
ಅತ್ಯಂತ ಮತ್ತು ಬಹುನಿರೀಕ್ಷಿತ ತಾರಕ್ ಚಿತ್ರದ ಟ್ರೇಲರ್ ಈ ಗುರುವಾರ (21st September 2017) ಸಂಜೆ 6 ಗಂಟೆಗೆ ಬಿಡುಗಡೆಗೊಳ್ಳಲಿದೆ. ಚಾಲೆಂಜಿಂಗ್ ಸ್ಟಾರ್ ಅಭಿನಯದ ಬಹುನಿರೀಕ್ಷೆಯ "ತಾರಕ್" ಸಿನಿಮಾದ ಟ್ರೇಲರ್ ನಾಳೆ (ಗುರುವಾರ, 21 ಸೆಪ್ಟಂಬರ್) ಬಿಡುಗಡೆಯಾಗುತ್ತಿದೆ.
ಗುರುವಾರ ಸಂಜೆ 6 ಗಂಟೆಯಿಂದ ತಾರಕ್'ನ ಪ್ರಪ್ರಥಮ ಟ್ರೇಲರ್ ಯೂಟ್ಯೂಬ್'ನಲ್ಲಿ ಸಿಗಲಿದೆ.
ದುಷ್ಯಂತ್ ನಿರ್ಮಿಸಿರುವ ಹಾಗೂ ಮಿಲನ ಪ್ರಕಾಶ್ ನಿರ್ದೇಶಿಸಿರುವ "ತಾರಕ್" ಸಿನಿಮಾ ಈ ವರ್ಷದ ಮೆಗಾ ಸಿನಿಮಾಗಳಲ್ಲೊಂದು. ಅರ್ಜುನ್ ಜನ್ಯಾ ಕಂಪೋಸ್ ಮಾಡಿರುವ ಎಲ್ಲಾ 6 ಹಾಡುಗಳೂ ಜನಪ್ರಿಯವಾಗಿವೆ. ವ್ಯಾಸರಾಜ್ ಸೋಸಲೆ ಹಾಡಿರುವ "ಬಾ ಬಾರೋ ಗೆಳೆಯ" ಹಾಡಂತೂ ಬಹಳಷ್ಟು ಅಭಿಮಾನಿಗಳ ಮನಸೂರೆಗೊಂಡಿದೆ.
ದಾಸ ದರ್ಶನ್'ಗೆ ಜೋಡಿಯಾಗಿ ಶೃತಿ ಹರಿಹರನ್ ಮತ್ತು ಕಿರಿಕ್ ಹುಡುಗಿ ಶಾನ್ವಿ ಶ್ರೀವಾಸ್ತವ ನಟಿಸಿದ್ದಾರೆ. ದರ್ಶನ್ ಅವರ 49ನೇ ಸಿನಿಮಾವಾಗಿರುವ "ತಾರಕ್" ಇದೇ ಸೆಪ್ಟೆಂಬರ್ 29ರಂದು ಥಿಯೇಟರ್'ಗಳಲ್ಲಿ ರಿಲೀಸ್ ಆಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.