ಬ್ರೇಕಪ್ ಸುದ್ದಿ ಬೆನ್ನಲ್ಲೇ ಮತ್ತೆ ತ್ರಿಶಾ ಪ್ರತ್ಯಕ್ಷ! ಯಾರ ಜೊತೆ ಎಲ್ಲಿ ಬಂದು ಚಮಕ್ ಕೊಟ್ರು ನೋಡಿ!

Published : Aug 15, 2026, 12:27 PM IST
Trisha

ಸಾರಾಂಶ

'ಗಿಲ್ಲಿ' ಸಿನಿಮಾದಿಂದ ಹಿಡಿದು ಕಳೆದ ವರ್ಷ ತೆರೆಕಂಡ 'ಲಿಯೋ'ವರೆಗೆ ಇವರಿಬ್ಬರ ಸ್ನೇಹ ಮತ್ತು ಸಿನಿಮಾ ಪಯಣ ಅದ್ಭುತವಾಗಿದೆ. ವಿಜಯ್ ಮತ್ತು ತ್ರಿಶಾ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡದಿದ್ದರೂ ಸಿಕ್ಕಾಪಟ್ಟೆ ವೈರಲ್ ಅಗ್ತಿದ್ದಾರೆ. ಇಲ್ಲಿದೆ ಹೊಸ ಸ್ಟೋರಿ ನೋಡಿ..

Trisha Krishnan attends CM Vijay Flag Hoisting: ಹಳದಿ ಸೀರೆಯಲ್ಲಿ ತ್ರಿಶಾ ಧಮಾಕಾ: ಸಿಎಂ ವಿಜಯ್ ಪೋಷಕರ ಪಕ್ಕದಲ್ಲೇ ಕುಳಿತ 'ಲಿಯೋ' ನಟಿ! ಬ್ರೇಕಪ್ ವದಂತಿಗೆ ಬಿದ್ದಿತೇ ಬ್ರೇಕ್?

ದಕ್ಷಿಣ ಭಾರತದ ಚಿತ್ರರಂಗದ 'ಕ್ಯೂಟ್ ಅಂಡ್ ಹಾಟ್' ಜೋಡಿ ಅಂದ್ರೆ ಅದು ವಿಜಯ್ ಮತ್ತು ತ್ರಿಶಾ. ಇವರಿಬ್ಬರ ಆನ್-ಸ್ಕ್ರೀನ್ ಕೆಮಿಸ್ಟ್ರಿ ನೋಡಿ ಎಷ್ಟು ಜನ ಫಿದಾ ಆಗಿದ್ದಾರೋ ಗೊತ್ತಿಲ್ಲ. ಆದರೆ ಇತ್ತೀಚೆಗೆ ಈ ಜೋಡಿಯ ಬಗ್ಗೆ ಕೇಳಿಬರುತ್ತಿದ್ದ ಗಾಸಿಪ್‌ಗಳು ಮಾತ್ರ ಗಾಂಧಿನಗರದಿಂದ ಚೆನ್ನೈವರೆಗೂ ದೊಡ್ಡ ಹಲ್ಚಲ್ ಎಬ್ಬಿಸಿದ್ದವು. "ವಿಜಯ್ ಮತ್ತು ತ್ರಿಶಾ ಮಧ್ಯೆ ಎಲ್ಲವೂ ಸರಿಯಿಲ್ಲ, ಇಬ್ಬರೂ ದೂರವಾಗಿದ್ದಾರೆ" ಎನ್ನುವ ಬ್ರೇಕಪ್ ವದಂತಿಗಳ ನಡುವೆಯೇ, ಈಗ ನಟಿ ತ್ರಿಶಾ ನೀಡಿದ ಒಂದು ಸರ್ಪ್ರೈಸ್ ಎಂಟ್ರಿ ಇಡೀ ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದೆ!

ಅಸಲಿಗೆ ಅಲ್ಲಿ ನಡೆದಿದ್ದೇನು?

ಶನಿವಾರದಂದು ಚೆನ್ನೈನ ಐತಿಹಾಸಿಕ ಕೋಟೆ ಸೈಂಟ್ ಜಾರ್ಜ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ. ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಧ್ವಜಾರೋಹಣ ಮಾಡುವ ಆ ಶುಭ ಮುಹೂರ್ತದಲ್ಲಿ ಎಲ್ಲರ ಕಣ್ಣು ಯಾರ ಮೇಲಿತ್ತು ಗೊತ್ತಾ? ಅದು ಕಣ್ಮನ ಸೆಳೆಯುವ ಹಳದಿ ಬಣ್ಣದ ಸೀರೆಯಲ್ಲಿ ಮಿಂಚುತ್ತಿದ್ದ ತ್ರಿಶಾ ಕೃಷ್ಣನ್ ಅವರ ಮೇಲೆ! ಅರೆ, ಸರ್ಕಾರಿ ಕಾರ್ಯಕ್ರಮಕ್ಕೆ ತ್ರಿಶಾ ಬಂದಿದ್ದರಲ್ಲಿ ಏನು ವಿಶೇಷ ಅಂದ್ಕೊಳ್ತಿದ್ದೀರಾ? ಅಸಲಿ ಟ್ವಿಸ್ಟ್ ಇರೋದೇ ಇಲ್ಲಿ!

ಪೋಷಕರ ಪಕ್ಕದಲ್ಲೇ ತ್ರಿಶಾ ದರ್ಬಾರ್!

ವೈರಲ್ ಆಗಿರುವ ವಿಡಿಯೋಗಳಲ್ಲಿ ತ್ರಿಶಾ ಅವರು ಮುಂದಿನ ಸಾಲಿನಲ್ಲಿ ವಿಜಯ್ ಅವರ ಪೋಷಕರಾದ ಎಸ್‌ಎ ಚಂದ್ರಶೇಖರ್ ಮತ್ತು ಶೋಭಾ ಚಂದ್ರಶೇಖರ್ ಅವರ ಪಕ್ಕದಲ್ಲೇ ಆಸೀನರಾಗಿದ್ದರು. ಅಷ್ಟೇ ಅಲ್ಲ, ಪರೇಡ್ ವೇಳೆ ವಿಜಯ್ ಅವರಿಗೆ ಅತ್ಯಂತ ಗೌರವದಿಂದ ನಮಸ್ಕರಿಸಿದ್ದು ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿದೆ. ಹಳದಿ ಸೀರೆಯಲ್ಲಿ ದೇವತೆಯಂತೆ ಕಂಗೊಳಿಸುತ್ತಿದ್ದ ತ್ರಿಶಾ, ಸಿಎಂ ವಿಜಯ್ ಅವರ ತಾಯಿಯೊಂದಿಗೆ ಅಷ್ಟೇ ಆತ್ಮೀಯವಾಗಿ ಕುಳಿತು ಮಾತನಾಡುತ್ತಿದ್ದುದು ನೋಡಿದರೆ, ಬ್ರೇಕಪ್ ವದಂತಿಗಳೆಲ್ಲಾ ಕೇವಲ ಗಾಳಿ ಸುದ್ದಿ ಎನ್ನುವಂತಿತ್ತು.

ಇದು ಮೊದಲ ಬಾರಿಯಲ್ಲ!

ಈ ಹಿಂದೆ ಮೇ ತಿಂಗಳಲ್ಲಿ ನಡೆದ ವಿಜಯ್ ಅವರ ಪ್ರಮಾಣವಚನ ಸಮಾರಂಭದಲ್ಲೂ ತ್ರಿಶಾ ಹೀಗೆಯೇ ಸಂಚಲನ ಸೃಷ್ಟಿಸಿದ್ದರು. ಅಲ್ಲಿಯೂ ಮೊದಲ ಸಾಲಿನಲ್ಲೇ ಕುಳಿತಿದ್ದ ತ್ರಿಶಾ, ವೇದಿಕೆಯ ಮೇಲೆ ಹೋಗುವ ಮುನ್ನ ವಿಜಯ್ ತಾಯಿ ಶೋಭಾ ಅವರನ್ನ ತಬ್ಬಿಕೊಂಡು ಪ್ರೀತಿ ವ್ಯಕ್ತಪಡಿಸಿದ್ದರು. ಈ ದೃಶ್ಯಗಳೇ ಸಾಕು, ವಿಜಯ್ ಕುಟುಂಬದ ಜೊತೆ ತ್ರಿಶಾ ಅವರಿಗೆ ಎಷ್ಟು ಗಾಢವಾದ ಸಂಬಂಧವಿದೆ ಎಂದು ಸಾರಲು.

ಸಂಗೀತಾ-ವಿಜಯ್ ಡಿವೋರ್ಸ್ ಕಥೆಯೇನು?

ಇನ್ನೊಂದೆಡೆ, ವಿಜಯ್ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಪತ್ನಿ ಸಂಗೀತಾ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬ ವದಂತಿಗಳು ಅಭಿಮಾನಿಗಳನ್ನು ಕಂಗಾಲಾಗಿಸಿದ್ದವು. ಆದರೆ ಈಗ ಸಿಕ್ಕಿರುವ ಲೇಟೆಸ್ಟ್ ಅಪ್‌ಡೇಟ್ ಅಂದ್ರೆ, ಸಂಗೀತಾ ಅವರು ತಮ್ಮ ವಿಚ್ಛೇದನ ಅರ್ಜಿಯನ್ನು ವಾಪಸ್ ಪಡೆದಿದ್ದಾರಂತೆ! ಅಂದರೆ ವಿಜಯ್ ಸಂಸಾರದಲ್ಲಿ ಈಗ ಮತ್ತೆ ನೆಮ್ಮದಿಯ ವಾತಾವರಣ ನಿರ್ಮಾಣವಾಗಿದೆ.

ಸೌತ್ ಸಿನೆಮಾದ ಐಕಾನಿಕ್ ಜೋಡಿ!

'ಗಿಲ್ಲಿ' ಸಿನಿಮಾದಿಂದ ಹಿಡಿದು ಕಳೆದ ವರ್ಷ ತೆರೆಕಂಡ 'ಲಿಯೋ'ವರೆಗೆ ಇವರಿಬ್ಬರ ಸ್ನೇಹ ಮತ್ತು ಸಿನಿಮಾ ಪಯಣ ಅದ್ಭುತವಾಗಿದೆ. ವಿಜಯ್ ಮತ್ತು ತ್ರಿಶಾ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡದಿದ್ದರೂ, ಇಂತಹ ಸಾರ್ವಜನಿಕ ಸಮಾರಂಭಗಳಲ್ಲಿ ಇವರ ಸಾಮೀಪ್ಯ ಹೊಸ ಹೊಸ ಚರ್ಚೆಗಳಿಗೆ ದಾರಿ ಮಾಡಿಕೊಡುತ್ತಿದೆ.

ಒಟ್ಟಿನಲ್ಲಿ, ಬ್ರೇಕಪ್ ಗಾಳಿ ಸುದ್ದಿಗಳಿಗೆ ಹಳದಿ ಸೀರೆಯುಟ್ಟ ತ್ರಿಶಾ ತಮ್ಮ ಮೌನದ ಮೂಲಕವೇ ಉತ್ತರಿಸಿದ್ದಾರೆ. ವಿಜಯ್ ಪೋಷಕರ ಜೊತೆಗಿನ ಇವರ ಈ ಆತ್ಮೀಯತೆ ಅಭಿಮಾನಿಗಳ ಮುಖದಲ್ಲಿ ನಗು ತಂದಿರುವುದಂತೂ ಸುಳ್ಳಲ್ಲ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಮಾತನಾಡಲ್ಲ ಎಂದಿದ್ದೇಕೆ ಸೋನು ನಿಗಮ್? ಈ ನಿರ್ಧಾರದ ಹಿಂದಿನ ಸೀಕ್ರೆಟ್ ಇದು!
ನಾನು ಸನಾತನ ಧರ್ಮ ಪಾಲಿಸುವ ಹಿಂದೂ, ನನ್ನ ಹಿಂದೆ ಆಂಜನೇಯ ಇದ್ದಾನೆ: ಪುಷ್ಪ ನಟಿ ಹೇಳಿಕೆ ವೈರಲ್