
ತ್ರಿಷಾ ಪೋಸ್ಟ್: ಬಗೆಬಗೆಯ ಚರ್ಚೆಗಳನ್ನು ಹುಟ್ಟುಹಾಕಿದ್ದು, ಇಂಟರ್ನೆಟ್‌ನಲ್ಲಿ ಅತ್ಯಂತ ವೇಗವಾಗಿ ವೈರಲ್ ಆಗುತ್ತಿದೆ!
ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ (Trisha Krishnan) ಅವರು ತಮಿಳುನಾಡು ಮುಖ್ಯಮಂತ್ರಿ ಮತ್ತು ನಟ ದಳಪತಿ ವಿಜಯ್ (Thalapathy Vijay) ಅವರ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ತ್ರಿಶಾ, ವಿಜಯ್ ಮತ್ತು ಹುಟ್ಟುಹಬ್ಬದ ಕೇಕ್ ಇದೆ. ಫೋಟೋದೊಂದಿಗೆ ತ್ರಿಶಾ ಅವರು, "ಎಲ್ಲವನ್ನೂ ಸಾರ್ಥಕಗೊಳಿಸುವ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು (To the person who makes it all worth it), HBD ❤️" ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಅಭಿಮಾನಿಗಳು ಈ ಫೋಟೋ ಮತ್ತು ಅದರ ಕ್ಯಾಪ್ಶನ್ ಬಗ್ಗೆ ಬಗೆಬಗೆಯಾಗಿ ಚರ್ಚಿಸುತ್ತಿದ್ದಾರೆ. ಸದ್ಯ ಈ ಚಿತ್ರವು ಇಂಟರ್ನೆಟ್‌ನಲ್ಲಿ ಕಿಚ್ಚು ಹಚ್ಚಿದ್ದು, ಅತ್ಯಂತ ವೇಗವಾಗಿ ವೈರಲ್ ಆಗುತ್ತಿದೆ.
ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಅಭಿಮಾನಿಗಳು ಈ ಫೋಟೋ ಮತ್ತು ಅದರ ಕ್ಯಾಪ್ಶನ್ ಬಗ್ಗೆ ಬಗೆಬಗೆಯಾಗಿ ಚರ್ಚಿಸುತ್ತಿದ್ದಾರೆ. ಸದ್ಯ ಈ ಚಿತ್ರವು ಇಂಟರ್ನೆಟ್‌ನಲ್ಲಿ ಕಿಚ್ಚು ಹಚ್ಚಿದ್ದು, ಅತ್ಯಂತ ವೇಗವಾಗಿ ವೈರಲ್ ಆಗುತ್ತಿದೆ.
ಹುಟ್ಟುಹಬ್ಬದ ಬೆನ್ನಲ್ಲೇ ಅನ್‌ಫಾಲೋ ಆಕ್ಷನ್!
ನಟ ವಿಜಯ್ ನಿನ್ನೆಯಷ್ಟೇ (22 June) ತಮ್ಮ 52ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಈ ಸಂಭ್ರಮ ಮುಗಿದ ಕೇವಲ ಒಂದೇ ದಿನದ ಅಂತರದಲ್ಲಿ ನಟಿ ತ್ರಿಶಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಲು ಆಾರಂಭಿಸಿದೆ. ಇದು ವಿಜಯ್ ಮತ್ತು ತ್ರಿಶಾ ಅವರ ಒಟ್ಟಾರೆ ಒಡನಾಟ ಹಾಗೂ ಸ್ನೇಹದ ನಡುವೆ ಎಲ್ಲವೂ ಸರಿಯಿಲ್ಲವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತ್ತು. ಆದರೆ ಈ ಸುದ್ದಿಗೀಗ ಶಾಕಿಂಗ್ ಟ್ವಿಸ್ಟ್ ಸಿಕ್ಕಿದೆ.
ಪ್ರತಿ ವರ್ಷ ವಿಜಯ್ ಅವರ ಹುಟ್ಟುಹಬ್ಬದಂದು ಎಲ್ಲರಿಗಿಂತ ಮೊದಲು ವಿಶೇಷ ಪೋಸ್ಟ್ ಮಾಡುತ್ತಿದ್ದ ನಟಿ ತ್ರಿಶಾ ಈ ಬಾರಿ ವಿಶ್ ಮಾಡಿರಲಿಲ್ಲ. ಈ ವರ್ಷ ವಿಜಯ್ ಜನ್ಮದಿನದಂದು ತ್ರಿಷಾ ಅವರ ಖಾತೆಯಿಂದ ಯಾವುದೇ ಶುಭಾಶಯದ ಪೋಸ್ಟ್‌ಗಳು ಪ್ರಕಟವಾಗದೆ ಸಂಪೂರ್ಣ ಮೌನ ಆವರಿಸಿತ್ತು. ಇದು ಇವರಿಬ್ಬರ ನಡುವಿನ ಸಂಬಂಧದಲ್ಲಿ ದೊಡ್ಡ ಬದಲಾವಣೆ ಆಗಿದೆಯೇ ಎಂದು ಅಭಿಮಾನಿಗಳು ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಅನ್‌ಫಾಲೋ ಮಾಡುವ ಈ ಮೂಲಕ ತ್ರಿಶಾ ತಮ್ಮ ದೀರ್ಘಕಾಲದ ಸಂಬಂಧಕ್ಕೆ ಪೂರ್ಣವಿರಾಮ ಹಾಕುವುದರೊಂದಿಗೆ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿಗೆ ಪುಷ್ಠಿ ಸಿಕ್ಕಿದಂತಾಗಿತ್ತು. ಆದರೆ ಈಗ ಎಲ್ಲಾ ಸುದ್ದಿ ಉಲ್ಟಾ ಹೊಡೆದಿದೆ!
ಇದೀಗ, ನಟಿ ತ್ರಿಷಾ ಕೃಷ್ಣನ್ ಅವರು ಎಕ್ಸ್ (ಟ್ವಿಟ್ಟರ್)ನಲ್ಲಿ ವಿಶೇಷವಾದ ಕೇಕ್ ಇಟ್ಟುಕೊಂಡು ತಾವಿಬ್ಬರೂ ಜೊತೆಯಾಗಿರುವ ಫೋಟೋ ಹಂಚಿಕೊಳ್ಳುವ ಮೂಲಕ ಹುಟ್ಟುಹಬ್ಬಕ್ಕೆ ತುಂಬಾ ಸ್ಪೆಷಲ್ ಎಂಬಂತಹ ವಿಶ್ ಮಾಡಿದ್ದಾರೆ. ಈ ಮೂಲಕ ಇಂದು ಬೆಳಿಗ್ಗೆಯಿಂದ ಹಬ್ಬಿದ್ದ ಬ್ರೇಕಪ್ ವದಂತಿಯನ್ನು ಅವರು ಸ್ವತಃ ತಳ್ಳಿಹಾಕಿದಂತೆ ಆಗಿದೆ. ತ್ರಿಷಾ ಈಗ ಒಂದು ತಾಸಿನ ಮೊದಲು ಮಾಡರುವ ಟ್ವೀಟ್ (X) ಸೋಷಿಯಲ್ ಮೀಡಿಯಾಗಳಲ್ಲಿ ಇದೀಗ ಭಾರೀ ಸುದ್ದಿ ಹಾಗೂ ಸದ್ದು ಮಾಡುತ್ತಿದ್ದ ಬಹಳಷ್ಟು ಚರ್ಚೆ ಹುಟ್ಟುಹಾಕಿದೆ. ಸದ್ಯಕ್ಕೆ ವಿಜಯ್ ಹಾಗೂ ಪತ್ನಿ ನಡುವಿನ ಡಿವೋರ್ಸ್ ಪ್ರಕರಣದ ಮಧ್ಯೆ ಈ ಎಲ್ಲಾ ಬೆಳವಣಿಗೆ ತೀವ್ರ ಕುತೂಹಲ ಸೃಷ್ಟಿಸುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.