Toxic Countdown Day 09: 'ಟಾಕ್ಸಿಕ್' ಕೌಂಟ್‌ಡೌನ್ 09.. ರಾಕಿಂಗ್ ಸ್ಟಾರ್ ಯಶ್ ಈ ಸಿನಿಮಾದಲ್ಲಿ ಏನೆಲ್ಲಾ ಇದೆ? ಈ ಸ್ಪೆಷಲ್‌ ಸ್ಟೋರಿ ನೋಡಿ!

Published : Aug 18, 2026, 01:18 PM IST
Yash Toxic

ಸಾರಾಂಶ

ಇತ್ತೀಚೆಗೆ ನಟ ಯಶ್ ಅವರು ಭಾರತದ ಫೇಮಸ್ ಟಿವಿ ಶೋ ಆಪ್‌ ಕಿ ಅದಾಲತ್‌ನಲ್ಲಿ ಭಾಗವಹಿಸಿ, ಸಿನಿಮಾದ ಬಗ್ಗೆ ಹಾಗೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರ ಕೊಡುವ ಮೂಲಕ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಇಂದು 09ರ ಕೌಂಟ್‌ಡೌನ್‌ನಲ್ಲಿರುವ ಟಾಕ್ಸಿಕ್ ಬಿಡುಗಡೆ ನಾಳೆ 08.

Yash Toxic Release Date-Rocking Star Yash-Toxic Movie Countdown 09: ಯಶ್‌ ನಟನೆಯ ಟಾಕ್ಸಿಕ್ ಸಿನಿಮಾಗೆ ಕೌಂಟ್‌ಡೌನ್ 09.

ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಹಬ್ಬದ ಹವಾ ಜೋರಾಗಿದೆ. 26 ಆಗಸ್ಟ್ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿರುವ ಟಾಕ್ಸಿಕ್ ಸಿನಿಮಾಗೆ ಕೌಂಟ್‌ಡೌನ್ ಚಾಲನೆಯಲ್ಲಿದೆ. ಇನ್ನೇನು ಕೇವಲ 09 ದಿನಗಳಷ್ಟೇ ಬಾಕಿ ಇದೆ. ಯಶ್ ಫ್ಯಾನ್ಸ್ ಸೇರಿದಂತೆ ಜಗತ್ತಿನಾದ್ಯಂತ ಇರುವ ಸಿನಿರಸಿಕರಿಗೆ ಟಾಕ್ಸಿಕ್ ಬಿಡುಗಡೆ ಎಂಬುದು ಒಂದು ಹಬ್ಬದಂತೆ. ಟಾಕ್ಸಿಕ್‌ ತೆರೆಯ ಮೇಲೆ ಕಾಣಿಸಿಕೊಳ್ಳಲು ಇನ್ನು 09 ದಿನಗಳಷ್ಟೇ ಬಾಕಿ ಇದ್ದು, ಪರದೆಯಲ್ಲಿ ಈ ಸಿನಿಮಾ ಕಣ್ತುಂಬಿಕೊಳ್ಳಲು ಕನ್ನಡಿಗರು ಸೇರಿದಂತೆ ಜಗತ್ತಿನಾದ್ಯಂತ ಸಿನಿರಸಿಕರು ಹಗಲಿರುಳೂ ನಿರೀಕ್ಷೆಯಿಂದ ಕಾಯುತ್ತಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ನಟನೆ, ಗೀತು ಮೋಹನ್‌ದಾಸ್ ನಿರ್ದೇಶನ

ರಾಕಿಂಗ್ ಸ್ಟಾರ್ ಯಶ್ ನಟನೆ, ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಿದ್ಧವಾಗಿದೆ. ಆದರೆ ಈ ಸಿನಿಮಾ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಕೆಲವು ವಿದೇಶಿ ಭಾಷೆಗಳಲ್ಲಿ ಡಬ್ ಆಗಿರುವ ವರ್ಷನ್ ಬಿಡುಗಡೆ ಆಗಲಿದೆ. ಹಾಲಿವುಡ್ ತಂತ್ರಜ್ಞರು ಸೇರಿದಂತೆ, ಜಗತ್ತಿನ ಖ್ಯಾತ ಟೆಕ್ನಿಷಿಯನ್ಸ್‌ ಈ ಸಿನಿಮಾದಲ್ಲಿ ಕೆಲಸ ಮಾಡಿದ್ದು, ಇಡೀ ಸಿನಿಮಾ ಹಾಲಿವುಡ್ ರೇಂಜ್ ಹಾಗೂ ರಿಚ್ ಮೇಕಿಂಗ್ ಮೂಲಕ ಮೂಡಿ ಬಂದಿದೆ. ಇದು ಪ್ಯಾನ್ ವರ್ಲ್ಡ್ ಸಿನಿಮಾ ಆಗಿದ್ದು, ಈ ಮುಳಕ ಕನ್ನಡ ಸಿನಿಮಾ ಇದೇ ಮೊದಲ ಬಾರಿಗೆ ಜಗತ್ತಿನಾದ್ಯಂತ ಹಾಲಿವುಡ್ ಸಿನಿಮಾದಂತೆ ರಿಲೀಸ್ ಆಗಲಿದೆ. ಈ ಮೂಲಕ ಕರ್ನಾಟಕದ ಕೀರ್ತಿ ಪತಾಕೆ ವಿಶ್ವದಾದ್ಯಂತ ಮೆರೆದಾಡಲಿದೆ.

ನಮಿತ್ ಮಲ್ಹೋತ್ರಾ ಹಾಗೂ ಯಶ್ ಪಾರ್ಟ್‌ನರ್‌ಶಿಪ್‌ನಲ್ಲಿ ಟಾಕ್ಸಿಕ್ ಸಿನಿಮಾ ನಿರ್ಮಾಣವಾಗಿದ್ದು, ಈ ಸಿನಿಮಾವನ್ನು 600 ಕೋಟಿ ಬಜೆಟ್ ಮೂಲಕ ಸಿದ್ಧಪಡಿಸಲಾಗಿದೆ. ಸಿನಿಮಾ ಮೇಕಿಂಗ್ ಹಾಗೂ ಪ್ರಚಾರದ ವೆಚ್ಚ ಕೂಡ ಈ ಬಜೆಟ್‌ನಲ್ಲಿ ಸೇರಿಕೊಂಡಿದೆ. ಈಗಾಗಲೇ ಸಿನಿಮಾದ ಬಗ್ಗೆ ಅಪರಿಮಿತ ನಿರೀಕ್ಷೆ ಸೃಷ್ಟಿಯಾಗಿದ್ದು, ಸಿನಿಮಾ ಸೂಪರ್ ಹಿಟ್ ಆಗಲಿದೆ ಎಂಬುದು ಸಿನಿಮಾ ಬಾಕ್ಸ್‌ ಆಫೀಸ್ ಪಂಡಿತರ ಲೆಕ್ಕಾಚಾರ. ನಟ ಯಶ್ ಅವರು ತಮ್ಮ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗೆ ಬರೋಬ್ಬರಿ 4.5 ವರ್ಷ ಕೊಟ್ಟು ಬಿಗ್ ಬಜೆಟ್ ಹಾಗೂ ರಿಚ್ ಮೂಲಕ ಪ್ಯಾನ್ ವರ್ಲ್ಡ್ ರೂಪದಲ್ಲಿ ತೆರೆಗೆ ತರಲು ಸಜ್ಜಾಗಿದ್ದಾರೆ. ಇನ್ನೇನು ಟಾಕ್ಸಿಕ್ ಕೇವಲ 9 ದಿನಗಳ ಬಳಿಕ ತೆರೆಯ ಮೇಲೆ ರಾರಾಜಿಸಲಿದೆ. ಹಾಗೇ, ರಾಮಾಯಣ ಸಿನಿಮಾ ಇದೇ ದೀಪಾವಳಿಗೆ ಅಂದರೆ 08 ನವೆಂಬರ್ 2026ರಂದು ಜಗತ್ತಿನಾದ್ಯಂತ ತೆರೆಗೆ ಅಪ್ಪಳಿಸಲಿದೆ.

ಅಮೆರಿಕಾ ಸೇರಿದಂತೆ ಪ್ರಪಂಚದಾದ್ಯಂತ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗಳ ಪ್ರಚಾರಕಾರ್ಯ ಅಬ್ಬರದಿಂದ ಸಾಗಿದೆ. ಇನ್ನೇನು 09 ದಿನಗಳಲ್ಲಿ ಬಿಡುಗಡೆ ಆಗಲಿರುವ ಟಾಕ್ಸಿಕ್ ಚಿತ್ರವನ್ನು ನೋಡಲು ಜಗತ್ತಿನಾದ್ಯಂತ ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಯಶ್ ನಾಯಕತ್ವದ ಈ ಚಿತ್ರದಲ್ಲಿ ಭಾರತದ ಘಟಾನುಘಟಿ ತಾರೆಗಳು, ಅಂದರೆ ನಯನಾತಾರಾ, ಕನ್ನಡತಿ ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ, ಕಿಯಾರಾ ಅಡ್ವಾನಿ ನಾಯಕಿಯರಾಗಿ ನಟಿಸಿದ್ದಾರೆ. ಜೊತೆಗೆ, ಮುಖ್ಯ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್, ಸುದೇವ್ ನಾಯರ್ ನಟಿಸಿದ್ದು, ಈ ಚಿತ್ರವು ಬಹಳಷ್ಟು ನಿರೀಕ್ಷೆ ಮೂಡಿಸಿದೆ.

ಒಟ್ಟಿನಲ್ಲಿ, ಕರ್ನಾಟಕ ಸೇರಿದಂತೆ ಜಗತ್ತಿನಾದ್ಯಂತ ಯಶ್ ನಟನೆ-ನಿರ್ಮಾಣದ ಟಾಕ್ಸಿಕ್ ಹಬ್ಬಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಇತ್ತೀಚೆಗೆ ನಟ ಯಶ್ ಅವರು ಭಾರತದ ಫೇಮಸ್ ಟಿವಿ ಶೋ ಆಪ್‌ ಕಿ ಅದಾಲತ್‌ನಲ್ಲಿ ಭಾಗವಹಿಸಿ, ಸಿನಿಮಾದ ಬಗ್ಗೆ ಹಾಗೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರ ಕೊಡುವ ಮೂಲಕ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಇಂದು 09ರ ಕೌಂಟ್‌ಡೌನ್‌ನಲ್ಲಿರುವ ಟಾಕ್ಸಿಕ್ ಬಿಡುಗಡೆ ನಾಳೆ 08. ಎಲ್ಲಾ ದಿನಗಳ ಅಪ್‌ಡೇಟ್‌ಗೆ 'ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್' ಫಾಲೋ ಮಾಡುತ್ತಿರಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನನ್ನನ್ನು ಶಾಂತಿಯಿಂದ ಸಾಯಲು ಬಿಡಿ.. ಮಾಡೆಲ್‌ ಜೀವನದ ಕೊನೆಯ 90 ನಿಮಿಷ
​ಐಪಿಎಲ್ 'ನ್ಯಾಷನಲ್ ಕ್ರಶ್' ಜೊತೆ ಮ್ಯೂಸಿಕ್ ಮಾಂತ್ರಿಕ ಅನಿರುದ್ಧ್ ಮದುವೆ? ದಿನಾಂಕ, ಜಾಗ ಎಲ್ಲವೂ ಫಿಕ್ಸ್