Thalapathy Vijay: ರಾಜಕೀಯದಲ್ಲೂ ಮಾಸ್ ಮಹಾರಾಜನಾ ವಿಜಯ್? ವೈರಲ್ ವಿಡಿಯೋ ಹಿಂದಿನ ಸತ್ಯ ಏನು?

Published : Jun 24, 2026, 05:06 PM IST
Thalapathy Vijay

ಸಾರಾಂಶ

Thalapathy Vijay ಡಿಎಂಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಎಂ.ಕೆ. ಸ್ಟಾಲಿನ್ ಅವರ ವೈರಲ್ ಹ್ಯಾಂಡ್ ಗೆಸ್ಚರ್‌ನ್ನು ಮಿಮಿಕ್ ಮಾಡಿ ಸಂಚಲನ ಸೃಷ್ಟಿಸಿದ್ದಾರೆ. ವಿಜಯ್ ಭಾಷಣದ ಬಳಿಕ ಡಿಎಂಕೆ ಸದಸ್ಯರು ವಾಕೌಟ್ ನಡೆಸಿದ್ದಾರೆ.

ತಮಿಳುನಾಡು ರಾಜಕೀಯದಲ್ಲಿ ಈಗ ಒನ್ ಅಂಡ್ ಓನ್ಲಿ 'ದಳಪತಿ'ಯದ್ದೇ ಕಾರುಬಾರು. ಸಿನಿಮಾ ಪರದೆ ಮೇಲಿನ ಅವರ ಮಾಸ್ ಡೈಲಾಗ್‌ಗಳನ್ನ ನೋಡಿ ಸೀಟಿ ಹೊಡೆದ ಜನ, ಈಗ ಅಸೆಂಬ್ಲಿಯಲ್ಲಿ ಅವರ ರಿಯಲ್ ಆಕ್ಷನ್ ನೋಡಿ ದಂಗಾಗಿದ್ದಾರೆ. ಹೌದು, ತಮಿಳುನಾಡು ವಿಧಾನಸಭೆಯಲ್ಲಿ ಮೊನ್ನೆ ನಡೆದಿದ್ದು ಸಾಮಾನ್ಯ ಹೈಡ್ರಾಮಾ ಅಲ್ಲ. ಡಿಎಂಕೆ ನಾಯಕರ ಪಾರ್ಟಿ ಫಂಡ್ ವಿಚಾರ ಎತ್ತಿ ಹಿಗ್ಗಾಮುಗ್ಗಾ ತರಾಟೆಗೆ ತಗೊಂಡ ಮುಖ್ಯಮಂತ್ರಿ ವಿಜಯ್, ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಅವರ ವೈರಲ್ ಹ್ಯಾಂಡ್ ಗೆಸ್ಚರ್ ಅನ್ನ ಮಿಮಿಕ್ ಮಾಡುವ ಮೂಲಕ ಇಡೀ ಸದನದಲ್ಲಿ ಧೂಳೆಬ್ಬಿಸಿದ್ದಾರೆ.

ಸಿನಿಮಾಗಳಲ್ಲಿ ದಳಪತಿ ವಿಜಯ್ ಆಕ್ಷನ್ , ಮ್ಯಾನರಿಂಸಂ, ಕೌಂಟರ್ಗಳನ್ನ ನೋಡಿ ಎಂಜಾಯ್ ಮಾಡಿದ್ದೀರಲ್ವಾ..? ವಿಜಯ್ ರಾಜಕೀಯಕ್ಕೆ ಬಂದ ಮೇಲೆ ಅವುಗಳನ್ನ ಫ್ಯಾನ್ಸ್ ಮಿಸ್ ಮಾಡಿಕೊಳ್ತಾ ಇದ್ರು. ಆದ್ರೆ ಸೋಮವಾರ ತಮಿಳುನಾಡು ಅಸೆಂಬ್ಲಿಯಲ್ಲಿ ವಿಜಯ್ ಮಾತನಾಡಿದ ರೀತಿ, ಅವರ ಌಕ್ಷನ್, ಅವರ ಹಾವ ಭಾವ ಌಕ್ಷನ್ ಹೀರೋ ರೀತಿನೇ ಇತ್ತು. ಈ ಹಿಂದೆ ತಮಿಳುನಾಡು ಚುನಾವಣೆಗೂ ಮುನ್ನ ಸ್ಟಾಲಿನ್ರ ಹ್ಯಾಂಡ್ ಗೆಸ್ಚರ್ ಒಂದು ವೈರಲ್ ಆಗಿತ್ತು.

ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕಾಂಗ್ರೆಸ್ ಜೊತೆಗಿನ ಸೀಟು ಹಂಚಿಕೆ ಮಾತುಕತೆ ನಂತರ ಹೊರಬರುವಾಗ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸ್ಪಾಂಟೇನಿಯಸ್ ಆಗಿ 'ಎಲ್ಲವೂ ಮುಗಿಯಿತು' ಅನ್ನೋ ಅರ್ಥದಲ್ಲಿ ಕೈ ಸನ್ನೆ ಮಾಡಿದ್ದರು. ಇದು ವಿಜಯ್, ಮತ್ತು ಎಐಎಡಿಎಂಕೆಗೆ ಸ್ಟಾಲಿನ್ ತೋರಿಸಿರೋ ಕೈ ಸನ್ನೇ ಅಂತ ಕೂಡ ವೈರಲ್ ಆಗಿತ್ತು. ಆದ್ರೆ ಮುಂದೆ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ ಸೋತು ವಿಜಯ್ ನಾಯಕತ್ವದ ಟಿವಿಕೆ ಅಧಿಕಾರಕ್ಕೆ ಬಂತು. ಅಷ್ಟೆಲ್ಲಾ ಯಾಕೆ ಖುದ್ದು ಸ್ಟಾಲಿನ್ ತಮ್ಮ ಭದ್ರಕೋಟೆಯಲ್ಲಿ ಟಿವಿಕೆ ಅಭ್ಯರ್ಥಿ ಮುಂದೆ ಸೋಲು ಕಂಡಿದ್ರು.

ಆಗ ಟಿವಿಕೆ ಅಭ್ಯರ್ಥಿ ಎರಡೂ ಕೈಗಳಿಂದ ಸನ್ನೆ ಮಾಡಿ ಸ್ಟಾಲಿನ್ನ ಫಿನಿಶ್ ಮಾಡಿದೆ ಅಂತ ಸನ್ನೆ ಮಾಡಿದ್ರು. ಹೌದು ಸೋಮವಾರ ತಮಿಳುನಾಡು ಅಸೆಂಬ್ಲಿನಲ್ಲಿ ಫುಲ್ ಹೈಡ್ರಾಮಾ ನಡೆದಿದೆ. ಡಿಎಂಕೆ ಪಾರ್ಟಿ ಬಗ್ಗೆ ರೋಷಾವೇಷದಿಂದ ವಾಗ್ದಾಳಿ ನಡೆಸಿದ ವಿಜಯ್, ಪಾರ್ಟಿ ಫಂಡ್ ಹೆಸರಲ್ಲಿ ನೀವು ಮಾಡಿದ ಲೂಟಿ ಬಗ್ಗೆ ಗೊತ್ತಿದೆ ಅಂದಿದ್ದಾರೆ. ಅಷ್ಟೇ ಅಲ್ಲ ಮಾತಿನ ಕೊನೆಗೆ ‘ ಎಲ್ಲರೂ ಒಂದು ಌಕ್ಷನ್ ಮಾಡಬೇಕು ಅಂತ ಕೇಳ್ತಾ ಇದ್ದಾರೆ... ಮಾಡ್ಲಾ ಅಂತ ಪರ್ಮಿಷನ್ ಕೇಳಿ.. ಸ್ಟಾಲಿನ್ನ ಗೆಸ್ಚೆರ್ನ ಮಿಮಿಕ್ ಮಾಡಿದ್ದಾರೆ.

ಸ್ಟಾಲಿನ್ನ ಮಿಮಿಕ್ ಮಾಡಿದ್ದಷ್ಟೇ ಅಲ್ಲ ಒಂದು ಕಥೆ ಹೇಳ್ತಿನಿ ಕೇಳಿ ಅಂತ ಹೇಳ್ತಾ , ಅದ್ರಲ್ಲಿ ನಿಮ್ಮ ಅಪ್ಪ ಎಲ್ಲಿ ಅಂತ ಕೇಳಲಾಗುತ್ತೆ ಅಂದಿದ್ದಾರೆ. ಆ ಮೂಲಕ ಸ್ಟಾಲಿನ್ ಪುತ್ರ ಉದಯನಿಧಿಗೆ , ನಿಮ್ಮಪ್ಪ ಎಲ್ಲಿ ಕಾಣ್ತಾ ಇಲ್ಲ. ಅವರನ್ನ ಸೋಲಿಸಿ ಮನೇಲಿ ಕೂರಿಸಿದ್ದೀವಿ ಅಂತ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ವಿಜಯ್ ಮಾತು-ಕಥೆ-ಹಾವ-ಭಾವ ನೋಡಿದವರಿಗೆ ಥೇಟ್ ಅವರ ಮಾಸ್ ಸಿನಿಮಾಗಳೇ ನೆನಪಾಗಿವೆ. ಇವರು ಸಿನಿಮಾದಲ್ಲಷ್ಟೇ ಮಾಸ್ ಲೀಡರ್ ಅಲ್ಲ ಪಾಲಿಟಿಕ್ಸ್ ನಲ್ಲೂ ಮಾಸ್ ಮಹರಾಜ ಅಂತಿದ್ದಾರೆ ಫ್ಯಾನ್ಸ್. ಅದ್ರೆ ಡಿಎಂಕೆ ಸಪೋರ್ಟರ್ಸ್ ವಿಜಯ್ ರಾಜಕೀಯವನ್ನ ಸಿನಿಮಾ ಅಂದುಕೊಂಡುಬಿಟ್ಟಿದ್ದಾರೆ.

ಕೌಂಟರ್ ಕೊಟ್ಟ ವಿಜಯ್

ಸಿನಿಮಾ ಡೈಲಾಗ್ ಹೊಡೆದಷ್ಟು ಸುಲಭ ಅಲ್ಲ ರಾಜಕಾರಣ ಅಂತ ಟೀಕೆ ಮಾಡ್ತಾ ಇದ್ದಾರೆ. ವಿಜಯ್ ಪಾರ್ಟಿಗೆ ಬಹುಮತ ಇರಲಿಲ್ಲ. ಸ್ಟಾಲಿನ್ ಡಿಎಂಕೆ ಮೈತ್ರಿಯ ಪಕ್ಷಗಳನ್ನ ಟಿವಿಕೆ ಜೊತೆಗೆ ಹೋಗದಂತೆ ತಡೆದಿದ್ರೆ ವಿಜಯ್ ಸಿಎಂ ಆಗ್ತಾ ಇರಲಿಲ್ಲ. ಸೋ ವಿಜಯ್ ಸರ್ಕಾರ ಸ್ಟಾಲಿನ್ ಕೊಟ್ಟ ಭಿಕ್ಷೆ ಅನ್ನೋ ಅರ್ಥದಲ್ಲಿ ಕೆಲ ಡಿಎಂಕೆ ನಾಯಕರು ಮಾತನಾಡಿದ್ರು. ಅದಕ್ಕೂ ಕೌಂಟರ್ ಕೊಟ್ಟ ವಿಜಯ್, ಇದು ಸ್ಟಾಲಿನ್ ಕೊಟ್ಟ ಭಿಕ್ಷೆ ಅಲ್ಲ ಜನ ಕೊಟ್ಟ ಭಿಕ್ಷೆ ಅಂದಿದ್ದಾರೆ. ವಿಜಯ್ ಮಾತುಗಳನ್ನ ಕೇಳಿ ಡಿಎಂಕೆ ಸದಸ್ಯರು ಸದನದಿಂದ ವಾಕೌಟ್ ಮಾಡಿದ್ದಾರೆ. ಒಟ್ನಲ್ಲಿ ತಮಿಳುನಾಡು ಅಸೆಂಬ್ಲಿಯಲ್ಲಿ ನಡೆದ ಸನ್ನಿವೇಶಗಳು ಸಿನಿಮಾ ಸೀನ್ಗಳಿಗಿಂತಲೂ ರೋಚಕ ಆಗಿವೆ. ವಿಜಯ್ ಫ್ಯಾನ್ಸ್ಗೆ ಅವರದ್ದೇ ಸಿನಿಮಾ ನೋಡಿದ ಅನುಭವ ಕೊಡ್ತಾ ಇವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Darshan Bail Plea: ದರ್ಶನ್ ಕೇಸ್‌ನಲ್ಲಿ ಏಕಾಏಕಿ ವಕೀಲರ ಬದಲಾವಣೆ: ಇದರ ಹಿಂದೆ ಏನಿದೆ?
Second Marriage: ತನ್ನದೇ ಹೆಂಡತಿಯ 2ನೇ ಮದುವೆಗೆ ಬಂದು ದಾಂಪತ್ಯಕ್ಕೆ ಶುಭ ಕೋರಿದ ಮಾಜಿ ಗಂಡ! ಫೋಟೋ ವೈರಲ್