ಈ ಖ್ಯಾತ ಗಾಯಕಿಗೆ ಇದ್ದಕ್ಕಿದ್ದಂತೆ ಏನಾಯ್ತು? ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಲು ಮತ್ತೊಬ್ಬರ ಸಹಾಯ ಪಡೆದು ಬಂದಿದ್ಯಾಕೆ?

Published : Jun 23, 2026, 06:50 PM IST
Alka Yagnik

ಸಾರಾಂಶ

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ವರ್ಣರಂಜಿತ ವೇದಿಕೆಯಲ್ಲಿ ಭಾರತದ ಈ ಪ್ರಖ್ಯಾತ ಹಿನ್ನೆಲೆ ಗಾಯಕಿಗೆ ರಾಷ್ಟ್ರಪತಿ  ದ್ರೌಪದಿ ಮುರ್ಮು ಅವರು ಭಾರತದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ 'ಪದ್ಮಭೂಷಣ' ಪ್ರಶಸ್ತಿ ನೀಡಿ ಗೌರವಿಸಿದರು. ಯಾರು ಈ ಗಾಯಕಿ? ಸ್ಟೋರಿ ನೋಡಿ..

ಭಾರತದ ಅಪ್ರತಿಮ ಗಾಯಕಿಗೆ ಅತ್ಯುನ್ನತ ಪ್ರಶಸ್ತಿಗಳಲ್ಲೊಂದು ನೋಡಿ ಗೌರವಾರ್ಪಣೆ

ದೆಹಲಿ: ಮನುಷ್ಯನ ಜೀವನ ಅದೆಷ್ಟು ಅನಿರೀಕ್ಷಿತ ತಿರುವುಗಳಿಂದ ತುಂಬಿಕೊಂಡಿರುತ್ತದೆ! ಈ ಮಾತನ್ನು ಈಗ ಇಲ್ಲಿ ಹೇಳಲು ಕಾರಣವಿದೆ.. ಅಂತಾರಾಷ್ಟ್ರೀಯ ಖ್ಯಾತಿಯ ಭಾರತದ ಗಾಯಕಿ, ಇಂದು ಹಿನ್ನೆಲೆ ಗಾಯನದ ತಮ್ಮ ಅಮೋಘ ಸಾಧನೆಗೆ ಇಂತಹ ಪರಿಸ್ಥಿತಿಯಲ್ಲಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಲು ಬರುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅಷ್ಟು ಕಷ್ಟದ ಸ್ಥಿತಿಯಲ್ಲಿ, ಅಂದರೆ ಬೇರೆಯವರ ಸಹಾಯ ಪಡೆದು 'ಪದ್ಮಭೂಷಣ' ಪ್ರಶಸ್ತಿಸ್ವೀಕರಿಸಲು ಬಂದಿದ್ದಾರೆ ಗಾಯಕಿ ಅಲ್ಕಾ ಯಾಗ್ನಿಕ್!

ಹೌದು, ಇಂದು (23 June 2026) ಖ್ಯಾತ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ (Alka Yagnik) ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರು ಪದ್ಮ ಭೂಷಣ ಪ್ರಶಸ್ತಿ ಪ್ರದಾನ ಮಾಡಿದರು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ವರ್ಣರಂಜಿತ ವೇದಿಕೆಯಲ್ಲಿ ಭಾರತದ ಪ್ರಖ್ಯಾತ ಹಿನ್ನೆಲೆ ಗಾಯಕಿ ಆಲ್ಕಾ ಯಾಗ್ನಿಕ್ ರಾಷ್ಟ್ರಪತಿಗಳಿಂದ ಭಾರತದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ 'ಪದ್ಮಭೂಷಣ' ಪ್ರಶಸ್ತಿ ಸ್ವೀಕರಿಸಿ ಧನ್ಯತೆ ಅನುಭವಿಸಿದರು.

ಆದರೆ, ಈ ಸಮಯದಲ್ಲಿ ಅವರು ವೇದಿಕೆಗೆ ಬರುವಾದ ಜೊತೆಗೆ ಮತ್ತೊಬ್ಬರ ಸಹಾಯ ಪಡೆದು ಬಂದಿರುವುದನ್ನು ನೋಡಿ ಹಲವರ ಕಣ್ಣಾಲಿಗಳು ತುಂಬಿ ಬಂದವು. ಕಾರಣ, ಗಾಯಕಿ ಅಲ್ಕಾ ಯಾಗ್ನಿಕ್ ಅವರಿಗೆ ಅನಾರೋಗ್ಯ ಕಾಡುತ್ತಿದೆ. ಅವರು ಸದ್ಯಕ್ಕೆ ಸ್ವತಂತ್ರವಾಗಿ ಓಡಾಡಲೂ ಕೂಡ ಕಷ್ಟಪಡುತ್ತಿದ್ದಾರೆ. ಸುಮಾರು 6 ತಿಂಗಳುಗಳಿಗಿಂತಲೂ ಹೆಚ್ಚಿನ ಸಮಯದಿಂದ ಅವರಿಗೆ ಹಾಡಲಾಗುತ್ತಿಲ್ಲ, ಹೀಗಾಗಿ ಈ ಕೋಗಿಲೆ ಈಗ ಹಾಡುತ್ತಿಲ್ಲ.

ಹಾಗಿದ್ದರೆ ಈ ಅಪ್ರತಿಮ ಗಾಯಕಿಗೆ ಏನಾಗಿದೆ? ಇಲ್ಲಿದೆ ನೋಡಿ ನೋವಿನ ಮಾಹಿತಿ..

ಗಾಯಕಿ ಅಲ್ಕಾ ಯಾಗ್ನಿಕ್ ಈಗ ಹಾಡುತ್ತಿಲ್ಲ!

90ರ ದಶಕದ ಹೆಚ್ಚಿನ ಸೂಪರ್ ಹಿಟ್ ಹಾಡುಗಳಲ್ಲಿ ಮಿಂಚುತ್ತಿದ್ದ ಆ ಅದ್ಭುತ ಸ್ವರ ಈಗ ಮೌನಕ್ಕೆ ಶರಣಾಗಿದೆ. ಸುಮಾರು ಮೂರು ದಶಕಗಳ ಕಾಲ ಭಾರತೀಯ ಚಿತ್ರರಂಗದ 'ಮೆಲೋಡಿ ಕ್ವೀನ್' ಆಗಿ ಮೆರೆದಿದ್ದ ಅಲ್ಕಾ ಯಾಗ್ನಿಕ್ (Alka Yagnik) ಅವರು ಈಗ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅಪರೂಪದ ಶ್ರವಣ ದೋಷದಿಂದ (Hearing Disorder) ಬಳಲುತ್ತಿರುವ ಅವರು, ಕಳೆದ ಎರಡು ವರ್ಷಗಳಿಂದ ಹೊಸ ಹಾಡುಗಳನ್ನು ಹಾಡುತ್ತಿಲ್ಲ ಎಂಬ ವಿಷಯ ಸಂಗೀತ ಪ್ರೇಮಿಗಳಲ್ಲಿ ಭಾರಿ ಬೇಸರ ಮೂಡಿಸಿದೆ.

ಇತ್ತೀಚೆಗೆ ಭಾರೀ ನೋವು ತೋಡಿಕೊಂಡ ಗಾಯಕಿ:

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಆರೋಗ್ಯದ ಬಗ್ಗೆ ಮಾತನಾಡಿರುವ ಅಲ್ಕಾ ಯಾಗ್ನಿಕ್, "ನಾನು ಇನ್ನೂ ಆ ಶ್ರವಣ ದೋಷದ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಸಂಗೀತ ನಿರ್ದೇಶಕರು ಪದೇ ಪದೇ ನನ್ನನ್ನು ಸಂಪರ್ಕಿಸುತ್ತಿದ್ದಾರೆ, ಹೊಸ ಹಾಡುಗಳ ಆಫರ್ ನೀಡುತ್ತಿದ್ದಾರೆ. ಆದರೆ ಹಾಡಲು ನನ್ನ ಆರೋಗ್ಯ ಸಹಕರಿಸುತ್ತಿಲ್ಲ. ಪ್ರಸ್ತುತ ಯಾವುದೇ ಹೊಸ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ" ಎಂದು ಮರುಗಿದ್ದಾರೆ. ಇತ್ತೀಚೆಗಷ್ಟೇ ಜನಪ್ರಿಯ ಗಾಯಕ ಅರಿಜಿತ್ ಸಿಂಗ್ ಕೂಡ ಧ್ವನಿಯ ಸಮಸ್ಯೆಯಿಂದ ಹಠಾತ್ ವಿರಾಮ ಘೋಷಿಸಿದ್ದರು. ಈಗ ಅಲ್ಕಾ ಅವರ ಈ ಮೌನ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

ಸಾಧನೆಯ ಶಿಖರ:

ಅಲ್ಕಾ ಯಾಗ್ನಿಕ್ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರ. 'ಟಿಪ್ ಟಿಪ್ ಬರ್ಸಾ ಪಾನಿ', 'ಏ ಮೇರೆ ಹಮ್ಸಾಫರ್', 'ಚಾಂದ್ ಚುಪಾ ಬಾದಲ್ ಮೇ' ಮತ್ತು 'ಅಗರ್ ತುಮ್ ಸಾಥ್ ಹೋ' ನಂತಹ ಸಾವಿರಾರು ಮಧುರ ಗೀತೆಗಳಿಗೆ ಇವರು ಜೀವ ತುಂಬಿದ್ದಾರೆ. ಹಿಂದಿ ಮಾತ್ರವಲ್ಲದೆ ತೆಲುಗು, ತಮಿಳು, ಪಂಜಾಬಿ ಮತ್ತು ಬೆಂಗಾಲಿ ಭಾಷೆಗಳಲ್ಲೂ ಇವರು ಮೋಡಿ ಮಾಡಿದ್ದಾರೆ. 2024 ರಲ್ಲಿ ತೆರೆಕಂಡ ಇಮ್ತಿಯಾಜ್ ಅಲಿ ಅವರ 'ಅಮರ್ ಸಿಂಗ್ ಚಮ್ಕಿಲಾ' ಸಿನಿಮಾದಲ್ಲಿ ಇವರು ಕೊನೆಯದಾಗಿ ಹಾಡಿದ್ದರು.

ವೈಯಕ್ತಿಕ ಜೀವನದ ಏರಿಳಿತಗಳು:

ಅಲ್ಕಾ ಅವರ ವೃತ್ತಿಜೀವನ ಎಷ್ಟು ಯಶಸ್ವಿಯಾಗಿದೆಯೋ, ಅವರ ವೈಯಕ್ತಿಕ ಜೀವನ ಅಷ್ಟೇ ಸವಾಲುಗಳಿಂದ ಕೂಡಿದೆ. ಗಾಯಕಿ ಅಲ್ಕಾ ತಮ್ಮ ಪತಿ ನೀರಜ್ ಕಪೂರ್ ಅವರಿಂದ ಕಳೆದ 36 ವರ್ಷಗಳಿಂದ ದೂರವೇ ಉಳಿದಿದ್ದಾರೆ. ಇಬ್ಬರ ನಡುವೆ ಯಾವುದೇ ದೊಡ್ಡ ಜಗಳವಿಲ್ಲದಿದ್ದರೂ, ವೃತ್ತಿಜೀವನದ ಕಾರಣಕ್ಕಾಗಿ ಇಬ್ಬರು ಪ್ರತ್ಯೇಕ ನಗರಗಳಲ್ಲಿ ನೆಲೆಸಿದ್ದಾರೆ. ಇವರ ಪ್ರೇಮಕಥೆ ಕೂಡ ರೋಚಕವಾಗಿದೆ. ಇವರಿಬ್ಬರು ಮೊದಲ ಬಾರಿ ಭೇಟಿಯಾಗಿದ್ದು ದೆಹಲಿಯ ರೈಲು ನಿಲ್ದಾಣದಲ್ಲಿ! ಶಿಲ್ಲಾಂಗ್ ಮೂಲದ ಉದ್ಯಮಿ ನೀರಜ್ ಅವರನ್ನು ಮೊದಲ ನೋಟದಲ್ಲೇ ಇಷ್ಟಪಟ್ಟಿದ್ದ ಅಲ್ಕಾ, ನಂತರ ಸ್ನೇಹ ಬೆಳೆಸಿ ಮದುವೆಯಾದರು.

ಸದ್ಯ ಅಲ್ಕಾ ಯಾಗ್ನಿಕ್ ಅವರು ಈ ಆರೋಗ್ಯ ಸಮಸ್ಯೆಯಿಂದ ಶೀಘ್ರವೇ ಚೇತರಿಸಿಕೊಂಡು, ಮತ್ತೆ ತಮ್ಮ ಮಧುರ ಧ್ವನಿಯ ಮೂಲಕ ಅಭಿಮಾನಿಗಳನ್ನು ರಂಜಿಸಲಿ ಎಂಬುದು ಎಲ್ಲರ ಆಶಯವಾಗಿದೆ. ಇಂದು ಅಲ್ಕಾ ಯಾಗ್ನಿಕ್  ಅವರಿಗೆ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿ ದೊರಕಿರುವುದು ಎಲ್ಲರಿಗೂ ಖುಷಿ ಕೊಟ್ಟಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶ್ರೀ ರಾಘವೇಂದ್ರ ಮಹಾತ್ಮೆ: ರಾಯರ ಪೂರ್ವಾಶ್ರಮ ಪತ್ನಿ ಸರಸ್ವತಿ ಪ್ರೇತಾತ್ಮವಾಗಿದ್ದು ಯಾಕೆ?
Eetha ಫಸ್ಟ್ ಲುಕ್ ರಿವೀಲ್: ಲಾವಣಿ ದಂತಕಥೆ ವಿಠಾಬಾಯಿ ಪಾತ್ರದಲ್ಲಿ ಶ್ರದ್ಧಾ ಕಪೂರ್ ಹೊಸ ಅವತಾರ