
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡಗೆ ಈ ಬಾರಿಯ ದೀಪಾವಳಿ ಹೊಸ ಹಬ್ಬ. ಈ ಹಿನ್ನೆಲೆಯಲ್ಲಿ ತುಂಬಾ ಸ್ಪೆಷಲ್ಲಾಗಿ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಬಿಡುವೇ ಇಲ್ಲದ ಸಿನಿಮಾ ಕೆಲಸಗಳ ನಡುವೆ ಹಬ್ಬಕ್ಕೆ ಕೊಂಚ ಬ್ರೇಕ್ ತೆಗೆದುಕೊಂಡಿರುವ ಈ ಜೋಡಿ, ಕುಟುಂಬ ಸಮೇತ ಜಪಾನ್‌ಗೆ ಹಾರಿದೆ.
ಜಪಾನ್‌ನಲ್ಲಿ ದೀಪಾವಳಿ ಆಚರಿಸಲು ಕುಟುಂಬ ಸಮೇತ ಹೋಗಿದೆ. ಈ ಬಗ್ಗೆ ಖುದ್ದು ರಶ್ಮಿಕಾ ಮಂದಣ್ಣ ಅವರೇ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು, ಅವರ ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ನಿಮ್ಮೆಲ್ಲರ ಬಾಳಿನಲ್ಲಿ ಸದಾ ಸುಖ, ಉತ್ತಮ ಆರೋಗ್ಯ ಮತ್ತು ನೆಮ್ಮದಿ ಇರಲಿ. ನಿಮ್ಮ ಕನಸುಗಳೆಲ್ಲ ನನಸಾಗಲಿ ಎಂದು ರಶ್ಮಿಕಾ ಹಾರೈಸಿದ್ದಾರೆ.
ಇದೇ ಸಂದರ್ಭದಲ್ಲಿ ಪತಿ ವಿಜಯ್ ದೇವರಕೊಂಡ ಜೊತೆಗೆ ಕ್ಲಿಕ್ಕಿಸಿಕೊಂಡ ಮುದ್ದಾದ ರೊಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಹೊಸ ಜೋಡಿಗಳು ವಿಕೇಷನ್‌ಗೆ ಹೋಗುವಾಗ ಇಬ್ಬರೇ ಹೋಗುತ್ತಾರೆ. ಆದರೆ ವಿಶೇಷ ಅಂದ್ರೆ ರಶ್ಮಿಕಾ ಮಂದಣ್ಣ ಮತ್ತು ದೇವರಕೊಂಡ ತಮ್ಮ ಕುಟುಂಬವನ್ನೂ ಕರೆದಕೊಂಡು ಹೋಗಿದೆ.
ಇನ್ನೊಂದೆಡೆ ನಟ ವಿಜಯ್ ದೇವರಕೊಂಡ ಅವರು ಜಪಾನ್‌ನಲ್ಲಿ ಸಾಂಪ್ರದಾಯಿಕ ಹೋಮ (ಹವನ) ನೆರವೇರಿಸಿದ ವಿಶೇಷ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಜಪಾನ್‌ನಲ್ಲೂ ದೀಪಾವಳಿ ದಿನ ಹೋಮ ಮಾಡಲು ದಾರಿ ಸಿಕ್ಕಿತು. ದೇವರಕೊಂಡ ಕುಟುಂಬದ ಕಡೆಯಿಂದ ನಿಮ್ಮೆಲ್ಲರಿಗೂ ಹಬ್ಬದ ಪ್ರೀತಿಯ ಶುಭಾಶಯಗಳು ಎಂದು ಅವರು ಬರೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ಈ ಜೋಡಿ 'ಕಾಫಿ ವಿತ್ ಕರಣ್' ಶೋನಲ್ಲಿ ಒಟ್ಟಿಗೆ ಭಾಗವಹಿಸಿತ್ತು. ಆ ಕಾರ್ಯಕ್ರಮದಲ್ಲಿ ರಶ್ಮಿಕಾ ಮದುವೆ ಪ್ರಪೋಸ್ ಮಾಡಿದ ಬಗ್ಗೆ ವಿಜಯ್ ಆಡಿದ ಕೆಲವು ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದವು. ಈ ಎಲ್ಲಾ ಚರ್ಚೆಗಳ ಬೆನ್ನಲ್ಲೇ, ದಂಪತಿ ಒಟ್ಟಾಗಿ ದೀಪಾವಳಿ ಆಚರಿಸಿದ ಸುಂದರ ಕ್ಷಣಗಳನ್ನು ಹಂಚಿಕೊಂಡಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಈ ಬಾರಿಯ ದೀಪಾವಳಿಯು ನವ ಜೋಡಿಗಳಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡಗೆ ತುಂಬಾ ವಿಶೇಷವಾಗಿದೆ. ಮದುವೆ ನಂತರ ಇದೇ ಮೊದಲ ಬಾರಿಗೆ ದೀಪಾವಳಿ ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಫೆಬ್ರವರಿ 26, 2026 ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ತೆಲುಗು ಸಂಪ್ರದಾಯ ಹಾಗೂ ಕೊಡವ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಜಪಾನ್‌ನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಫೋಟೋ ವಿಡಿಯೋಗಳನ್ನ ನೋಡಿದ ಅವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಶುಭ ಹಾರೈಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.