
ಬೆಂಗಳೂರು (ಸೆ.19): ನಿರ್ದೇಶಕ ಎ.ಎಮ್.ಆರ್ ರಮೇಶ್ ಗೇಮ್ ಸಿನಿಮಾ ನಂತರ ರಿಯಲ್ ಸ್ಟೋರಿ ಸಿನಿಮಾ ಮಾಡೋದಕ್ಕೆ ರೆಡಿಯಾಗಿದ್ದಾರೆ. ಅಷ್ಟಕ್ಕೂ ಯಾವ ವ್ಯಕ್ತಿ ಬಗ್ಗೆ ಸಿನಿಮಾ ಮಾಡ್ತಾರೆ ಅಂತ ಗೊತ್ತಾದ್ರೆ ಆಶ್ಚರ್ಯವಾಗಬಹುದು.
ಸ್ಯಾಂಡಲ್'ವುಡ್ ನಲ್ಲಿ ಶೂಟ್ ಔಟ್ ಪ್ರಕರಣಗಳು ಸಿನಿಮಾ ಆಗೋದು ಕಾಮನ್. ಕರ್ನಾಟಕ ಅಲ್ಲದೇ ಇಂಟರ್ ನ್ಯಾಷನಲ್ ಲೇವೆಲ್'ನಲ್ಲಿ ಸುದ್ಧಿಯಾದ ಪತ್ರಕರ್ತೆ, ಚಿಂತಕಿ ಹಾಗೂ ಲೇಖಕಿ ಗೌರಿ ಲಂಕೇಶ್, ಶೂಟ್ ಔಟ್ ಪ್ರಕರಣವನ್ನು ಈಗ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಮಾಡೋದಕ್ಕೆ ವೇದಿಕೆ ರೆಡಿಯಾಗುತ್ತಿದೆ. ಸೈನೈಡ್, ವೀರಪ್ಪನ್ ಅಟ್ಟಹಾಸ ಹೀಗೆ ರಿಯಲ್ ಸ್ಟೋರಿಗಳನ್ನ ತೆರೆ ಮೇಲೆ ತಂದಿರುವ ನಿರ್ದೇಶಕ, ಎ.ಎಮ್, ಆರ್ ರಮೇಶ್ ಗೌರಿ ಲಂಕೇಶ್ ಶೂಟ್ ಔಟ್ ಆದ 15 ದಿನಗಳ ನಂತರ ಸಿನಿಮಾ ಮಾಡೋದಕ್ಕೆ ಸಜ್ಜಾಗುತ್ತಿದ್ದಾರೆ.
ಗೌರಿ ಲಂಕೇಶ್ ಶೂಟ್ ಔಟ್ ಪ್ರಕರಣ, ಸದ್ಯಕ್ಕೆ ತನಿಖೆ ಹಂತದಲ್ಲಿದ್ದು ಸಾಕಷ್ಟ ಹಲವು ತಿರುವುಗಳನ್ನ ಪಡೆದುಕೊಳ್ಳುತ್ತಿದೆ.ಹೀಗೆ ಬೇಕಾದ್ರೆ ನಿರ್ದೇಶಕ ಎ ಎಮ್ಆರ್ ರಮೇಶ್ ,ಗೌರಿ ಲಂಕೇಶ್ ಹತ್ಯೆ ಮಾಡಿದವರನ್ನ ಬಂಧಿಸಿದ ನಂತ್ರ ಸಿನಿಮಾ ಆರಂಭ ಆಗಲಿದೆ, ಎನ್ನುತ್ತಾರೆ.ಸದ್ಯಕ್ಕೆ ನಿರ್ದೇಶಕ ಎ ಎಮ್ ಆರ್ ರಮೇಶ್ ಕೈಗೆ ಎತ್ತಿಕೊಂಡಿರುವ ಆ ಸ್ಫೋಟ ಹಾಗು ಐಪಿಎಸ್ ಅಧಿಕಾರಿ ಡಿ.ರೂಪಾ ಸಿನಿಮಾ ಮಾಡೋದಿಕ್ಕೆ ರೆಡಿಯಾಗಿದ್ದಾರೆ..ಇದ್ರ ಜೊತೆಗೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಚಿತ್ರ ಅನೌಸ್ ಮಾಡಿರುವ ರಮೇಶ್ ಈ ಮೂರು ಚಿತ್ರಗಳಲ್ಲಿ ಯಾವ ಸಿನಿಮಾ ಸೆಟ್ಟೇರುತ್ತೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.