ಡಾನ್ ಜಯರಾಜ್ ಪಾತ್ರದಲ್ಲಿ ಉಪ್ಪಿ

Published : Jan 06, 2017, 06:18 PM ISTUpdated : Apr 11, 2018, 12:51 PM IST
ಡಾನ್  ಜಯರಾಜ್ ಪಾತ್ರದಲ್ಲಿ ಉಪ್ಪಿ

ಸಾರಾಂಶ

ಈ ಪೈಕಿ ಜಯರಾಜ್‌ನ ಕತೆಗೆ ಮಾತ್ರ ಫಿಕ್ಸ್ ಮಾಡಿಕೊಂಡು ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ ನಿರ್ದೇಶಕ

ಕನ್ನಡದ ಮಟ್ಟಿಗೆ ಅಂಡರ್‌ವರ್ಲ್ಡ್ ಸಿನಿಮಾ ಎಂದಾಕ್ಷಣ ನೆನಪಾಗುವ ಸಿನಿಮಾ ‘ಓಂ’. ಒಂದು ರೀತಿಯಲ್ಲಿ ಗಾಂನಗರದ ಭೂಗತ ಕತೆಗಳಿಗೆ ‘ಓಂ’ ಗಾಡ್‌ಫಾದರ್ ಇದ್ದಂತೆ. ಹೀಗೆ ನಿರ್ದೇಶಕನಾಗಿ ತೆರೆ ಮೇಲೆ ಡಾನ್ ಕತೆ ಹೇಳಿದ ಉಪೇಂದ್ರ ಅವರೇ ಈಗ ಡಾನ್ ಆಗುವುದಕ್ಕೆ ಹೊರಟಿದ್ದಾರೆ. ಹೌದು, ಉಪ್ಪಿ, ಡಾನ್ ಪಾತ್ರ ಮಾಡಲಿದ್ದಾರೆ. ಬೆಂಗಳೂರು ಭೂಗತಲೋಕ ಎಂದಾಗ ಮೊದಲು ನೆನಪಾಗುವ ಹೆಸರುಗಳು ಜಯರಾಜ್ ಮತ್ತು ಕೊತ್ವಾಲ್ ರಾಮಚಂದ್ರ. ಈ ಇಬ್ಬರ ಕತೆಯನ್ನು ಈಗಾಗಲೇ ‘ಆ ದಿನಗಳು’ ಚಿತ್ರದಲ್ಲಿ ನಿರ್ದೇಶಕ ಕೆ ಎಂ ಚೈತನ್ಯ ಹೇಳಿದ್ದಾರೆ. ಆದರೆ, ಈ ಪೈಕಿ ಜಯರಾಜ್‌ನ ಕತೆಗೆ ಮಾತ್ರ ಫಿಕ್ಸ್ ಮಾಡಿಕೊಂಡು ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ ನಿರ್ದೇಶಕ ಲೋಹಿತ್. ಈ ಹಿಂದೆ ‘ಮಮ್ಮಿ’ ಚಿತ್ರದ ಮೂಲಕ ಭರವಸೆ ಮೂಡಿಸಿದವರೇ ಈ ಲೋಹಿತ್. ಈಗ ಬೆಂಗಳೂರಿನ ಆ ದಿನಗಳ ಡಾನ್ ಜಯರಾಜ್ ಬದುಕಿನ ಪುಟಗಳಿಗೆ ಕೈ ಹಾಕಿದ್ದಾರೆ.

ಲೋಹಿತ್ ನಿರ್ದೇಶನ ಮಾಡಲು ಹೊರಟಿರುವ ಈ ಚಿತ್ರದಲ್ಲಿ ಜಯರಾಜ್ ಪಾತ್ರದಲ್ಲಿ ನಟ ಉಪೇಂದ್ರ ಕಾಣಿಸಿಕೊಳ್ಳುತ್ತಾರೆಂಬ ಸುದ್ದಿ ಇದೆ. ಅರ್ಥಾರ್ತ್ ಈ ಚಿತ್ರದ ನಾಯಕ ಉಪೇಂದ್ರ ಎನ್ನುವ ಮಾತುಗಳು ಇವೆ. ಅಲ್ಲದೆ ‘ಮಮ್ಮಿ’ ಸಿನಿಮಾ ನೋಡಿ ಖುಷಿಯಾಗಿರುವ ಉಪೇಂದ್ರ ಕೂಡ ಲೋಹಿತ್ ಜತೆ ಸಿನಿಮಾ ಮಾಡುವುದಕ್ಕೆ ಆಸಕ್ತಿ ತೋರಿದ್ದಾರಂತೆ. ಆದರೆ, ಈಗಷ್ಟೆ ಕತೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಲೋಹಿತ್, ಆ ನಿಟ್ಟಿನಲ್ಲಿ ಅಗ್ನಿ ಶ್ರೀಧರ್ ಅವರನ್ನು ಭೇಟಿ ಮಾಡಿದ್ದಾರಂತೆ. ಅಲ್ಲಿಗೆ ಡಾನ್ ಜಯರಾಜ್ ಬದುಕಿನ ಪುಟಗಳು ತೆರೆ ಮೇಲೆ ಬರಲಿದ್ದು, ಅಂದುಕೊಂಡಂತೆ ಉಪೇಂದ್ರ ಅವರೇ ನಾಯಕನಾಗುತ್ತಾರೆಯೇ? ಎಂಬುದು ಸದ್ಯದ ಕುತೂಹಲ. ಇನ್ನು ಚಿತ್ರಕ್ಕೆ ‘ಜಯರಾಜ್’ ಎನ್ನುವ ಹೆಸರಿಡುವ ಯೋಚನೆಯಲ್ಲಿದ್ದಾರೆ ಲೋಹಿತ್. ಮೊದಲ ಪ್ರಯತ್ನದಲ್ಲಿ ಹಾರರ್ ಚಿತ್ರ ಮಾಡಿದವರು ಈಗ ಭೂಗತ ಲೋಕದ ನೈಜ ವ್ಯಕ್ತಿಯೊಬ್ಬನ ಕತೆ ಹೇಳುವುದಕ್ಕೆ ಹೊರಟಿದ್ದಾರೆ ಲೋಹಿತ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?
ಅಬ್ಬಬ್ಬಾ! ಟ್ವಿಸ್ಟ್‌ ಅಂದ್ರೆ ಇದಪ್ಪಾ- ಎದ್ದು ಬಂದ ಸತ್ತ ಸಂಧ್ಯಾ: ಲಾಯರ್‌ ಭಾರ್ಗವಿನೇ ಜೈಲಿಗೆ ಹೋಗ್ತಾಳಾ?