U ಟರ್ನ್ ಹೊಡೆದ್ರಾ Thalapathy Vijay? ಮತ್ತೆ ಸಿನಿಮಾನೇ ಗತಿ..! ಆದರೆ ಸಿಎಂ, ಇಲ್ಲದೇ ಹೋದರೇ ಚಿತ್ರರಂಗಕ್ಕೆ ರಿಟರ್ನ್..?

Published : Mar 26, 2026, 04:47 PM IST
TVK Vijay

ಸಾರಾಂಶ

ರಾಜಕೀಯ ಪ್ರವೇಶಕ್ಕಾಗಿ 'ಜನನಾಯಗನ್' ತಮ್ಮ ಕೊನೆಯ ಸಿನಿಮಾ ಎಂದು ಘೋಷಿಸಿದ್ದ ದಳಪತಿ ವಿಜಯ್, ಇದೀಗ ಯು-ಟರ್ನ್ ಹೊಡೆಯುವ ಸಾಧ್ಯತೆ ಇದೆ. ಚುನಾವಣೆಯಲ್ಲಿ ನಿರೀಕ್ಷಿತ ಯಶಸ್ಸು ಸಿಗದಿದ್ದರೆ, ಮತ್ತೆ ಸಿನಿಮಾಗಳಲ್ಲಿ ಸಕ್ರಿಯರಾಗಲು ಅವರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಚೆನ್ನೈ: ದಳಪತಿ ವಿಜಯ್, ಜನನಾಯಗನ್ ತನ್ನ ಕೊನೆ ಸಿನಿಮಾ ಅಂತ ಘೋಷಣೆ ಮಾಡಿದ್ರು. ಮುಂದೆ ಫುಲ್ ಟೈಂ ಪಾಲಿಟಿಕ್ಸ್ ಅಂದಿದ್ರು. ಆದ್ರೆ ಸದ್ಯದ ಸ್ಥಿತಿ ನೋಡ್ತಾ ಇದ್ರೆ ವಿಜಯ್ ಗೆ ಪಾಲಿಟಿಕ್ಸ್​​ನಲ್ಲಿ ದೊಡ್ಡ ಸಕ್ಸಸ್ ಸಿಗೋದು ಅಷ್ಟು ಸುಲಭ ಅಲ್ಲ. ಸೋ ವಿಜಯ್ ಯು ಟರ್ನ್ ಹೊಡೆದ್ರಾ? ಚುನಾವಣೆ ಫಲಿತಾಂಶ ನೋಡಿಕೊಂಡು ಮತ್ತೆ ಬಣ್ಣ ಹಚ್ಚೋ ತೀರ್ಮಾನಕ್ಕೆ ಬಂದ್ರಾ? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.

ಚುನಾವಣೆ ಫಲಿತಾಂಶದ ಬಳಿಕ ಮತ್ತೆ ಸಿನಿಮಾಗೆ ಬಣ್ಣ

ಯೆಸ್ ಕಾಲಿವುಡ್‌ನ ಸೂಪರ್ ಸ್ಟಾರ್ , ತಮಿಳಿನ ಅತ್ಯಂತ ಜನಪ್ರಿಯ ಸಿನಿತಾರೆ ದಳಪತಿ ವಿಜಯ್ ಟಿವಿಕೆ ಪಕ್ಷವನ್ನ ಕಟ್ಟಿ, ಚುನಾವಣೆಯಲ್ಲಿ ಸೆಣೆಸ್ತಾ ಇದ್ದಾರೆ. ಅಸಲಿಗೆ ರಾಜಕೀಯಕ್ಕೆ ಬರೋ ಮುನ್ನ ಜನನಾಯಗನ್ ಚಿತ್ರವೇ ತಮ್ಮ ಕೊನೆ ಸಿನಿಮಾ ಅಂತ ವಿಜಯ್ ಘೊಷಣೆ ಮಾಡಿದ್ರು. ರಾಜಕೀಯಕ್ಕೆ ಬಂದ ಮೇಲೆ ಮತ್ತೆ ಬಣ್ಣ ಹಚ್ಚಲ್ಲ. ಇದೇ ಕೊನೆ ಸಿನಿಮಾ ನೋಡಿಕೊಂಡು ಬಿಡಿ ಅಂತ ಜನನಾಯಗನ್ ಇವೆಂಟ್​ನಲ್ಲಿ ಭಾಷಣ ಮಾಡಿದ್ರು. ಆದ್ರೆ ಇಲ್ಲಿ ತನಕ ಜನನಾಯಗನ್ ರಿಲೀಸ್ ಆಗ್ಲಿಲ್ಲ.

ಜನವರಿ 9ಕ್ಕೆ ರಿಲೀಸ್ ಆಗಬೇಕಿದ್ದ ಜನನಾಯಗನ್ , ಸೆನ್ಸಾರ್ ಟ್ರಬಲ್​ನಿಂದ ರಿಲೀಸ್ ಆಗಲಿಲ್ಲ. ಆ ಬಳಿಕ ಸುಪ್ರೀಂ ಕೋರ್ಟ್​ಗೆ ಹೋದ ಜನನಾಯಗನ್ ಟೀಂಗೆ ಯಶಸ್ಸು ಸಿಗಲಿಲ್ಲ. ತಿರುಗಾ ರೀ ಸೆನ್ಸಾರ್ ಮಾಡಿಸೋ ಹೊತ್ತಿಗೆ ಎಲೆಕ್ಷನ್ ಬಂತು. ಚುನಾವಣಾ ನೀತಿ ಸಂಹಿತೆ ಕಾರಣಕ್ಕೆ , ಎಲೆಕ್ಷನ್ ಮುಗಿರೋ ತನಕ ಚಿತ್ರ ರಿಲೀಸ್ ಮಾಡೋ ಹಾಗಿಲ್ಲ.

ಚುನಾವಣೆಯಲ್ಲಿ ಟಿವಿಕೆ ಪಾರ್ಟಿ ಜಯಭೇರಿ ಬಾರಿಸುತ್ತಾ..?

ಹೌದು ಮುಂದಿನ ತಿಂಗಳ ಕೊನೆವಾರ ತಮಿಳುನಾಡಿನಲ್ಲಿ ಚುನಾವಣೆ ನಡೀತಾ ಇದೆ. ವಿಜಯ್‌ರ ಟಿವಿಕೆ ಪಕ್ಷ ಏಕಾಂಗಿಯಾಗಿ ಸ್ಪರ್ದೆ ಮಾಡ್ತಾ ಇದೆ. ಯಾರ ಜೊತೆಗೂ ಮೈತ್ರಿ ಮಾಡಿಕೊಳ್ಳದೇ ಏಕಾಂಗಿಯಾಗಿ ಸ್ಪರ್ಧಿಸಿ ಗೆದ್ದು ಸಿಎಂ ಆಗ್ತಿನಿ ಅಂತಿದ್ದಾರೆ ವಿಜಯ್. ಆದ್ರೆ ಚುನಾವಣೆ ಪೂರ್ವ ಸಮೀಕ್ಷೆ ನೋಡ್ತಾ ಇದ್ರೆ , ಇದು ಬಹುತೇಕ ಅಸಾಧ್ಯ. ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಸೋ ಮೊದಲ ಯತ್ನದಲ್ಲಿ ವಿಜಯ್‌​ಗೆ ದೊಡ್ಡ ಯಶಸ್ಸು ಸಿಕ್ಕೋದು ಕಷ್ಟ ಅಂತ ಹೇಳಲಾಗ್ತಾ ಇದೆ.

ಕರೂರು ದುರಂತದಲ್ಲಿ 41 ಜನರು ಸಾವನ್ನಪ್ಪಿದ್ದು, ಸಿಬಿಐ ತನಿಖೆ, ಜೊತೆಗೆ ವಿಜಯ್ ಕುಟುಂಬದ ವಿವಾದ ಕೂಡ ಅವರಿಗೆ ದೊಡ್ಡ ಏಟು ಕೊಡಬಹುದು ಅಂತ ಹೇಳಲಾಗ್ತಾ ಇದೆ. ಸೋ ಒಂದು ವೇಳೆ ಅಂದುಕೊಂಡ ಲೆವೆಲ್‌ಗೆ ಯಶಸ್ಸು ಸಿಗದೇ ತಮ್ಮ ಪಕ್ಷ ಕೆಲವೇ ಸ್ಥಾನ ಗಳಿಸಿದ್ರೆ, ವಿಜಯ್ ಮತ್ತೆ ಸಿನಿಮಾಗಳಲ್ಲಿ ಆಕ್ಟಿವ್ ಆಗೋದ್ರ ಬಗ್ಗೆ ಯೋಚಿಸಿದ್ದಾರಂತೆ. ಮುಂದಿನ ಐದು ವರ್ಷ, ವರ್ಷಕ್ಕೆರಡು ಸಿನಿಮಾ ಮಾಡೋದಾಗಿ ಆಪ್ತರ ಬಳಿ ಹೇಳಿದ್ದಾರಂತೆ. ಎನಿವೇ ದಳಪತಿ ಸಿನಿಮಾ ಮತ್ತು ರಾಜಕೀಯ ಭವಿಷ್ಯ ಏನಾಗಲಿದೆ ಅನ್ನೋದು ಮೇ 3ಕ್ಕೆ ಗೊತ್ತಾಗಲಿದೆ.

ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ತಾಯಿ ಮೋನಾ ಕಪೂರ್ ನೆನೆದು ಕಣ್ಣೀರಿಟ್ಟ ಅಂಶುಲಾ, ಅರ್ಜುನ್ ಕಪೂರ್; ಅನಾಥ ಮಕ್ಕಳ ಆರ್ತನಾದಕ್ಕೆ ಕಣ್ಣೀರಾದ ನೆಟ್ಟಿಗರು!
ನೋ ಪಾರ್ಕಿಂಗ್‌ನಲ್ಲಿ ಗಾಡಿ ನಿಲ್ಸೋಕೆ ಧೈರ್ಯ ಇಲ್ಲ, ಇನ್ನು ಕತೆ ಕದೀತೀನಾ ಸರ್‌: ಡಾರ್ಲಿಂಗ್‌ ಕೃಷ್ಣ