
Aakasamlo Oka Tara: ಮಲಯಾಳಂ ಸ್ಟಾರ್ ದುಲ್ಕರ್ ಸಲ್ಮಾನ್(Dulqer Salman) ಸಾತ್ವಿಕಾ ವೀರವಲ್ಲಿ(Satvika Veeravalli) ಅವರ ಇತ್ತೀಚಿನ ಕ್ಯೂಟ್ ಲವ್ ಎಮೋಷನಲ್ ಎಂಟರ್‌ಟೈನರ್ 'ಆಕಾಸಮ್ಲೋ ಒಕ ತಾರಾ'(Aakasamlo Oka Tara) ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ಬಂದಿದೆ. ಪವನ್ ಸಾಧಿನೇನಿ ನಿರ್ದೇಶನದ ಈ ಚಿತ್ರಕ್ಕೆ ಜಿವಿ ಪ್ರಕಾಶ್ ಕುಮಾರ್ ಸಂಗೀತವಿದೆ. ಗೀತಾ ಆರ್ಟ್ಸ್ ಮತ್ತು ಸ್ವಪ್ನಾ ಸಿನಿಮಾದಡಿ ಮೂಡಿಬಂದಿರುವ, ಲೈಟ್ ಬಾಕ್ಸ್ ಮೀಡಿಯಾ ಬ್ಯಾನರ್ ಅಡಿಯಲ್ಲಿ ಸಂದೀಪ್ ಗುನ್ನಂ ಮತ್ತು ರಮ್ಯಾ ಗುನ್ನಂ ನಿರ್ಮಿಸಿದ್ದಾರೆ.
ಮೊದಲ ಶೋನಲ್ಲೇ ಥಿಯೇಟರ್ ಹೌಸ್‌ಫುಲ್ ಆಗಿದ್ದು, ಸಿನಿಮಾದ ಅಭಿಮಾನಿಗಳು, ಪ್ರೇಕ್ಷಕರು ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನು ಈ ಬಗ್ಗೆ ನೆಟಿಜನ್ ಸಾಮಾಜಿಕ ಜಾಲತಾಣದಲ್ಲಿ 'ದುಲ್ಕರ್ ಅವರ ಮತ್ತೊಂದು ಸೂಪರ್ ಹಿಟ್ ಸಿನಿಮಾ' ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ಸಿನಿಮಾದ ಕಥೆ ಹುಡುಗಿಯರ ಶಿಕ್ಷಣದ ಮಹತ್ವವನ್ನು ಸ್ಪೂರ್ತಿದಾಯಕವಾಗಿ ತೋರಿಸಲಾಗಿದೆ. ಜಿವಿ ಪ್ರಕಾಶ್ ಅವರ ಸಂಗೀತ ಈ ಚಿತ್ರದ ಪ್ಲಸ್ ಪಾಯಿಂಟ್ ಹಾಡುಗಳು ಸಿನಿಮಾ ನೋಡಿದ ಬಳಿಕ ನೆನಪಿನಲ್ಲುಳಿಯುವಂತಿವೆ. ಒಟ್ಟಾರೆ ದುಲ್ಕರ್ ಮತ್ತೊಮ್ಮೆ ಹಿಟ್ ಮೂವಿ ಕೊಟ್ಟಿದ್ದಾರೆ ಎಂದು ವಿಮರ್ಶೆಗಳು ಹೇಳುತ್ತಿವೆ.
#AakasamLoOkaTara - ఓ అందమైన అద్భుతం
రచన& దర్శకత్వం, సంగీతం, యాక్టర్స్ పర్ఫార్మెన్స్ అద్భుతం..
#DulquerSalman 🙏🙏
#SathvikaVeeravalli 🫡
@gvprakash🙏🙏
ఇదిరా మా తెలుగు సినిమా సత్తా.. ఇది తెలుగు దర్శకుడి గర్వంగా చెప్పుకునే చిత్రం #AOT Tq @pavansadineni https://t.co/jPSwQFgPyy
— తార-సితార (@Tarasitaranews) November 20, 2026
ಚಿಕ್ಕ ವಯಸ್ಸಿನಲ್ಲಿ ಮದುವೆಯಾದ ಹುಡುಗಿಯ ಜೊತೆ ನಿಲ್ಲುವ ಗಂಡ, ಪ್ರೀತಿಯಿಂದ ಆಕೆಯ ಕನಸನ್ನು ನನಸಾಗಿಸಲು ಪತಿಯ ಹೋರಾಟವನ್ನು ಹೃದಯಸ್ಪರ್ಶಿಯಾಗಿ ತೋರಿಸಲಾಗಿದೆ. ಸಿನಿಮಾದ ಪ್ರತಿ ದೃಶ್ಯಗಳು ಭಾವನಾತ್ಮಕವಾಗಿವೆ ಎಂದು ಪ್ರೇಕ್ಷಕರು ಹೇಳಿದ್ದಾರೆ. ಇನ್ನು ಈ ಸಿನಿಮಾದಲ್ಲಿ ದುಲ್ಕರ್ ಮತ್ತು ಸಾತ್ವಿಕ್ ವೀರವಳ್ಳಿ ಅವರ ನಟನೆ ಅದ್ಭುತವಾಗಿದೆ. ಅದರಲ್ಲೂ ಸಂಭಾಷಣೆಗಳು ಸ್ಪೂರ್ತಿದಾಯಕವಾಗಿವೆ. ರೋಹಿಣಿ ಪಾತ್ರದಲ್ಲಿ ಶ್ರುತಿ ಹಾಸನ್, ವಿಭಿನ್ನ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರೆ ಸ್ವಸಿಕಾ ಮತ್ತು ಬಿಜ್ಲಿ ಪಾತ್ರದಲ್ಲಿ ರುಹಾನಿ ಶರ್ಮಾ ಮಿಂಚಿದ್ದಾರೆ. ವಿಶೇಷವಾಗಿ ದುಲ್ಕರ್ ಅವರ ನಟನೆ ಸಹಜವಾಗಿ ಅದ್ಭುತವಾಗಿದೆ ಎಂದು ಪ್ರೇಕ್ಷಕರು ಹೊಗಳಿದ್ದಾರೆ.
#AakasamLoOkaTara is a beautifully made emotional drama that wins through its performances, writing, and heartfelt moments, writes @avadsays
#AOT #AOTMovie #AOTonNOV20th #AakasamLoOkaTarareview
https://t.co/JLU2rb46vj
— Prathibha Joy (@pratshere) November 20, 2026
ಇನ್ನು ಸರಳವಾಗಿ ಹೇಳಬೇಕೆಂದರೆ ಈ ಸಿನಿಮಾ ಕಲ್ಪನಾ ಚಾವ್ಲಾರಿಂದ ಸ್ಪೂರ್ತಿ ಪಡೆದಂತಿದೆ. ಯಾವುದೇ ಬಸ್ ಸೌಲಭ್ಯವಿಲ್ಲದೆ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸುವ ಹುಡುಗಿಯೊಬ್ಬಳು ಆಕಾಶಕ್ಕೆ ಏಣಿ ಕಟ್ಟುವ ಕಥೆಯನ್ನು ಜಿವಿ ಪ್ರಕಾಶ್ ತುಂಬಾ ಅದ್ಭುತವಾಗಿ ಹೇಳಿದ್ದಾರೆ. ಸಿನಿಮಾವಲ್ಲ, ಇದೊಂದು ದೃಶ್ಯಕಾವ್ಯ ಎಂದು ನೆಟಿಜನ್‌ಗಳಿಂದ ಪ್ರಶಂಸೆಯ ಮಹಾಪುರವೇ ಹರಿದುಬಂದಿದೆ. ಆದ್ರೂ ಕೆಲವು ದೃಶ್ಯಗಳು ನಿಧಾನವಾಗಿವೆ ಎಂದು ಕೆಲವು ಕಾಮೆಂಟ್‌ಗಳು ಬಂದಿವೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.