Bigg Boss 13 ಮನೆ ಹೇಗಿದೆ ನೋಡ್ಬೇಕಾ? ಹಾಗಿದ್ರೆ ನಿಮಗಿದೆ ಇಲ್ಲೊಂದು ಸೂಪರ್​ ಅವಕಾಶ

Published : Aug 18, 2026, 01:56 PM IST
Bigg Boss 13

ಸಾರಾಂಶ

ಬಿಗ್​ಬಾಸ್​ 13ನೇ ಸೀಸನ್‌ಗಾಗಿ 'ಅಗ್ನಿ ಪರೀಕ್ಷೆ' ಮೂಲಕ ಸ್ಪರ್ಧಿಗಳ ಆಯ್ಕೆ ನಡೆಯುತ್ತಿದ್ದು, ಇದರಲ್ಲಿ ಮಂಡ್ಯದ ಮೆಕ್ಯಾನಿಕ್ ಜಿ.ಕೆ ಪೂರ್ಣಿಮಾ 'ಸ್ಟಾರ್‌ ಕಂಟೆಸ್ಟಂಟ್‌' ಆಗಿ ಹೊರಹೊಮ್ಮಿದ್ದಾರೆ. ಇದರ ಜೊತೆಗೆ, ವೀಕ್ಷಕರಿಗೂ ಒಂದು ಸ್ಪರ್ಧೆಯ ಮೂಲಕ ಬಿಗ್​ಬಾಸ್​ ಮನೆಯ ಸೆಟ್ ನೋಡುವ ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ.

ಬಿಗ್​ಬಾಸ್​ 13ನೇ ಕನ್ನಡ ಸೀಸನ್​ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸೀಸನ್​ ಆರಂಭ ಆಗಲಿದೆ. ಈ ಬಾರಿ ಸಾಮಾನ್ಯ ಜನರಿಗೂ ಅವಕಾಶ ಕಲ್ಪಿಸಲಾಗಿದ್ದು, ಅದರ ಸ್ಪರ್ಧೆ ಇದಾಗಲೇ ನಡೆದಿದೆ. ನಾಳೆ ಅದರ ಟೆಲಿಕಾಸ್ಟ್​ ಆಗಲಿದೆ. ಕೆಲವರನ್ನು ಆಯ್ಕೆ ಮಾಡಲಾಗಿದ್ದು, ಕೆಲವರನ್ನು ಪೆಂಡಿಂಗ್​ನಲ್ಲಿ ಇಡಲಾಗಿದೆ. ಮೊದಲ ಸುತ್ತಿನಲ್ಲಿ, 60ಜನ ಆಯ್ಕೆ ಆಗಿ ಬಂದಿರುವವರಲ್ಲಿ 8 ಜನರಿಗೆ ಅರ್ಹತೆ ಟೆಸ್ಟ್‌ ಮಾಡಲಾಗಿತ್ತು. ದೀಕ್ಷಾ ಆರ್‌ ಶೆಟ್ಟಿ, ಮಾಡ್ರನ್‌ ಕವಿ ಮಂಜ, ಇಶಾ ನವೀನ್‌, ಯೋಗಿತಾ-ಯೋಗಶ್ರೀ, ಚರಣ್‌ ಶೆಟ್ಟಿ, ರತ್ನಾ ಚಂದ್ರಪ್ಪ, ಕಬಾಬ್‌ ಮಂಜು ಹಾಗೂ ಪೂರ್ಣಿಮಾ ಜಿಕೆ ಎಂಬ 8 ಸ್ಪರ್ಧಿಗಳು ಭಾಗಿಯಾಗಿದ್ದರು. ಇದರಲ್ಲಿ ಅರ್ಹತೆ ಟೆಸ್ಟ್‌ಪಾಸ್‌ ಆಗಿ ಮಾಡ್ರನ್‌ ಕವಿ ಮಂಜ, ಚರಣ್‌ ಶೆಟ್ಟಿ, ರತ್ನ ಚಂದ್ರಪ್ಪ, ಜಿ.ಕೆ ಪೂರ್ಣಿಮಾ ಎರಡನೇ ಸುತ್ತಿಗೆ ಆಯ್ಕೆ ಆಗಿದ್ದಾರೆ.

ಬಿಗ್​ಬಾಸ್​ ಸೆಟ್​ ನೋಡಲು ಅವಕಾಶ

ಇದು ಅಗ್ನಿಪರೀಕ್ಷೆ ಸುತ್ತಾದರೆ, ಇನ್ನು ಬಿಗ್​ಬಾಸ್​ ಸೆಟ್​ ನೋಡಲು ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ವಾಹಿನಿ ಪ್ರೊಮೋ ಒಂದನ್ನು ಶೇರ್​ ಮಾಡಿಕೊಂಡಿದೆ. ಬಿಗ್​ಬಾಸ್​​ನ ಸೆಟ್​ ಹೇಗೆ ಇರುತ್ತದೆ ಎನ್ನುವುದನ್ನು ನೋಡುವುದಕ್ಕಾಗಿ ಲಕ್ಷಾಂತರ ಮಂದಿ ಬಯಸುತ್ತಾರೆ. ಆದರೆ ಕೆಲವು ಷರತ್ತುಗಳು ಇರುವ ಹಿನ್ನೆಲೆಯಲ್ಲಿ, ಎಲ್ಲರಿಗೂ ಅದನ್ನು ನೋಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇದಕ್ಕೂ ಒಂದು ಸ್ಪರ್ಧೆ ಏರ್ಪಡಿಸಲಾಗಿದೆ. ಅರ್ಹರಿಗೆ ಬಿಗ್​ಬಾಸ್​ ಸೆಟ್​ ನೋಡಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಲಾಗಿದೆ.

ಅದಕ್ಕೆ ಮೂರು ಹೆಜ್ಜೆಗಳು ಎಂದು ಪ್ರೊಮೋ ಶೇರ್​ ಮಾಡಲಾಗಿದೆ. ಬಿಗ್​ಬಾಸ್​ ಅಗ್ನಿಪರೀಕ್ಷೆಯ ಪ್ರತಿ ಎಪಿಸೋಡ್​ ನೋಡಿ, ಸಿಂಪಲ್​ ಪ್ರಶ್ನೆಗಳಿಗೆ ಉತ್ತರ ಕೊಡಿ, ಜಿಯೋಹಾಸ್ಟ್​ ಸ್ಟಾರ್​ ಆರ್ಮಿ ಬೋರ್ಡ್​ನಲ್ಲಿ ಮೇಲೇರಿ, ಅವಕಾಶ ಪಡೆಯಿರಿ ಎಂದು ಹೇಳಲಾಗಿದೆ. ಆದ್ದರಿಂದ ಬಿಗ್​ಬಾಸ್ ಸೆಟ್​ಗೆ ಹೋಗಲು ಬಯಸುವವರು ಈ ಸ್ಪರ್ಧೆಯಲ್ಲಿ ವಿನ್​ ಆಗಬೇಕಿದೆ.

ಮನ ಗೆದ್ದ ಮಂಡ್ಯದ ಯುವತಿ

ಇನ್ನು ಬಿಗ್​ಬಾಸ್​ ಅಗ್ನಿ ಪರೀಕ್ಷೆ (Bigg Boss Agni Pareekshe) ಕುರಿತು ಹೇಳುವುದಾದರೆ, ಇದರಲ್ಲಿ, ಮಂಡ್ಯ ಜಿಲ್ಲೆಯ ಕೆಎಸ್‌ಆರ್‌ಟಿಸಿ ಸಂಸ್ಥೆಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ಜಿ.ಕೆ ಪೂರ್ಣಿಮಾ ಅವರಿಗೆ 30 ಸೆಕೆಂಡ್‌ ದೊಡ್ಡ ಗಾತ್ರದ ಟೈಯರ್‌ ಗಾಲಿ ಹೊಲ್ಡ್‌ ಮಾಡುವಂತೆ ಟಾಸ್ಕ್‌ ಕೊಟ್ಟಿದ್ದರು. ಇವರು 45 ಸೆಕೆಂಡ್‌ ಟೈಯರ್‌ ಎತ್ತಿ ಹಿಡಿದು, ತೀರ್ಪುಗಾರರಿಂದ ಸೈ ಎನ್ನಿಸಿಕೊಂಡರು. ಜೊತೆತೆ, ಇವರಿಗೆ ಕುಡುಕರ ರೀತಿಯಲ್ಲಿ ಟೈಟ್‌ ಆಗಿ ಸಂಗೀತಾ ಶೃಂಗೇರಿ ಮತ್ತು ವಿನಯ್‌ ಗೌಡ ಅವರಿಗೆ ಕ್ಲಾಸ್‌ ತೆಗೆದುಕೊಳ್ಳುವಂತೆ ಟೆಸ್ಟ್‌ ನೀಡಲಾಯಿತು. ಅದರಲ್ಲೂ ಅವರು ಎಲ್ಲರನ್ನೂ ರಂಜಿಸಿದರು. ನಾಲ್ವರ ಕಡೆಯಿಂದ ಗ್ರೀನ್‌ ಸಿಗ್ನಲ್‌ ಪಡೆದು ಮೊದಲ ‘ಸ್ಟಾರ್‌ ಕಂಟೆಸ್ಟಂಟ್‌’(ನಾಲ್ವರು ಗ್ರೀನ್‌ ಸಿಗ್ನಲ್ ಕೊಟ್ಟರೆ ಆ ಸ್ಪರ್ಧಿಗೆ ಸ್ಟಾರ್‌ ಕಂಟೆಸ್ಟಂಟ್ ಬಿರುದು ಸಿಗುತ್ತೆ) ಎಂಬ ಬಿರುದು ಪಡೆದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Anupama Gowda: ವಿದಾಯದ ನುಡಿ ಹೇಳಿ ಫ್ಯಾನ್ಸ್​ಗೆ ಬಿಗ್​ ಶಾಕ್​ ಕೊಟ್ಟ ಆ್ಯಂಕರ್​ ಅನುಪಮಾ ಗೌಡ: ಏನಾಯ್ತು ನಟಿಗೆ
ಅಮೃತಧಾರೆ: IPS ಆದ್ರೂ ಅಕ್ಕಾರ ಬಳಿಗೆ ಓಡೋಡಿ ಬಂದ ಮಲ್ಲಿ; ಜೈದೇವ್‌ಗಿಲ್ಲ ಉಳಿಗಾಲ