ತೆರೆಮೇಲೆ 3 ನೇ ಬಾರಿ ಒಂದಾದ ಶಾರೂಕ್-ಅನುಷ್ಕಾ ಜೋಡಿ; ವರ್ಕೌಟ್ ಆಗುತ್ತಾ ಮೋಡಿ?

Published : Jul 30, 2017, 08:12 PM ISTUpdated : Apr 11, 2018, 12:55 PM IST
ತೆರೆಮೇಲೆ 3 ನೇ ಬಾರಿ ಒಂದಾದ ಶಾರೂಕ್-ಅನುಷ್ಕಾ ಜೋಡಿ; ವರ್ಕೌಟ್ ಆಗುತ್ತಾ ಮೋಡಿ?

ಸಾರಾಂಶ

ಶಾರುಕ್ ಖಾನ್ ಲಕ್ ಕಳೆದು ಹೋಗಿದೆ. ಅನುಷ್ಕಾ ಅದೃಷ್ಠ ಖುಲಾಯಿಸಿದೆ.  ಹಿಂದೊಮ್ಮೆ ತಾರಾ ಜೋಡಿ  ಒಟ್ಟಿಗೆ ಚಿತ್ರ ಮಾಡಿದ್ದರು. ಈಗ ಈ ಜೋಡಿ 3 ನೇ ಬಾರಿ ಜೊತೆಯಾಗಿದೆ.ಈ ಚಿತ್ರ ರಿಲೀಸ್'ಗೆ ಸಜ್ಜಾಗಿದೆ.

ಮುಂಬೈ(ಜು.30): ಶಾರುಕ್ ಖಾನ್ ಲಕ್ ಕಳೆದು ಹೋಗಿದೆ. ಅನುಷ್ಕಾ ಅದೃಷ್ಠ ಖುಲಾಯಿಸಿದೆ.  ಹಿಂದೊಮ್ಮೆ ತಾರಾ ಜೋಡಿ  ಒಟ್ಟಿಗೆ ಚಿತ್ರ ಮಾಡಿದ್ದರು. ಈಗ ಈ ಜೋಡಿ 3 ನೇ ಬಾರಿ ಜೊತೆಯಾಗಿದೆ.ಈ ಚಿತ್ರ ರಿಲೀಸ್'ಗೆ ಸಜ್ಜಾಗಿದೆ.

'ಜೆಬ್ ಹ್ಯಾರಿ ಮೆಟ್ ಸೇಜಲ್' ಚಿತ್ರದಲ್ಲಿ ಶಾರುಖ್ ಮ್ಯಾನರಿಸಂ ಬದಲಾಗಿದೆ. ಈ ಹಿಂದಿನ ಚಿತ್ರಕ್ಕೆ ಹೋಲಿಸಿದರೆ  ಕಿಂಗ್ ಖಾನ್ ಬೋಲ್ಡ್ ಆಗಿದ್ದಾರೆ. ಬಾಯಿಗೆ ಬಂದಂತೆ ಬೈತಾರೆ. ಆದರೆ, ಅದು ಕ್ಯಾರೆಕ್ಟರ್. ಹ್ಯಾರಿ ಅನ್ನೋ ಪಾತ್ರಕ್ಕೆ ಮಾತ್ರ ಸೀಮಿತ. ಹ್ಯಾರಿ ಅಂದ್ರೆ ಈ ಚಿತ್ರದಲ್ಲಿ ಶಾರುಖ್ ಕ್ರಿಶ್ಚಿಯನ್ನಾ ಅಂತ ಕೇಳ್ಬೇಡಿ. ಹ್ಯಾರಿ ನಿಕ್ ನೇಮ್. ಪೂರ್ಣ ಹೆಸ್ರು ಹರಿಂದರ್ ಸಿಂಗ್ ನೆಹ್ರಾ ಅಂತ ಇದೆ. ಅನುಷ್ಕಾ ಈ ನಾಯಕನಿಗೆ ಒಳ್ಳೆ ಜೋಡಿಯಾಗಿ ಅಭಿನಯಿಸಿದ್ದಾರೆ. ಅದು ರಬ್ ನೇ ಬನಾದಿ ಜೋಡಿ ಚಿತ್ರದಲ್ಲಿ ಪ್ರೂವ್  ಆಗಿದೆ. ಜಬ್ ತಕ್ ಹೈ ಜಾನ್ ಚಿತ್ರದಲ್ಲೂ ಶಾರುಖ್ ಮತ್ತು ಅನುಷ್ಕಾ ಮೋಡಿ ಮಾಡೋ ಪ್ರಯತ್ನ ಮಾಡಿದ್ದರು.ಆದರೆ, ಅದು ಸಾಧ್ಯವಾಗಲೇ ಇಲ್ಲ. ಜೆಬ್ ಹ್ಯಾರಿ ಮೆಟ್ ಸೇಜಲ್ ಚಿತ್ರದಲ್ಲಿ ಅನುಷ್ಕಾ,ಸೇಜಲ್ ಝವೇರಿ ಹೆಸರಿನ ಪಾತ್ರ ನಿಭಾಯಿಸಿದ್ದಾರೆ. ಇದು ಅಷ್ಟೇ ಬೋಲ್ಡ್ ಪಾತ್ರ. ಬಿಂದಾಸ್ ರೋಲ್ ಅಂದ್ರೂ ತಪ್ಪಿಲ್ಲ.ಅಂತಹ ಈ ನಟಿಯನ್ನ ಡೈರೆಕ್ಟ್ ಮಾಡಿದವ್ರು ಇಮ್ತಿಯಾಜ್ ಅಲಿ. ಇಮ್ತಿಯಾಜ್ ಅಲಿ ರೋಮ್ಯಾಂಟಿಕ್ ಜರ್ನಿ ಚಿತ್ರ ಮಾಡೋದರಲ್ಲಿ ಎತ್ತಿದ ಕೈ. ಜೆಬ್ ಹ್ಯಾರಿ ಮೆಟ್ ಸೇಜಲ್ ಚಿತ್ರದಲ್ಲೂ ಅದು ಮುಂದುವರೆದಿದೆ.

ಪ್ರೀತಂ ಸಂಗೀತವೂ ಈ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಪಂಜಾಬಿ ಫೀಲ್ ಇರೋ ಗೀತೆಗಳನ್ನ ಕೊಟ್ಟಿದ್ದಾರೆ.ಕೆ.ಯು.ಮೋಹನನ್ ಕ್ಯಾಮೆರಾಕಣ್ಣಲ್ಲಿ ಆ ಗೀತೆಗಳು ಅದ್ಭುತವಾಗಿಯೇ ಮೂಡಿ ಬಂದಿವೆ. ಚಿತ್ರ ತಂಡವೂ ಆ ಹಾಡುಗಳ ಮೇಕಿಂಗ್ ಕೂಡ ಬಿಟ್ಟಿವೆ.  ನಿರ್ದೇಶಕ ಇಮ್ತಿಯಾಜ್ ಅಲಿ ತಮ್ಮ ಕಥೆ ಮೂಲಕ ಈ ಜೋಡಿಯನ್ನ ಯುರೋಪ್​ಗೆ ಕರೆದುಕೊಂಡು ಹೋಗಿದ್ದಾರೆ.ಅಲ್ಲಿಯೇ ಅರಳೋ ಚೆಂದದ ಲವ್ ಸ್ಟೋರಿಗೆ ರೋಮ್ಯಾಂಟಿಕ್ ಟಚ್ ಕೊಟ್ಟಿದ್ದಾರೆ. ಥ್ರಿಲ್ಲು,ಸುಳ್ಳು,ಫ್ಯಾಂಟಸಿ, ಹಿಂಗೆ ಎಲ್ಲವನ್ನೂ ಚಿತ್ರದಲ್ಲಿದೆ.ಜೊತೆಗೆ ಒಂದ್ ಕುತೂಹಲದ ನೋಟವೂ ಈ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿದೆ. ಅದನ್ನ ತಣಿಸಿಕೊಳ್ಳಲು ಆಗಸ್ಟ್  04 ವರೆಗೂ ಕಾಯಬೇಕು. ಆ ದಿನವೇ ಈ ಜೆಬ್ ಹ್ಯಾರಿ ಮೆಟ್ ಸೇಜಲ್ ಚಿತ್ರ ರಿಲೀಸ್ ಆಗುತ್ತಿದೆ.


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!