'ರಾಜ್ ಲೀಲಾ ವಿನೋದ' ಪುಸ್ತಕದ ಬಗ್ಗೆ ನಟ ಶಿವಣ್ಣ ಏನೆಂದರು ಗೊತ್ತೆ?

By Suvarna Web DeskFirst Published Jan 6, 2017, 7:47 AM IST
Highlights

ಪುಸ್ತಕದ ಬಗ್ಗೆ ಸ್ವತಃ ರಾಜ್ ಪುತ್ರ ಶಿವರಾಜ್ ಕುಮಾರ್ ಕೂಡ ಮಾತನಾಡಿದ್ದಾರೆ. ಇತ್ತೀಚಿಗೆ 'ಶ್ರೀಕಂಠ' ಚಿತ್ರದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಶಿವಣ್ಣನಿಗೆ 'ರಾಜ್ ಲೀಲಾ ವಿನೋದ' ಪುಸ್ತಕದ ಬಗ್ಗೆ ''ರಾಜ್ ಲೀಲಾ ವಿನೋದ' ಪುಸ್ತಕ ಹಾಗೂ ಅಲ್ಲಿರುವ ಅಂಶಗಳ ಬಗ್ಗೆ, ಅಲ್ಲಿ ಬಂದಿರುವ ವಿಷಯಗಳ ಬಗ್ಗೆ ನಿಮಗೆ ಏನ್ ಅನಿಸುತ್ತೆ? ಅಂತ ಕೇಳಿದ್ದಾರೆ.

ಬೆಂಗಳೂರು(ಜ.6): ಈಗ ಗಾಂಧಿನಗರದಲ್ಲಿ ಪತ್ರಕರ್ತ ರವಿ ಬೆಳಗೆರೆ ಬರೆದಿರುವ 'ರಾಜ್ ಲೀಲಾ ವಿನೋದ' ಪುಸ್ತಕದ್ದೆ ಸುದ್ದಿ. ಕೆಲವರು ಬಹಿರಂಗವಾಗಿ ಮಾತನಾಡಿದರೆ ಮತ್ತೂ ಹಲವರು ಪಿಸುಗುಟ್ಟುಗೊಳ್ಳುತ್ತಿದ್ದಾರೆ. ಸಾರ್ವಜನಿಕರಲ್ಲೂ ಪುಸ್ತಕ ರಚನೆಯ ಬಗ್ಗೆ ವಿರೋಧ ಹಾಗೂ ಚರ್ಚೆಗಳು ನಡೆಯುತ್ತಿವೆ.

ಪುಸ್ತಕದ ಬಗ್ಗೆ ಸ್ವತಃ ರಾಜ್ ಪುತ್ರ ಶಿವರಾಜ್ ಕುಮಾರ್ ಕೂಡ ಮಾತನಾಡಿದ್ದಾರೆ. ಇತ್ತೀಚಿಗೆ 'ಶ್ರೀಕಂಠ' ಚಿತ್ರದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಶಿವಣ್ಣನಿಗೆ 'ರಾಜ್ ಲೀಲಾ ವಿನೋದ' ಪುಸ್ತಕದ ಬಗ್ಗೆ ''ರಾಜ್ ಲೀಲಾ ವಿನೋದ' ಪುಸ್ತಕ ಹಾಗೂ ಅಲ್ಲಿರುವ ಅಂಶಗಳ ಬಗ್ಗೆ, ಅಲ್ಲಿ ಬಂದಿರುವ ವಿಷಯಗಳ ಬಗ್ಗೆ ನಿಮಗೆ ಏನ್ ಅನಿಸುತ್ತೆ? ಅಂತ ಕೇಳಿದ್ದಾರೆ.

ಇದಕ್ಕೆ ಶಿವಣ್ಣ ಕೊಟ್ಟ ಉತ್ತರ 'ಐ ಡೋಂಟ್ ನೋ....ಗೊತ್ತಿದ್ರೆ ಮಾತಾಡಬಹುದು. ಗೊತ್ತಿಲ್ಲದೇ ಇದ್ದರೇ ಹೇಗೆ ಮಾತಾಡೋದು' ಎಂದರು

ಆಗ ಸುದ್ದಿಗೋಷ್ಠಿಯಲ್ಲಿದ್ದ ಕೆಲ ಪತ್ರಕರ್ತರು 'ಈ ಪ್ರಶ್ನೆ ಬೇಡವೆಂದು ವಿರೋಧಿಸಿದರು. ಆಗ ಮತ್ತೆ ಪ್ರತಿಕ್ರಿಯಿಸಿದ ಶಿವಣ್ಣ ''ನೋ ಪ್ರಾಬ್ಲಂ', ಆಮ್ ನಥ್ಥಿಂಗ್ ಟು ಬಾದರ್ ಅಬೌಟ್''. ಡೋಂಟ್ ನೋ ಎನಿಥಿಂಗ್!

''ನನಗೆ ಏನೂ ಗೊತ್ತಿಲ್ಲ. ನನಗೆ ಏನಾದರೂ ಗೊತ್ತಿದ್ರೆ ಹೇಳಬಹುದು... ಲೀಲಾವತಿ ಅವರು ಬಂದಾಗ ನಾವು ಅವರ ಕಾಲು ಮುಗಿತೀವಿ. ನಾವು ಗೌರವ ಕೊಡ್ತೀವಿ. ಯಾವಾಗಲೂ ಅಷ್ಟೇನೇ. ಅದನ್ನ ಬಿಟ್ಟರೇ ನನಗೆ ಏನೂ ಗೊತ್ತಿಲ್ಲ. ಗೊತ್ತಿದ್ರೆ ಮಾತಾಡಬಹುದು. ಗೊತ್ತಿಲ್ಲದಿದ್ದರೇ ಮಾತಾಡೋಕೆ ಆಗಲ್ಲ''. ಎಂದರು

ವರದಿಗಾರ್ತಿ ಪುನಃ 'ಅಮ್ಮ ಆಗಲಿ, ಅಣ್ಣಾವ್ರ ಆಗಲಿ ಯಾವತ್ತು ಆ ವಿಷ್ಯ ಮಾತಾಡಿಲ್ವಾ? ಎಂದು ಎರಡನೇ ಪ್ರಶ್ನೆ ಕೇಳಿದರು. ಇದಕ್ಕೆ ಶಿವಣ್ಣ, ''ನೋ ಯಾವತ್ತು ಮಾತಾಡಿಲ್ಲ. ಮಾತಾಡಿದ್ರೆ...., ನಾನು ಯಾವತ್ತು ಸ್ಟ್ರೈಟ್ ಫಾರ್ವಾಡ್. ಶಿವಣ್ಣ ಹೇಗೆ ಅಂತ ಎಲ್ಲರಿಗೂ ಗೊತ್ತು. ನಾನು ನೇರವಾಗಿ ಮಾತಾಡ್ತೀನಿ. ಯಾರಿಗೂ ಕೇರ್ ಮಾಡಲ್ಲ. ನಾನು ಕೇರ್ ಮಾಡೋದು. ನನ್ನ ಫ್ಯಾಮಿಲಿಗೆ, ದೇವರು ಮತ್ತು ನಮ್ಮ ಅಭಿಮಾನಿಗಳಿಗೆ ಮಾತ್ರ'' ಎಂದು ಸಮಾಧಾನದಿಂದಲೇ ಉತ್ತರ ನೀಡಿದ್ದಾರೆ.

click me!