
ಬೆಂಗಳೂರು (ಸೆ.19): ಉಪೇಂದ್ರ ಆಕ್ಟ್ ಮಾಡಿರೋ ಬಹು ನಿರೀಕ್ಷೆಯ ಸಿನಿಮಾ ಉಪೇಂದ್ರ ಮತ್ತೆ ಹುಟ್ಟಿ ಬಾ ಹಲವು ವಿಷಯಗಳಿಗೆ ಸದ್ದು ಮಾಡುತ್ತಿರೋ ಈ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ.
ರಿಯಲ್ ಸ್ಟಾರ್ ಉಪೇಂದ್ರ, ಮತ್ತೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ನಿರೀಕ್ಷೆಯ ಸಿನಿಮಾ ಉಪೇಂದ್ರ ಮತ್ತೆ ಹುಟ್ಟಿ ಬಾ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಗಾಂಧಿನಗರದಲ್ಲಿ ಹಲವು ವಿಷಯಗಳಿಗೆ ಸೌಂಡ್ ಮಾಡಿದ ಈ ಚಿತ್ರದ ಟ್ರೈಲರ್ ರಿವೀಲ್ ಆಗಿದೆ. ಪ್ರೇಮಾ,ಶ್ರುತಿ ಹರಿಹರನ್ ಉಪ್ಪಿ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಹರ್ಷಿಕಾ ಪೂಣಚ್ಚ, ದೀಪ್ತಿ ಕಾಪ್ಸೆ, ಚಾಂದಿನಿ, ಸಾಧು ಕೋಕಿಲ, ಅವಿನಾಶ್, ವಸಿಷ್ಠ ಸಿಂಹ ಹೀಗೆ ದೊಡ್ಡ ತಾರ ಬಳಗ ಈ ಚಿತ್ರದಲ್ಲಿದೆ. ತೆಲುಗಿನ ಸೊಗ್ಗಾಡೆ ಚಿನ್ನ ನಾಯನ ಚಿತ್ರದ ರಿಮೇಕ್ ಆಗಿರೋ ಈ ಚಿತ್ರಕ್ಕೆ ಎಚ್ ಟು ಓ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ ಲೋಕನಾಥ್, ಕನ್ನಡದ ನೇಟಿವಿಟಿಗೆ ನಿರ್ದೇಶನ ಮಾಡಿದ್ದಾರೆ. ಹೆಚ್ಚು ಕಡಿಮೆ ಶೂಟಿಂಗ್ ಮುಗಿಸಿರೋ ಉಪೇಂದ್ರ ಮತ್ತೆ ಹುಟ್ಟಿ ಬಾ ಸದ್ಯದಲ್ಲೇ ತೆರೆಗೆ ಬರಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.