
ಕನ್ನಡ ಚಿತ್ರರಂಗದ ಮಟ್ಟಿಗೆ ರಿಯಲ್‌ಸ್ಟಾರ್ ಉಪೇಂದ್ರ ಏನೇ ಮಾಡಿದ್ರೂ ಅದು ಡಿೆರೆಂಟ್ ಅನ್ನೋರೇ ಹೆಚ್ಚು. ಆದರೆ, ಉಪ್ಪಿಯ ಈ ಟಾಲೆಂಟ್ ಕೇವಲ ಸಿನಿಮಾಕ್ಕೆ ಮಾತ್ರ ಸೀಮಿತವಲ್ಲ ಎಂಬುದಕ್ಕೆ ಇಲ್ಲೊಂದು ಸಾಕ್ಷ್ಯ ಸಿಕ್ಕಿದೆ! ಇತ್ತೀಚೆಗೆ ನಟಿ ಪ್ರಿಯಾಂಕಾ ಉಪೇಂದ್ರ ಅವರ ಹುಟ್ಟುಹಬ್ಬ ಅದ್ಧೂರಿಯಾಗಿ ನಡೆಯಿತು. ಅಂಬರೀಶ್, ಗಣೇಶ್, ಶ್ರೀಮುರಳಿ, ಅಮೂಲ್ಯ, ಸೃಜನ್ ಲೋಕೇಶ್ ಸೇರಿದಂತೆ ಚಿತ್ರರಂಗದ ಒಂದಿಷ್ಟು ಗಣ್ಯರು ಸೇರಿದ್ದರಿಂದ ಪ್ರಿಯಾಂಕಾ ಬರ್ತ್‌ಡೇ ರಂಗೇರಿತ್ತು. ತಮ್ಮ ಮನೆಯಲ್ಲೇ ನಡೆದ ಈ ಹುಟ್ಟುಹಬ್ಬದ ಸಂಭ್ರಮಕ್ಕೆ ಉಪೇಂದ್ರ ಏನ್ ಗ್‌ಟಿ ಕೊಡಬಹುದು? ದುಬಾರಿ ಗಿಫ್ಟ್ ಇದ್ದಿರಬಹುದಾ? ಎನ್ನುವ ಕುತೂಹಲ ಪ್ರಿಯಾಂಕಾಗೂ ಇತ್ತು.
ಆದರೆ, ಉಪ್ಪಿ ಕೇಕ್ ತಿನ್ನಿಸಿ ಒಂದು ಎನ್ವೆಲೊಪ್ ಕವರ್ ಕೊಟ್ಟರು! ಪ್ರಿಯಾಂಕಾ ಅಚ್ಚರಿಯಿಂದ ಆ ಕವರ್ ತೆರೆದಾಗ ಅದರಲ್ಲಿ ಬೆಲೆಬಾಳುವ ಉಡುಗೊರೆ ಇರಲಿಲ್ಲ. ಇದ್ದಿದ್ದು 2000ದ ಹೊಸ ನೋಟು! ಹೌದು, ಎಲ್ಲರೂ ಹೊಸ ನೋಟಿಗಾಗಿ ಕ್ಯೂನಲ್ಲಿ ನಿಂತು ಸುಸ್ತಾಗಿದ್ದಾರೆ. ಪ್ರಿಯಾಂಕಾಗೂ ಆ ಸರ್ಕಸ್ ಬೇಡವೆಂದು ಉಪ್ಪಿ ಹೊಸ ನೋಟು ಕೈಗಿಟ್ಟರಂತೆ. ಈ ಐತಿಹಾಸಿಕ ಹಿನ್ನೆಲೆಯ 2 ಸಾವಿರ ರುಪಾಯಿಯ ನೋಟನ್ನು ಪ್ರಿಯಾಂಕಾ ಭದ್ರವಾಗಿ ಇಟ್ಟುಕೊಂಡಿದ್ದಾರೆ. ಸದ್ಯದ ಮಟ್ಟಿಗೆ 2 ಸಾವಿರ ರುಪಾಯಿಯ ನೋಟೇ ಕಾಸ್ಟ್ಲಿ ಎನ್ನುವ ಸ್ಥಿತಿಯಲ್ಲಿ ದೇಶವಿದೆ! ಹಾಗಾಗಿ, ಈ ಸಣ್ಣ ಉಡುಗೊರೆಯನ್ನೂ ಅವರು ದುಬಾರಿಯಂತೆಯೇ ಕಾಣುತ್ತಿದ್ದಾರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.