಸ್ಟ್ ಶೇರ್ ಮಾಡಿಕೊಂಡಿದ್ದು, ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅರುಂಧತಿ ನಾಗ್ ಅವರ ಜೊತೆಗಿನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಇವರಿಬ್ಬರೂ ಅತ್ಯಂತ ಆತ್ಮೀಯವಾಗಿ ಇರುವುದನ್ನು ನೋಡಬಹುದಾಗಿದೆ. ಈ ಭೇಟಿ ಸಹಜವಾಗಿಯೂ ಇದ್ದಿರಬಹುದು. ಆದರೆ, ಸದ್ಯ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದಾಗ, ವಿಜಯಲಕ್ಷ್ಮಿ ಅವರ ಪ್ರತಿಯೊಂದು ನಡೆಯ ಬಗ್ಗೆ ಅವರ ಅಭಿಮಾನಿಗಳಿಗೆ ಕುತೂಹಲ ಇದ್ದೇ ಇರುತ್ತದೆ. ಇದೇ ಕಾರಣಕ್ಕೆ, ವಿಜಯಲಕ್ಷ್ಮಿ ಅವರು ಅರುಂಧತಿ ಅವರನ್ನು ಭೇಟಿಯಾಗಿದ್ದು ಏಕೆ ಎನ್ನುವ ಕುತೂಹಲ ಮನೆ ಮಾಡಿದೆ.
ಈಚೆಗಷ್ಟೇ ವಿಜಯಲಕ್ಷ್ಮಿ ಅವರು ಸದ್ದು ಮಾಡಿದ್ದು, ದರ್ಶನ್-ಪವಿತ್ರಾ ಗೌಡ ಕೋರ್ಟ್ನಲ್ಲಿ ಮಾಡಿಕೊಂಡ ಎಡವಟ್ಟಿನ ಬೆನ್ನಲ್ಲೇ ಕುತೂಹಲದ ಪೋಸ್ಟ್ ಹಾಕಿದಾಗ. ನಟ ದರ್ಶನ್ ಮತ್ತು ನಟಿ ಪವಿತ್ರಾ ಗೌಡ ನಡುವಿನ ರಹಸ್ಯ ಸಂಭಾಷಣೆಯೊಂದು ಕೋರ್ಟ್ ವಿಡಿಯೋ ಕಾನ್ಫರೆನ್ಸ್ (Video Conference) ವೇಳೆ ಬಹಿರಂಗವಾಗಿ ತಲ್ಲಣ ಉಂಟಾಗಿತ್ತು. ವಿಚಾರಣೆಯ ಸಂದರ್ಭದಲ್ಲಿ ನಡುವೆ ಸಂಪರ್ಕ ಕಡಿತಗೊಂಡಿದೆ ಎಂದು ಭಾವಿಸಿ ಇಬ್ಬರೂ ಪರಸ್ಪರ ಮಾತನಾಡಿಕೊಂಡಿದ್ದು, ಆ ಮಾತುಗಳು ಎಲ್ಲರಿಗೂ ಕೇಳಿಸಿವೆ. ಈ ವೇಳೆ 'ಇನ್ನು ಕೇವಲ 4 ರಿಂದ 5 ತಿಂಗಳು ಸಹಿಸಿಕೊ, ಹೈಕೋರ್ಟ್ನಲ್ಲಿ ಜಡ್ಜ್ ಬದಲಾಗುತ್ತಾರೆ' ಎಂದು ದರ್ಶನ್ ಹೇಳಿದ್ದು, ಇದೀಗ ಸಿಕ್ಕಾಪಟ್ಟೆ ಚರ್ಚೆಗೂ ಗ್ರಾಸವಾಗಿದೆ. ವಿಜಯಲಕ್ಷ್ಮಿ ಬರ್ತ್ಡೇ ಸಂದರ್ಭದಲ್ಲಿ ಈ ರೀತಿ ನಡೆದಿದ್ದು ಇನ್ನೂ ಶಾಕಿಂಗ್ ಆಗಿತ್ತು.ಈ ಎಲ್ಲ ಬೆಳವಣಿಗೆ ಮಧ್ಯೆ ವಿಜಯಲಕ್ಷ್ಮಿ ಯಾವಾಗ ಪ್ರತಿಕ್ರಿಯಿಸ್ತಾರೆ ಎಂದು ಎಲ್ಲರೂ ಕಾಯುತ್ತಿದ್ದರು.
ಅದರ ಬೆನ್ನಲ್ಲೇ ವಿಜಯಲಕ್ಷ್ಮಿ ಅವರು, ತಮ್ಮ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದು, ಇದು ಪರೋಕ್ಷವಾಗಿ ಇದೇ ಘಟನೆಗೆ ಸಂಬಂಧಿಸಿದ್ದು ಎನ್ನಲಾಗಿದೆ. ಅಷ್ಟಕ್ಕೂ ಇದರಲ್ಲಿ ವಿಜಯಲಕ್ಷ್ಮಿ (Vijayalakshmi Darshan) ಹೇಳಿರುವುದು ಏನೆಂದರೆ, 'ನಿಮಗೆ ದ್ರೋಹ ಬಗೆಯುವುದು ನಿಮ್ಮ ಶತ್ರುಗಳಲ್ಲ, ಬದಲಾಗಿ ನಿಮ್ಮ ಜೊತೆಯಲ್ಲಿ ಒಂದೇ ತಟ್ಟೆಯಲ್ಲಿ ಉಂಡವರು' ಎಂದಿದ್ದಾರೆ. ವಿಬೋಧ್ & ವಿನೀಶ್ ದರ್ಶನ್ ಎನ್ನುವ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ ವಿಡಿಯೋವನ್ನು ವಿಜಯಲಕ್ಷ್ಮಿ ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೋರೀಸ್ನಲ್ಲಿ ಹಂಚಿಕೊಂಡಿದ್ದರು.
ಪ್ರಕರಣದ ವಿಚಾರಣೆಗಾಗಿ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ ಸಂದರ್ಭದಲ್ಲಿ ತಾಂತ್ರಿಕ ಕಾರಣದಿಂದ ಸಂಪರ್ಕ ಕಟ್ ಆಗಿತ್ತು. ಈ ವೇಳೆ ಹಾಲ್ನಲ್ಲಿದ್ದ ಉಳಿದ ಆರೋಪಿಗಳು ಹೊರಗೆ ಹೋಗಿದ್ದರು. ವಿಡಿಯೋ ಕಾನ್ಫರೆನ್ಸ್ ಕಟ್ ಆಗಿದೆ ಎಂದು ಭಾವಿಸಿದ ದರ್ಶನ್ ಮತ್ತು ಪವಿತ್ರಾ ಗೌಡ ಪರಸ್ಪರ ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ. ಆದರೆ, ಆಡಿಯೋ ಸಂಪರ್ಕ ಕಡಿತಗೊಳ್ಳದ ಕಾರಣ ಅವರ ಸಂಪೂರ್ಣ ಸಂಭಾಷಣೆ ದಾಖಲಾಗಿದೆ. ಆಗ ಇಬ್ಬರೂ ಪರಸ್ಪರ ಮಾತನಾಡಿಕೊಂಡಿದ್ದಾರೆ. ಊಟ ಆಯ್ತಾ...? ಹೇಗಿದೆ ಬೆನ್ನು ನೋವು...? ಫಿಸಿಯೋಥೆರಪಿ ಆಯ್ತಾ...? ಎಷ್ಟು ದಿನ ಮಾಡಿಸಬೇಕು ಎಂದೆಲ್ಲಾ ಪವಿತ್ರಾ ಕೇಳಿದಾಗ, ದರ್ಶನ್ ಅವರು ಇದಕ್ಕೆಲ್ಲಾ ಉತ್ತರ ಕೊಟ್ಟಿದ್ದಾರೆ. ಇಬ್ಬರೂ ಹೀಗೆ ಜೈಲಿನ ಕಷ್ಟ ಮತ್ತು ಜಾಮೀನಿನ ನಿರೀಕ್ಷೆಯ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾಗ, ತಕ್ಷಣವೇ ವಿಡಿಯೋ ಕಾನ್ಫರೆನ್ಸ್ ಮರುಸಂಪರ್ಕಗೊಂಡಿದೆ. ವಿಡಿಯೋ ಆನ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ದರ್ಶನ್ ಮತ್ತು ಪವಿತ್ರಾ ಗೌಡ ತಕ್ಷಣವೇ ಮೌನಕ್ಕೆ ಶರಣಾದರು. ಸದ್ಯ ದರ್ಶನ್ ಅವರು ನೀಡಿರುವ ಈ '4-5 ತಿಂಗಳ' ಸುಳಿವು ಜಾಮೀನು ಪ್ರಕ್ರಿಯೆಯ ಕುರಿತೇ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಜೋರಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.