ಕಾರ್ಗಿಲ್ ವಿಜಯ್ ದಿವಸ್ ದಿನ ‘ಉರಿ’ ರೀ-ರಿಲೀಸ್

By Web DeskFirst Published Jul 24, 2019, 2:04 PM IST
Highlights

ನಮ್ಮ ಸೇನೆ ಬಗ್ಗೆ ಹೆಮ್ಮೆ, ಅಭಿಮಾನ ಮೂಡುವಂತೆ ಮಾಡಿದ ಸಿನಿಮಾ ‘ಉರಿ’ | ನಮ್ಮ ಸೈನಿಕರ ಶಕ್ತಿ, ಸಾಮರ್ಥ್ಯವನ್ನು ಅದ್ಭುತವಾಗಿ ತೆರೆ ಮೇಲೆ ಕಟ್ಟಿಕೊಟ್ಟ ಸಿನಿಮಾ ಉರಿ | 

ಭಾರತೀಯ ಸೇನೆಯ ಶಕ್ತಿ, ಸಾಮರ್ಥ್ಯ, ತಾಕತ್ತನ್ನು ಅದ್ಭುತವಾಗಿ ತೆರೆ ಮೇಲೆ ತಂದುಕೊಟ್ಟ ಸಿನಿಮಾ ಉರಿ. ಪ್ರತಿಯೊಬ್ಬ ಭಾರತೀಯನಲ್ಲೂ ನಮ್ಮ ಹೆಮ್ಮೆಯ ಸೇನೆ, ಸೈನಿಕರ ಬಗ್ಗೆ ಅಭಿಮಾನ ಹೆಚ್ಚಾಗುವಂತೆ ಮಾಡಿದ ಸಿನಿಮಾವಿದು. ದೇಶಪ್ರೇಮದ ಭಾವನೆಯನ್ನು ಪ್ರತಿಯೊಬ್ಬರಲ್ಲೂ ಮೂಡುವಂತೆ ಮಾಡಿದ ಚಿತ್ರ.

‘ಡಿಯರ್ ಕಾಮ್ರೆಡ್‌’ನಲ್ಲಿ ರಶ್ಮಿಕಾ ನಟನೆ ಬ್ರಿಲಿಯಂಟ್! 

ಉರಿ; ಸರ್ಜಿಕಲ್ ಸ್ಟ್ರೈಕ್ ಸಿನಿಮಾ ಕಾರ್ಗಿಲ್ ವಿಜಯ್ ದಿವಸ್ ಜುಲೈ 26 ರಂದು ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ರಿಲೀಸ್ ಆಗಲಿದೆ.  ಮಿಕ್ಕಿ ಕೌಶಲ್, ಪರೇಶ್ ರಾವಲ್, ಯಾಮಿ ಗೌತಮ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಇದ್ದಾರೆ. 

ಕೋಟ್ಯಧಿಪತಿಯಲ್ಲಿ ಸಾಫ್ಟ್‌ವೇರ್ ಎಂಜಿನೀಯರ್ ಕೈ ಸೇರಿತು 6.4 ಲಕ್ಷ

2016 ರ ಸೆಪ್ಟೆಂಬರ್ 18 ರಂದು ಉರಿ ಸೇನಾ ನೆಲೆಮೇಲೆ ಪಾಕ್ ಭಯೋತ್ಪಾದಕರು ದಾಳಿ ಮಾಡ್ತಾರೆ. ಈ ದಾಳಿಯಲ್ಲಿ 19 ಸೈನಿಕರು ಹುತಾತ್ಮರಾಗುತ್ತಾರೆ. ಇದಕ್ಕೆ ಉತ್ತರವಾಗಿ ಭಾರತೀಯ ಸೈನಿಕರು ಸರ್ಜಿಕಲ್ ಸ್ಟ್ರೈಕ್ ನಡೆಸುತ್ತಾರೆ. ಸರ್ಜಿಕಲ್ ದಾಳಿಗೆ ಭಾರತೀಯ ಸೇನೆ ಹೇಗೆ ತಯಾರಿ ನಡೆಸಿತ್ತು? ಅವರಿಗೆ ಎದುರಾದ ಕಷ್ಟಗಳೇನು ಎಂಬುದನ್ನು ಈ ಸಿನಿಮಾ ಹೇಳುತ್ತದೆ.  ಆದಿತ್ಯ ಧಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. 
 

click me!