ತ್ರಿಷಾ ಲಕ್ಸುರಿ ಲೈಫ್ ಈಗ ರಾಜಕೀಯ ಚರ್ಚೆಯ ಹಾಟ್ ಟಾಪಿಕ್: ತಲೈವಿ ಆಗ್ತಾರಾ ವಿಜಯ್ ದೇವತೆ?

Published : May 09, 2026, 05:13 PM IST
Trisha Krishnan

ಸಾರಾಂಶ

ದಳಪತಿ ವಿಜಯ್ ತಮಿಳುನಾಡು ಚುನಾವಣೆಯಲ್ಲಿ ವಿಜಯ ಸಾಧಿಸಿ ಸಿಎಂ ಆಗುವ ಹೊಸ್ತಿಲಿನಲ್ಲಿರೋವಾಗ, ತ್ರಿಷಾ ಹೆಸರು ಕೂಡ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ದಳಪತಿ ಗೆಳತಿ ತ್ರಿಷಾ ಕೂಡ ಪಾಲಿಟಿಕ್ಸ್​ಗೆ ಬರ್ತಾರೆ ಅಂತ ಸುದ್ದಿಯಾಗ್ತಾ ಇದೆ.

ದಳಪತಿ ವಿಜಯ್ ತಮಿಳುನಾಡು ಚುನಾವಣೆಯಲ್ಲಿ ವಿಜಯ ಸಾಧಿಸಿ ಸಿಎಂ ಆಗುವ ಹೊಸ್ತಿಲಿನಲ್ಲಿರೋವಾಗ, ತ್ರಿಷಾ ಹೆಸರು ಕೂಡ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ದಳಪತಿ ಗೆಳತಿ ತ್ರಿಷಾ ಕೂಡ ಪಾಲಿಟಿಕ್ಸ್​ಗೆ ಬರ್ತಾರೆ ಅಂತ ಸುದ್ದಿಯಾಗ್ತಾ ಇದೆ. ತ್ರಿಷಾ ಕಳೆದ 27 ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದಾರೆ. ವಯಸ್ಸು 40 ದಾಟಿದ್ರೂ ಈಗಲೂ ಬಹುಬೇಡಿಕೆಯ ನಟಿ. ಅಷ್ಟೇ ಅಲ್ಲ ತ್ರಿಷಾ ನೂರಾರು ಕೋಟಿ ಒಡತಿ ಕೂಡ. ತಮಿಳುನಾಡಿನಲ್ಲಿ ದಳಪತಿ ವಿಜಯ್ ಗೆದ್ದಿದ್ದೇ ಗೆದ್ದಿದ್ದು, ವಿಜಯ್ ಗಿಂತ ಹೆಚ್ಚಾಗಿ ತ್ರಿಷಾ ಹೆಸರು ಚಾಲ್ತಿಗೆ ಬಂದಿದೆ. ವಿಜಯ್-ತ್ರಿಷಾ ಕೇವಲ ಸಹ ನಟ ಮತ್ತು ನಟಿ ಅಲ್ಲ.

ಇಬ್ಬರ ನಡುವಿನ ಬಾಂಧವ್ಯದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ವಿಜಯ್ ತಮ್ಮ ಪತ್ನಿಯಿಂದ ವಿಚ್ಛೇಧನ ಪಡೆಯೋದಕ್ಕೆ ಮುಂದಾಗಿರೋದು ಗೊತ್ತೇ ಇದೆ. ತನ್ನ ನಿಶ್ಚಿತಾರ್ಥ ಮುರಿದುಬಿದ್ದ ಮೇಲೆ ಒಬ್ಬಂಟಿಯಾಗಿರೋ ತ್ರಿಷಾ, ವಿಜಯ್ ಜೊತೆಗೆ ಆತ್ಮೀಯತೆ ಹೊಂದಿದ್ದಾರೆ. ಸೋ ಇವರ ಜೋಡಿಯನ್ನ ಎಲ್ಲರೂ ಎಂ.ಜಿ.ಆರ್ ಜಯಲಲಿತಾ ಜೊತೆಗೆ ಹೋಲಿಕೆ ಮಾಡ್ತಾ ಇದ್ದಾರೆ. ವಿಜಯ್ ಎರಡು ಕ್ಷೇತ್ರಗಳನ್ನ ಗೆದ್ದಿದ್ದು, ಆ ಪೈಕಿ ಪೆರಂಬೂರನ್ನ ಇಟ್ಟುಕೊಂಡು, ತಿರುಚ್ಚಿಗೆ ರಾಜಿನಾಮೆ ಕೊಡ್ತಾರೆ ಅನ್ನೋ ಸುದ್ದಿ ಇದೆ. ಸೋ ತಿರುಚ್ಚಿಯಿಂದ ಟಿವಿಕೆ ಪಾರ್ಟಿ ತ್ರಿಷಾರನ್ನ ಸ್ಪರ್ಧೆಗೆ ಇಳಿಸಲಿದೆ ಅನ್ನೋ ಮ್ಯಾಟರ್ ಕೂಡ ಸದ್ದು ಮಾಡ್ತಾ ಇದೆ.

ತ್ರಿಷಾ ಸಿನಿಇಂಡಸ್ಟ್ರಿಗೆ ಬಂದು ಬರೊಬ್ಬರಿ 27 ವರ್ಷ ಆಗಿವೆ. 1999ರಲ್ಲಿ ಬಂದ ಜೋಡಿ ಸಿನಿಮಾದಲ್ಲಿ ಸಣ್ಣದೊಂದು ಪಾತ್ರ ಮಾಡೋ ಮೂಲಕ ತ್ರಿಷಾ ಮೊದಲು ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ರು. ಆವತ್ತಿಗೆ ತ್ರಿಷಾಗೆ 16 ವರ್ಷ ವಯಸ್ಸು. ಮುಂದೆ 2002ರಲ್ಲಿ ಸೂರ್ಯ ನಟನೆಯ ಮೌನಮ್ ಪೆಸಿಯಾದೆ ಸಿನಿಮಾ ಮೂಲಕ ತ್ರಿಷಾ ನಾಯಕಿಯಾಗಿ ಜರ್ನಿ ಆರಂಭಿಸಿದ್ರು. 2003ರಲ್ಲಿ ವಿಕ್ರಮ್ ಜೊತೆ ನಟಿಸಿದ ಸಾಮಿ ಮೂವಿ ಸೂಪರ್ ಹಿಟ್ ಆಯ್ತು. 2004ರಲ್ಲಿ ಟಾಲಿವುಡ್​ಗೆ ಎಂಟ್ರಿ ಕೊಟ್ಟ ತ್ರಿಷಾ, ಪ್ರಭಾಸ್ ಜೊತೆ ವರ್ಷ ಮೂವಿಯಲ್ಲಿ ನಟಿಸಿದ್ರು. ವರ್ಷ ಆ ವರ್ಷದ ಬ್ಲಾಕ್ ಬಸ್ಟರ್ ಹಿಟ್ ಅನ್ನಿಸಿಕೊಳ್ತು.

ಇನ್ನೂ ಅದೇ ವರ್ಷ ದಳಪತಿ ವಿಜಯ್ ಜೊತೆಗೆ ಗಿಲ್ಲಿ ಸಿನಿಮಾದಲ್ಲಿ ಮೊದಲ ಬಾರಿ ತ್ರಿಷಾ ಜೊತೆಯಾಗಿ ನಟಿಸಿದ್ರು. ಗಿಲ್ಲಿ ಕೂಡ ಬ್ಲಾಕ್ ಬಸ್ಟರ್ ಹಿಟ್. ಅಲ್ಲಿಂದ ತ್ರಿಷಾ ಸ್ಟಾರ್ ನಟಿ ಪಟ್ಟ ಪಡೆದುಕೊಂಡುಬಿಟ್ರು. ಮುಂದಿನ ಒಂದಿಡಿ ದಶಕ ಕಾಲಿವುಡ್ ಟಾಲಿವುಡ್​ನ ಅಕ್ಷರಶಃ ರಾಣಿಯಂತೆ ಆಳಿದ್ರು. 2014ರಲ್ಲಿ ನಮ್ಮ ಪವರ್ ಸ್ಟಾರ್ ಪುನೀತ್ ಜೊತೆ ಕನ್ನಡ ಮೂವಿ ಪವರ್ ನಲ್ಲೂ ತ್ರಿಷಾ ನಟಿಸಿದ್ರು. ಗುರುವಾರ ಸಂಜೆ ಚೂಡಿದಾರ ತೊಟ್ಟು ಮರಿಜಿಂಕೆಯಂತೆ ಹೆಜ್ಜೆ ಹಾಕಿದ್ರು. ಸದ್ಯ ತ್ರಿಷಾಗೆ 43 ವರ್ಷ ವಯಸ್ಸು, ಈಗಲೂ ತ್ರಿಷಾ ಬಹುಬೇಡಿಕೆಯ ನಟಿ. ಸೂರ್ಯ ನಟನೆಯ ಕರುಪ್ಪು, ಚಿರಂಜೀವಿ ನಟನೆಯ ವಿಶ್ವಂಭರ, ಮೋಹನ್ ಲಾಲ್ ನಟನೆಯ ರಾಮ್ ಚಿತ್ರಗಳಲ್ಲಿ ತ್ರಿಷಾ ನಟಿಸ್ತಾ ಇದ್ದಾರೆ.

ಶತಕೋಟಿ ಆಸ್ತಿ ಪಾಸ್ತಿಯ ಒಡತಿ ನಟಿ ತ್ರಿಷಾ!

ಹೌದು ಎರಡು ದಶಕಗಳ ಕಾಲ ಸ್ಟಾರ್ ನಟಿಯಾಗಿ ಮೆರೆದಿರೋ ತ್ರಿಷಾ ಆಸ್ತಿ ನೂರು ಕೋಟಿಗೂ ಹೆಚ್ಚು. ಚೆನ್ನೈನಲ್ಲಿ 10-12 ಕೋಟಿ ರೂ. ಮೌಲ್ಯದ ಮನೆ ಹಾಗೂ ಹೈದರಾಬಾದ್‌ನಲ್ಲಿ 6-7 ಕೋಟಿ ರೂ. ಮೌಲ್ಯದ ಫ್ಲಾಟ್ ಹೊಂದಿದ್ದಾರೆ ತ್ರಿಷಾ. ತಮಿಳು ಚಿತ್ರರಂಗದಲ್ಲಿ ನಟಿಸೋವಾಗ ಚೆನ್ನೈ ಬಂಗಲೆಯಲ್ಲಿ ಇದ್ರೆ, ತೆಲುಗು ಚಿತ್ರಗಳಲ್ಲಿ ಕೆಲಸ ಮಾಡೋವಾಗ ಹೈದ್ರಾಬಾದ್ ಫ್ಲಾಟ್​ನಲ್ಲಿರ್ತಾರೆ. ಮರ್ಸಿಡಿಸ್-ಬೆನ್ಜ್ ಎಸ್-ಕ್ಲಾಸ್, ಬಿಎಂಡಬ್ಲ್ಯು 5 ಸೀರಿಸ್ ಮತ್ತು ರೇಂಜ್ ರೋವರ್ ಇವೊಕ್‌ನಂತಹ ಪ್ರೀಮಿಯಂ ಕಾರುಗಳು ತ್ರಿಷಾ ಗ್ಯಾರೇಜ್‌ನಲ್ಲಿವೆ. ಈಗಲೂ ಚಿತ್ರವೊಂದಕ್ಕೆ 3 ಕೋಟಿ ಸಂಭಾವನೆ ಪಡೆಯೋ ತ್ರಿಷಾ, ಜಾಹೀರಾತು, ಬ್ರ್ಯಾಂಡ್ ಪ್ರಮೋಷನ್ಸ್​ನಿಂದ ಕೋಟಿ ಕೋಟಿ ಗಳಿಕೆ ಮಾಡ್ತಾರೆ. ಸದ್ಯ ತ್ರಿಷಾ , ವಿಜಯ್ ಬೆನ್ನಹಿಂದೆಯೇ ರಾಜಕೀಯಕ್ಕೆ ಬರ್ತಾರೆ ಅನ್ನೋ ನ್ಯೂಸ್ ಹರಿದಾಡ್ತಾ ಇರೋದ್ರಿಂದ ಅವರ ಆಸ್ತಿ ಪಾಸ್ತಿ ವಿಷ್ಯ ಚರ್ಚೆಯಾಗ್ತಾ ಇದೆ. ಎನಿವೇ ತ್ರಿಷಾ ಎಲೆಕ್ಷನ್​ಗೆ ನಿಂತ್ರೆ ಅವರ ಆಸ್ತಿ ಎಷ್ಟು ಅನ್ನೋದನ್ನ ಅವರೇ ಘೋಷಿಸ್ತಾರೆ , ಆಗ ಗೊತ್ತಾಗುತ್ತೆ ತ್ರಿಷಾ ಅದೆಷ್ಟು ಸಿರಿವಂತೆ ಅಂತ..!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಿನಿಮಾದ ಪಂಚ್ ಡೈಲಾಗ್ ರಾಜಕೀಯದಲ್ಲಿ ವರ್ಕೌಟ್ ಆಗುತ್ತಾ? ವಿಜಯ್‌ಗೆ ಕಠಿಣ ಪರೀಕ್ಷೆ!
ಸಪ್ತಮಿ ಗೌಡ ಬಳಿಕ ಪಾಪರಾಜಿಗಳ ಮೇಲೆ ರಣಬೀರ್​ ಕಪೂರ್ ಗರಂ: ರಾಂಗ್ ಆದ ಬಾಲಿವುಡ್​ ರಾಮ!