ಒಂದೇ ಹುಡುಗನ ಮೇಲೆ ಇಬ್ಬರಿಗೂ ಲವ್‌: ಏನಿದು ಜಾನ್ವಿ-ಶ್ರೀಲೀಲಾ ಹೊಸ ವಿಷ್ಯ?

Published : Aug 14, 2026, 08:21 PM IST
Sreeleela Janhvi Kapoor

ಸಾರಾಂಶ

ಅವಕಾಶಗಳು ಸಿಗದ ಜಾಗದಲ್ಲಿ ಸುಮ್ಮನೆ ಸಮಯ ಕಳೆಯುವುದಕ್ಕಿಂತ, ಆಫರ್‌ಗಳಿರುವ ಕಡೆ ಹೆಜ್ಜೆ ಇಡುವುದೇ ಬೆಸ್ಟ್‌ ಅಲ್ಲವೇ? ಸದ್ಯ ನಟಿ ಶ್ರೀಲೀಲಾ ಅವರ ಸಿನಿ ಜರ್ನಿ ನೋಡಿದರೆ ಇದೇ ರೀತಿ ಅನಿಸುತ್ತಿದೆ.

ಅವಕಾಶಗಳು ಸಿಗದ ಜಾಗದಲ್ಲಿ ಸುಮ್ಮನೆ ಸಮಯ ಕಳೆಯುವುದಕ್ಕಿಂತ, ಆಫರ್‌ಗಳಿರುವ ಕಡೆ ಹೆಜ್ಜೆ ಇಡುವುದೇ ಬೆಸ್ಟ್‌ ಅಲ್ಲವೇ? ಸದ್ಯ ನಟಿ ಶ್ರೀಲೀಲಾ ಅವರ ಸಿನಿ ಜರ್ನಿ ನೋಡಿದರೆ ಇದೇ ರೀತಿ ಅನಿಸುತ್ತಿದೆ. ಕೆಲವೇ ವರ್ಷಗಳಲ್ಲಿ ಟಾಲಿವುಡ್‌ನಲ್ಲಿ ತನ್ನದೇ ಛಾಪು ಮೂಡಿಸಿರುವ ಈ ಚೆಲುವೆ, ಇದೀಗ ಬಾಲಿವುಡ್‌ನತ್ತ ಫೋಕಸ್‌ ಮಾಡಿರುವಂತೆ ಕಾಣಿಸುತ್ತಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದ ಶ್ರೀಲೀಲಾ, ಈಗ ನಿಧಾನವಾಗಿ ಬಾಲಿವುಡ್‌ನಲ್ಲೂ ಒಂದೊಂದೇ ಹೆಜ್ಜೆ ಇಡುತ್ತಿದ್ದಾರೆ. ಈಗಾಗಲೇ ಹಲವು ಹಿಂದಿ ಪ್ರಾಜೆಕ್ಟ್‌ಗಳಿಗೆ ಗ್ರೀನ್‌ ಸಿಗ್ನಲ್‌ ನೀಡಿರುವ ಬೆನ್ನಲ್ಲೇ, ಮತ್ತೊಂದು ಇಂಟರೆಸ್ಟಿಂಗ್‌ ಸಿನಿಮಾಗೆ ಶ್ರೀಲೀಲಾ ಓಕೆ ಹೇಳಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

ಜಾನ್ವಿ ಜೊತೆ ಶ್ರೀಲೀಲಾ ಕಾಂಬಿನೇಷನ್‌!

ಶ್ರೀಲೀಲಾ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿರುವ ಬೆನ್ನಲ್ಲೇ ಅವರಿಗೆ ಜಾನ್ವಿ ಕಪೂರ್‌ ಕೂಡ ಸಾಥ್‌ ನೀಡುತ್ತಿದ್ದಾರೆ. ಈಗಾಗಲೇ ಹಿಂದಿಯಲ್ಲಿ ತಮ್ಮದೇ ಗುರುತು ಮೂಡಿಸಿರುವ ಜಾನ್ವಿ ಜೊತೆ ಶ್ರೀಲೀಲಾ ಕೈಜೋಡಿಸುತ್ತಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಮೂಲಗಳ ಪ್ರಕಾರ, ಉಮೇಶ್‌ ಬಿಸ್ತ್‌ ನಿರ್ದೇಶನದಲ್ಲಿ ಶ್ರೀಲೀಲಾ ಮತ್ತು ಜಾನ್ವಿ ಕಪೂರ್‌ ಲೀಡ್‌ ಆಗಿ ಕಾಣಿಸಿಕೊಳ್ಳಲಿರುವ ಲೇಡಿ ಓರಿಯೆಂಟೆಡ್‌ ಮಲ್ಟಿಸ್ಟಾರರ್‌ ಸಿದ್ಧವಾಗುತ್ತಿದೆ ಎನ್ನಲಾಗಿದೆ. ಏಕ್ತಾ ಕಪೂರ್‌ ಮತ್ತು ಗುನೀತ್‌ ಮೊಂಗಾ ಈ ಚಿತ್ರವನ್ನು ನಿರ್ಮಿಸಲಿದ್ದಾರೆ ಎನ್ನಲಾಗಿದ್ದು, ಸಿನಿಮಾದ ಕಥೆಯೂ ಸಾಕಷ್ಟು ಇಂಟರೆಸ್ಟಿಂಗ್‌ ಆಗಿದೆ.

ಒಂದೇ ಹುಡುಗನಿಗಾಗಿ ಇಬ್ಬರ ನಡುವೆ ಪೈಪೋಟಿ!

ಸಿನಿಮಾದಲ್ಲಿ ಒಂದೇ ಹುಡುಗನನ್ನು ಇಷ್ಟಪಡುವ ಇಬ್ಬರು ಯುವತಿಯರ ಸುತ್ತ ಕಥೆ ಸಾಗಲಿದೆ ಎನ್ನಲಾಗುತ್ತಿದೆ. ಪ್ರೀತಿ, ಭಾವನೆ, ಸಂಘರ್ಷ ಮತ್ತು ಟ್ವಿಸ್ಟ್‌ಗಳನ್ನು ಒಳಗೊಂಡ ರೊಮ್ಯಾಂಟಿಕ್‌ ಥ್ರಿಲ್ಲರ್‌ ರೂಪದಲ್ಲಿ ಸಿನಿಮಾ ಮೂಡಿಬರಲಿದೆ ಎಂಬ ಮಾತು ಕೇಳಿಬರುತ್ತಿದೆ. ಶ್ರೀಲೀಲಾ ಮತ್ತು ಜಾನ್ವಿ ಕಪೂರ್‌ ಇಬ್ಬರೂ ವಿಭಿನ್ನ ಚಿತ್ರರಂಗಗಳಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವುದರಿಂದ, ಇವರ ಕಾಂಬಿನೇಷನ್‌ ತೆರೆ ಮೇಲೆ ಹೇಗೆ ವರ್ಕೌಟ್‌ ಆಗಲಿದೆ ಎಂಬ ಕುತೂಹಲ ಈಗಲೇ ಶುರುವಾಗಿದೆ.

ಬಾಲಿವುಡ್‌ನಲ್ಲಿ ಬ್ಯುಸಿ ಶ್ರೀಲೀಲಾ!

ಶ್ರೀಲೀಲಾ ಈಗ ಹಿಂದಿಯಲ್ಲಿ ಒಂದರ ಹಿಂದೆ ಒಂದರಂತೆ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಈಗಾಗಲೇ ಕಾರ್ತಿಕ್‌ ಆರ್ಯನ್‌ ಜೊತೆ ರೊಮ್ಯಾಂಟಿಕ್‌ ಎಂಟರ್‌ಟೈನರ್‌ನಲ್ಲಿ ನಟಿಸುತ್ತಿದ್ದು, ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇಷ್ಟೇ ಅಲ್ಲದೆ, ಹಿಂದಿಯಲ್ಲಿ ಮತ್ತೊಂದು ಸಿನಿಮಾಗೂ ಶ್ರೀಲೀಲಾ ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಸೈಫ್‌ ಅಲಿ ಖಾನ್‌ ಪುತ್ರನ ಜೊತೆಗೂ ಸಿನಿಮಾ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿ ಹರಿದಾಡುತ್ತಿದೆ.

ತಮಿಳಿನಲ್ಲೂ ಆಫರ್‌ಗಳ ಸುರಿಮಳೆ!

ಹಿಂದಿ ಸಿನಿಮಾಗಳ ಜೊತೆಗೆ ಶ್ರೀಲೀಲಾ ಅವರ ಗಮನ ತಮಿಳು ಚಿತ್ರರಂಗದ ಮೇಲೂ ಇದೆ. ಧನುಷ್‌ ಜೊತೆ ಸಿನಿಮಾ, ಜೊತೆಗೆ ಅಜಿತ್‌ ಸಿನಿಮಾದಲ್ಲೂ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಟ್ಟಿನಲ್ಲಿ, ತೆಲುಗಿನಲ್ಲಿ ಸದ್ದು ಮಾಡಿದ್ದ ಶ್ರೀಲೀಲಾ ಇದೀಗ ಟಾಲಿವುಡ್‌ಗಿಂತ ಹೊರಗಿನ ಚಿತ್ರರಂಗಗಳತ್ತ ಹೆಚ್ಚು ಗಮನ ಹರಿಸುತ್ತಿರುವಂತೆ ಕಾಣುತ್ತಿದೆ. ಅದರಲ್ಲೂ ಬಾಲಿವುಡ್‌ನಲ್ಲಿ ಒಂದರ ಹಿಂದೆ ಒಂದರಂತೆ ದೊಡ್ಡ ಅವಕಾಶಗಳು ಸಿಗುತ್ತಿರುವುದು ವಿಶೇಷ. ಹಾಗಾದರೆ ಟಾಲಿವುಡ್‌ನಲ್ಲಿ ಸಕ್ಸಸ್‌ ಕಂಡ ಶ್ರೀಲೀಲಾ, ಬಾಲಿವುಡ್‌ನಲ್ಲೂ ಅದೇ ಮ್ಯಾಜಿಕ್‌ ಮಾಡ್ತಾರಾ? ಜಾನ್ವಿ ಕಪೂರ್‌ ಜೊತೆಗಿನ ಮಲ್ಟಿಸ್ಟಾರರ್‌ ಅವರ ಬಾಲಿವುಡ್‌ ಜರ್ನಿಗೆ ಮತ್ತೊಂದು ದೊಡ್ಡ ತಿರುವು ನೀಡುತ್ತದೆಯೇ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜಾನ್ವಿ ಕಪೂರ್‌ ಮನೆ ನೋಡಿದ್ದೀರಾ? ಖಾಸಗಿ ಗಾರ್ಡನ್‌ನಿಂದ ಶ್ರೀದೇವಿ ಫೋಟೋಗಳವರೆಗೆ ಎಲ್ಲವೂ ಸ್ಪೆಷಲ್‌!
Yash: ಬಸ್ ಚಾಲಕನ ಮಗ ಇಂದು ಭಾರತದ ರಾಕಿ ಭಾಯ್; ಮೋದಿ-ಯಶ್ ಜೀವನಕ್ಕಿದೆ ಆ ಒಂದು ಕನೆಕ್ಷನ್!