ಹಿರಿಯ ನಟ ಶೋಭನ್ ಬಾಬು ಪತ್ನಿ ಶಾಂತಕುಮಾರಿ ನಿಧನ: ಗೆಳತಿಯೊಂದಿಗೆ ಮಾತನಾಡುತ್ತಿದ್ದಾಗಲೇ ಹೃದಯಾಘಾತ

Published : Jul 10, 2026, 06:05 PM IST
Sobhan Babu

ಸಾರಾಂಶ

ಹಿರಿಯ ತೆಲುಗು ನಟ, ದಿವಂಗತ ಶೋಭನ್ ಬಾಬು ಅವರ ಪತ್ನಿ ಶಾಂತಕುಮಾರಿ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ಗಣ್ಯರು ಶೋಭನ್ ಬಾಬು ಕುಟುಂಬಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.

ತೆಲುಗು ಚಿತ್ರರಂಗದಲ್ಲಿ 'ಅಂದಗಾರ', 'ಸೊಗ್ಗಾಡು' ಅಂತಾನೇ ಖ್ಯಾತರಾಗಿದ್ದ ದಿವಂಗತ ನಟ ಶೋಭನ್ ಬಾಬು ಅವರ ಪತ್ನಿ ಶಾಂತಕುಮಾರಿ (96) ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು, ಗುರುವಾರ ಚೆನ್ನೈನಲ್ಲಿ ನಿಧನರಾದರು. ಆರೋಗ್ಯ ಹದಗೆಟ್ಟಿದ್ದರಿಂದ ನಾಲ್ಕು ದಿನಗಳ ಹಿಂದೆ ಕುಟುಂಬಸ್ಥರು ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಗುರುವಾರ, ಅವರೊಬ್ಬ ಆಪ್ತ ಗೆಳತಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಗೆಳತಿಯೊಂದಿಗೆ ಪ್ರೀತಿಯಿಂದ ಮಾತನಾಡುತ್ತಿದ್ದಾಗಲೇ ಶಾಂತಕುಮಾರಿ ಅವರಿಗೆ ಹಠಾತ್ ಹೃದಯಾಘಾತವಾಗಿದೆ. ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಕುಟುಂಬದ ಸದಸ್ಯರು ಖಚಿತಪಡಿಸಿದ್ದಾರೆ.

ಪ್ರಚಾರದಿಂದ ದೂರವೇ ಇದ್ದ ಶಾಂತಕುಮಾರಿ..

ಶೋಭನ್ ಬಾಬು ಮತ್ತು ಶಾಂತಕುಮಾರಿ ಅವರು 1958ರ ಮೇ 15ರಂದು ಮದುವೆಯಾಗಿದ್ದರು. ದಶಕಗಳ ಕಾಲ ಆದರ್ಶ ದಾಂಪತ್ಯ ನಡೆಸಿದ್ದ ಈ ಜೋಡಿಗೆ ನಾಲ್ವರು ಮಕ್ಕಳಿದ್ದಾರೆ. ಮಗ ಕರುಣ ಶೇಷು ಹಾಗೂ ಮೃದುಲಾ, ಪ್ರಶಾಂತಿ, ನಿವೇದಿತಾ ಎಂಬ ಮೂವರು ಹೆಣ್ಣುಮಕ್ಕಳಿದ್ದಾರೆ. ಶೋಭನ್ ಬಾಬು ಚಿತ್ರರಂಗದಲ್ಲಿ ಸ್ಟಾರ್ ಹೀರೋ ಆಗಿ ದೊಡ್ಡ ಯಶಸ್ಸು ಕಂಡರೂ, ಶಾಂತಕುಮಾರಿ ಯಾವಾಗಲೂ ಪ್ರಚಾರ ಮತ್ತು ಆಡಂಬರದಿಂದ ದೂರವೇ ಉಳಿದಿದ್ದರು. ಅವರು ಸರಳ ಜೀವನ ನಡೆಸುತ್ತಾ, ಪತಿಯ ಯಶಸ್ಸಿಗೆ ಬೆನ್ನೆಲುಬಾಗಿ ನಿಂತಿದ್ದರು ಎಂದು ಕುಟುಂಬದ ಆಪ್ತರು ನೆನಪಿಸಿಕೊಳ್ಳುತ್ತಾರೆ.

ಚೆನ್ನೈನಲ್ಲಿ ಅಂತ್ಯಕ್ರಿಯೆ...

2008ರಲ್ಲಿ ಶೋಭನ್ ಬಾಬು ಕೂಡ ಹೃದಯಾಘಾತದಿಂದಲೇ ಹಠಾತ್ ನಿಧನರಾಗಿದ್ದರು. ಪತಿಯ ಸಾವಿನ ನಂತರ ಶಾಂತಕುಮಾರಿ ಸಾರ್ವಜನಿಕ ಜೀವನದಿಂದ ಸಂಪೂರ್ಣವಾಗಿ ದೂರ ಉಳಿದು, ಚೆನ್ನೈನಲ್ಲಿ ತಮ್ಮ ಕುಟುಂಬದೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಸದ್ಯ ಅವರ ಪಾರ್ಥಿವ ಶರೀರವನ್ನು ಚೆನ್ನೈನಲ್ಲಿರುವ ಅವರ ನಿವಾಸಕ್ಕೆ ಸ್ಥಳಾಂತರಿಸಲಾಗಿದೆ. ಇಂದು (ಶುಕ್ರವಾರ) ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಶಾಂತಕುಮಾರಿ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಮತ್ತು ಶೋಭನ್ ಬಾಬು ಅವರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Karavali ವಿವಾದ: ನೇರಪ್ರಸಾರದಲ್ಲಿ ಬಂದು ನಟ ಪ್ರಜ್ವಲ್​ ಕುರಿತು ನಟಿ ಮೇಘನಾ ರಾಜ್​ ಏನ್​ ಹೇಳಿದ್ರು
Karavali Controversy: ಕರಾವಳಿ 'ವಿವಾದ'ಕ್ಕೆ ಮತ್ತೊಂದು ಹೊಸ ತಿರುವು, ಮಾಧ್ಯಮ ಪ್ರಕಟಣೆ ನೀಡಿದ ನಿರ್ದೇಶಕ ಗುರುದತ್ ಗಾಣಿಗ!