
Great Secret Revealed, Rashmika Mandanna and Vijay Deverakonda couple in 'Koffee With Karan' show-ಕರಣ್ ಜೋಹರ್ ಚಾಟ್ ಶೋ ‘ಕಾಫಿ ವಿತ್ ಕರಣ್’ನಲ್ಲಿ ದಕ್ಷಿಣ ಭಾರತದ ಮೋಸ್ಟ್ ಫೇಮಸ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಹೇಳಿರೋ ಸೀಕ್ರೆಟ್ ಏನು?
ಬಾಲಿವುಡ್‌ನ ಖ್ಯಾತ ನಿರ್ಮಾಪಕ ಹಾಗೂ ನಿರೂಪಕ ಕರಣ್ ಜೋಹರ್ ತಮ್ಮ ಬಹುಜನಪ್ರಿಯ ‘ಕಾಫಿ ವಿತ್ ಕರನ್’ ಕಾರ್ಯಕ್ರಮದ ಒಂಬತ್ತನೇ ಸೀಸನ್‌ನೊಂದಿಗೆ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಬಾರಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಲು ವಿಶೇಷ ಅತಿಥಿಗಳ ಆಯ್ಕೆಯೂ ನಡೆಯುತ್ತಿದೆ. ಅದರಲ್ಲೂ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಸದ್ಯದ ಹಾಟ್ ಟಾಪಿಕ್ ಆಗಿದೆ.
ಮುಂಬೈನಲ್ಲಿ ಈ ಇಬ್ಬರು ಸ್ಟಾರ್‌ಗಳು ಕಾರ್ಯಕ್ರಮದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ ಎನ್ನಲಾಗಿದ್ದು, ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಅಭಿಮಾನಿಗಳಲ್ಲಿ ಕುತೂಹಲ ಗರಿಗೆದರಿದೆ. ವಿಜಯ್ ಹಾಗೂ ರಶ್ಮಿಕಾ ತೆರೆಮೇಲೆ ಹಲವು ಬಾರಿ ತಮ್ಮ ಕೆಮಿಸ್ಟ್ರಿಯಿಂದ ಗಮನ ಸೆಳೆದಿದ್ದಾರೆ. ಇವರಿಬ್ಬರ ನಡುವಿನ ಬಾಂಧವ್ಯದ ಬಗ್ಗೆಯೂ ಆಗಾಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ಕರಣ್ ಜೋಹರ್ ಎದುರು ಈ ಜೋಡಿ ಕುಳಿತುಕೊಳ್ಳಲಿದೆ ಎಂಬ ಸುದ್ದಿ ಸಹಜವಾಗಿಯೇ ಸಖತ್ ಸದ್ದು ಮಾಡುತ್ತಿದೆ.
ಇನ್ನು ವಿಜಯ್ ಮತ್ತು ರಶ್ಮಿಕಾ ಸದ್ಯ ತಮ್ಮ ಮುಂಬರುವ ‘ರಣಬಲಿ’ ಸಿನಿಮಾದ ಪ್ರಚಾರದಲ್ಲೂ ಬ್ಯುಸಿಯಾಗಿದ್ದಾರೆ. ಅಕ್ಟೋಬರ್ 16ರಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು, ಅದರ ಪ್ರಚಾರದ ಭಾಗವಾಗಿಯೇ ಈ ಶೋಗೆ ಇಬ್ಬರೂ ಆಗಮಿಸಿದ್ದಾರೆ ಎನ್ನಲಾಗಿದೆ. ಆದರೆ ಸಿನಿಮಾದ ಪ್ರಚಾರಕ್ಕಿಂತಲೂ ‘ಕಾಫಿ ವಿತ್ ಕರಣ್’ನಲ್ಲಿ ಇವರಿಬ್ಬರು ಏನು ಮಾತನಾಡಲಿದ್ದಾರೆ ಎಂಬುದೇ ಅಭಿಮಾನಿಗಳ ಪ್ರಮುಖ ಪ್ರಶ್ನೆಯಾಗಿದೆ.
ಕರಣ್ ಜೋಹರ್ ಅವರ ಪ್ರಶ್ನೆಗಳೇ ಕೆಲವೊಮ್ಮೆ ಸೆಲೆಬ್ರಿಟಿಗಳಿಂದ ನಿರೀಕ್ಷೆಗೂ ಮೀರಿದ ಉತ್ತರಗಳನ್ನು ಹೊರತೆಗೆಯುತ್ತವೆ. ಪ್ರೀತಿ, ಮದುವೆ, ಸ್ನೇಹ, ಸಿನಿಮಾ ಹಾಗೂ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕರಣ್ ಕೇಳುವುದು ಶೋನ ಪ್ರಮುಖ ಆಕರ್ಷಣೆ. ಹೀಗಾಗಿ ವಿಜಯ್-ರಶ್ಮಿಕಾ ಎಪಿಸೋಡ್‌ನಲ್ಲಿ ಯಾವ ವಿಚಾರಗಳು ಚರ್ಚೆಯಾಗಲಿವೆ? ಇವರಿಬ್ಬರು ತಮ್ಮ ಸಂಬಂಧದ ಬಗ್ಗೆ ಏನಾದರೂ ಮಾತನಾಡಲಿದ್ದಾರಾ? ಇಂತಹ ಹಲವು ಪ್ರಶ್ನೆಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.
ವಿಶೇಷವೆಂದರೆ, ‘ಕಾಫಿ ವಿತ್ ಕರಣ್’ ಕಾರ್ಯಕ್ರಮದ ಈ ಸೀಸನ್ ಅಂತಿಮ ಸೀಸನ್ ಎಂದು ಕರನ್ ಜೋಹರ್ ಈಗಾಗಲೇ ಘೋಷಿಸಿದ್ದಾರೆ ಎನ್ನಲಾಗಿದೆ. ಬರೋಬ್ಬರಿ ಎರಡು ದಶಕಗಳ ಕಾಲ ಪ್ರೇಕ್ಷಕರನ್ನು ರಂಜಿಸಿರುವ ಈ ಶೋಗೆ ಇದು ವಿದಾಯದ ಹಂತವಾಗಿರುವುದರಿಂದ, ಕೊನೆಯ ಸೀಸನ್ ಅನ್ನು ಮತ್ತಷ್ಟು ವಿಶೇಷವಾಗಿಸುವ ಪ್ರಯತ್ನ ನಡೆಯುತ್ತಿದೆ.
ಅಂತಹ ಸಂದರ್ಭದಲ್ಲಿ ದಕ್ಷಿಣ ಭಾರತದ ಜನಪ್ರಿಯ ಜೋಡಿಯಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಒಂದೇ ಕೌಚ್‌ನಲ್ಲಿ ಕುಳಿತುಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಡಬಲ್ ಟ್ರೀಟ್ ಆಗಿದೆ. ಇವರಿಬ್ಬರ ನಡುವಿನ ಕೆಮಿಸ್ಟ್ರಿ, ಕರಣ್ ಜೋಹರ್ ಅವರ ಚುರುಕು ಪ್ರಶ್ನೆಗಳು ಮತ್ತು ಹೊರಬರಬಹುದಾದ ಕುತೂಹಲಕಾರಿ ಉತ್ತರಗಳು ಸೇರಿ ಈ ಎಪಿಸೋಡ್ ಭರ್ಜರಿ ಮನರಂಜನೆಯ ಹಂಗಾಮಾ ಸೃಷ್ಟಿಸುವ ನಿರೀಕ್ಷೆ ಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.