‘ಯೂ ಟರ್ನ್‌’ ಮೂಲಕ ಸದ್ದು ಮಾಡಿದ್ದ ಶ್ರದ್ಧಾ ಶ್ರೀನಾಥ್‌ಗೆ ಈಗ ಅವಕಾಶಗಳ ಕೊರತೆ: ಕಾರಣವೇನು?

Published : Aug 14, 2026, 09:09 PM IST
Shraddha Srinath

ಸಾರಾಂಶ

ನಟಿಯಾಗಿ ಒಳ್ಳೆಯ ಹೆಸರು, ಮೂರು ಭಾಷೆಗಳಲ್ಲಿ ಗಮನಾರ್ಹ ಸಿನಿಮಾಗಳು, ಟಾಪ್‌ ಹೀರೋಗಳ ಜೊತೆ ತೆರೆ ಹಂಚಿಕೊಂಡ ಅನುಭವ... ಇಷ್ಟೆಲ್ಲ ಇದ್ದರೂ ಶ್ರದ್ಧಾ ಶ್ರೀನಾಥ್‌ ಅವರ ಕರಿಯರ್‌ ಮಾತ್ರ ನಿರೀಕ್ಷಿಸಿದ ವೇಗದಲ್ಲಿ ಸಾಗುತ್ತಿಲ್ಲ.

ನಟಿಯಾಗಿ ಒಳ್ಳೆಯ ಹೆಸರು, ಮೂರು ಭಾಷೆಗಳಲ್ಲಿ ಗಮನಾರ್ಹ ಸಿನಿಮಾಗಳು, ಟಾಪ್‌ ಹೀರೋಗಳ ಜೊತೆ ತೆರೆ ಹಂಚಿಕೊಂಡ ಅನುಭವ... ಇಷ್ಟೆಲ್ಲ ಇದ್ದರೂ ಶ್ರದ್ಧಾ ಶ್ರೀನಾಥ್‌ ಅವರ ಕರಿಯರ್‌ ಮಾತ್ರ ನಿರೀಕ್ಷಿಸಿದ ವೇಗದಲ್ಲಿ ಸಾಗುತ್ತಿಲ್ಲ. ಒಂದು ಹಂತದಲ್ಲಿ ಸತತ ಸಿನಿಮಾಗಳ ಮೂಲಕ ಬ್ಯುಸಿಯಾಗಿದ್ದ ಈ ನಟಿಗೆ ಇದೀಗ ಹೊಸ ಅವಕಾಶಗಳ ಕೊರತೆ ಎದುರಾಗಿರುವುದು ಚರ್ಚೆಗೆ ಕಾರಣವಾಗಿದೆ.

‘ಯೂ ಟರ್ನ್‌’ ಮೂಲಕ ಸಿಕ್ಕಿತ್ತು ದೊಡ್ಡ ಬ್ರೇಕ್‌

ಕನ್ನಡದ ‘ಯೂ ಟರ್ನ್‌’ ಸಿನಿಮಾ ಶ್ರದ್ಧಾ ಶ್ರೀನಾಥ್‌ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತ್ತು. ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಟಿಯಾಗಿ ತಮ್ಮದೇ ಆದ ಗುರುತು ಮೂಡಿಸಿಕೊಂಡರು. ಬಳಿಕ ತೆಲುಗು ಮತ್ತು ತಮಿಳು ಚಿತ್ರರಂಗಕ್ಕೂ ಕಾಲಿಟ್ಟ ಶ್ರದ್ಧಾ, ಅಲ್ಲಿಯೂ ಗಮನಾರ್ಹ ಸಿನಿಮಾಗಳ ಭಾಗವಾದರು. ಆದರೆ ಹಲವು ಯಶಸ್ವಿ ಸಿನಿಮಾಗಳಲ್ಲಿ ನಟಿಸಿದರೂ, ಶ್ರದ್ಧಾಗೆ ನಿರೀಕ್ಷಿಸಿದ ಮಟ್ಟದ ಸ್ಟಾರ್‌ ಇಮೇಜ್‌ ಮಾತ್ರ ಬರಲಿಲ್ಲ.

ಆರಂಭದಲ್ಲೇ ಮಾಡಿಕೊಂಡ ಆಯ್ಕೆಗಳು ಈಗ ಕಾಡುತ್ತಿವೆಯಾ?

ಶ್ರದ್ಧಾ ಶ್ರೀನಾಥ್‌ ಅವರ ಕರಿಯರ್‌ ಆರಂಭದಲ್ಲಿ ಹೆಚ್ಚಾಗಿ ಪರ್ಫಾರ್ಮೆನ್ಸ್‌ ಓರಿಯೆಂಟೆಡ್‌ ಪಾತ್ರಗಳಿಗೆ ಆದ್ಯತೆ ನೀಡಿದ್ದರು. ಪಾತ್ರದ ತೂಕ, ಕಥೆಯ ಮಹತ್ವ ಮತ್ತು ನಟನಾ ಅವಕಾಶಗಳಿಗೆ ಹೆಚ್ಚು ಒತ್ತು ನೀಡಿದ ಅವರು, ಗ್ಲಾಮರ್‌ ಆಧಾರಿತ ಕಮರ್ಷಿಯಲ್‌ ಸಿನಿಮಾಗಳಿಂದ ದೂರವೇ ಉಳಿದಿದ್ದರು. ಇದು ಒಂದು ಹಂತದಲ್ಲಿ ಅವರ ಪ್ಲಸ್‌ ಪಾಯಿಂಟ್‌ ಆಗಿದ್ದರೂ, ಕಮರ್ಷಿಯಲ್‌ ಸಿನಿಮಾಗಳಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುವ ವಿಚಾರದಲ್ಲಿ ಸ್ವಲ್ಪ ಹಿನ್ನಡೆಯಾಗಿರಬಹುದು ಎನ್ನುವ ಚರ್ಚೆಯೂ ಇದೆ.

ಗ್ಲಾಮರ್‌ ರೂಟ್‌ಗೆ ಬಂದರೂ... ವೇಗ ಮಾತ್ರ ಹೆಚ್ಚಾಗಿಲ್ಲ!

ನಂತರ ಶ್ರದ್ಧಾ ತಮ್ಮ ಇಮೇಜ್‌ನಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡಿದರು. ಗ್ಲಾಮರ್‌ ಶೇಡ್‌ ಇರುವ ಪಾತ್ರಗಳಲ್ಲೂ ಕಾಣಿಸಿಕೊಳ್ಳಲು ಆರಂಭಿಸಿದರು. ಆದರೆ ಅಷ್ಟರಲ್ಲಾಗಲೇ ಕರಿಯರ್‌ನಲ್ಲಿ ಆಗಬೇಕಿದ್ದ ಬದಲಾವಣೆ ತಡವಾಗಿಬಿಟ್ಟಿತೇ ಎನ್ನುವ ಪ್ರಶ್ನೆ ಎದುರಾಗಿದೆ. ಇತ್ತೀಚೆಗೆ ವಿಭಿನ್ನ ರೀತಿಯ ಪಾತ್ರಗಳನ್ನು ಮಾಡುತ್ತಿದ್ದರೂ, ಆ ಸಿನಿಮಾಗಳು ಶ್ರದ್ಧಾ ಅವರ ಕರಿಯರ್‌ಗೆ ನಿರೀಕ್ಷಿಸಿದ ಮಟ್ಟದ ಬೂಸ್ಟ್‌ ನೀಡಿಲ್ಲ.

‘ಡಾಕು ಮಹಾರಾಜ್‌’ ಸೇರಿದಂತೆ ಹಲವು ಸಿನಿಮಾಗಳು...

ಕಳೆದ ವರ್ಷ ಶ್ರದ್ಧಾ ಶ್ರೀನಾಥ್‌ ‘ಡಾಕು ಮಹಾರಾಜ್‌’, ‘ಕಲಿಯುಗಂ 2064’, ‘ಆರ್ಯನ್‌’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಸಿನಿಮಾಗಳ ಪೈಕಿ ಯಾವುದೂ ಅವರ ಕರಿಯರ್‌ಗೆ ದೊಡ್ಡ ತಿರುವು ನೀಡಲು ಸಾಧ್ಯವಾಗಲಿಲ್ಲ. ಇದೀಗ ತಮಿಳಿನಲ್ಲಿ ‘ಬ್ರೋ ಕೋಡ್‌’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಈ ಚಿತ್ರ ಹೊರತುಪಡಿಸಿ ಅವರ ಕೈಯಲ್ಲಿ ದೊಡ್ಡ ಪ್ರಾಜೆಕ್ಟ್‌ಗಳ ಸಂಖ್ಯೆ ಕಡಿಮೆಯಿದೆ.

ಮತ್ತೆ ಕರಿಯರ್‌ಗೆ ಸ್ಪೀಡ್‌ ಕೊಡ್ತಾರಾ ಶ್ರದ್ಧಾ?

ಒಳ್ಳೆಯ ನಟಿ ಎಂಬ ಹೆಸರು, ವಿಭಿನ್ನ ಭಾಷೆಗಳಲ್ಲಿ ಕೆಲಸ ಮಾಡಿದ ಅನುಭವ ಮತ್ತು ಬಲವಾದ ಅಭಿನಯ ಸಾಮರ್ಥ್ಯ ಇದ್ದರೂ, ಶ್ರದ್ಧಾ ಶ್ರೀನಾಥ್‌ ಅವರಿಗೆ ಬೇಕಾಗಿರುವುದು ಈಗ ಕರಿಯರ್‌ಗೆ ಮತ್ತೊಮ್ಮೆ ವೇಗ ನೀಡುವಂತಹ ಒಂದು ದೊಡ್ಡ ಸಿನಿಮಾ. ತಮ್ಮ ಇಮೇಜ್‌ ಬದಲಿಸುವ ಮತ್ತು ಹೊಸ ರೀತಿಯ ಪಾತ್ರದ ಮೂಲಕ ಕಮ್‌ಬ್ಯಾಕ್‌ ಮಾಡುವ ಅವಕಾಶಕ್ಕಾಗಿ ಅವರು ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ. ಹಾಗಾದರೆ ಶ್ರದ್ಧಾಗೆ ಆ ದೊಡ್ಡ ಬ್ರೇಕ್‌ ಯಾವ ಸಿನಿಮಾದಿಂದ ಸಿಗಲಿದೆ? ಮತ್ತೆ ಟಾಪ್‌ ಲೀಗ್‌ಗೆ ಮರಳುತ್ತಾರಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪುನೀತ್‌ ರಾಜ್‌ಕುಮಾರ್‌ ನಟಿಸಿ ಮಾಯವಾದ ಈ ಚೆಲುವೆ ಯಾರು? ಅಷ್ಟಕ್ಕೂ ಈಗ ಏನ್‌ ಮಾಡ್ತಿದ್ದಾರೆ?
ಒಂದೇ ಹುಡುಗನ ಮೇಲೆ ಇಬ್ಬರಿಗೂ ಲವ್‌: ಏನಿದು ಜಾನ್ವಿ-ಶ್ರೀಲೀಲಾ ಹೊಸ ವಿಷ್ಯ?