
ಕುಖ್ಯಾತ ಡಾನ್ ದಾವೂದ್ ಇಬ್ರಾಹಿಂ ಅಂದ್ರೆ ಯಾರಿಗಾದರೂ ಒಮ್ಮೆ ನಡುಕ ಹುಟ್ಟುತ್ತೆ. ಆದರೆ, ಇಲ್ಲೊಬ್ಬಳು ನಟಿ ಆತನ ಹೆಸರನ್ನು ಕೇಳಿ ಕಂಪಿಸುವುದಿಲ್ಲ! ನೇರ ಅವನ ಮನೆಗೇ ಹೋಗಿ ಗಂಟೆಗಟ್ಟಲೆ ಕುಳಿತು, ಟೀ- ಬಿಸ್ಕತ್ತು ಸೇವಿಸಿ ವಾಪಸು ಬರುತ್ತಾಳೆ!
ಇಲ್ಲಿ ಆ ಧೈರ್ಯಗಿತ್ತಿ ಶ್ರದ್ಧಾ ಕಪೂರ್. ದಾವೂದ್ ಇಬ್ರಾಹಿಂ ಅವರ ಕುಟುಂಬ ಮುಂಬೈನಲ್ಲಿ ವಾಸವಿದ್ದು, ಶ್ರದ್ಧಾ ಅವರನ್ನೆಲ್ಲ ಭೇಟಿಯಾಗಿ ಬಂದಿದ್ದಾರೆ. ಇದಕ್ಕೆ ಕಾರಣವೂ ಇದೆ. ದಾವೂದ್ ಇಬ್ರಾಹಿಂ ಅವರ ಸೋದರಿ ಹಸೀನಾ ಬದುಕಿನ ಮೇಲೆ ಬಯೋಪಿಕ್ ಬರುತ್ತಿದೆ ಅನ್ನೋದು ಗೊತ್ತೇ ಇದೆ. ಆ ಪಾತ್ರವನ್ನು ಶ್ರದ್ಧಾ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಭರದಿಂದ ಸಾಗಿದ್ದು, ಶೂಟಿಂಗ್ ಸ್ಪಾಟ್‌ಗೂ ದಾವೂದ್ ಕುಟುಂಬಸ್ಥರು ಭೇಟಿ ಕೊಟ್ಟು ಶ್ರದ್ಧಾಗೆ ಸಲಹೆಗಳನ್ನು ಕೊಟ್ಟಿದ್ದಾರಂತೆ. ವಿಶೇಷವಾಗಿ ಹಸೀನಾ ಅವರ ಮೂಗುತಿಯ ಮೇಲೆ ಒಂದಿಷ್ಟು ರೋಚಕ ಕತೆಗಳನ್ನು ಶ್ರದ್ಧಾ ಕೇಳಿದ್ದಾರೆ. ಅಪೂರ್ವ ಲಾಖಿಯಾ ನಿರ್ದೇಶಿಸುತ್ತಿರುವ ‘ಹಸೀನಾ: ದಿ ಕ್ವೀನ್ ಆ್ ಮುಂಬೈ’ 2017ರ ಮಧ್ಯದಲ್ಲಿ ತೆರೆಕಾಣಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.