
ಬೆಂಗಳೂರು(ಜು.29): ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ಎಲ್ಲಡೆ ಸುದ್ದಿಯಾಗಿದ್ದ ನಟಿ ಸಂಜನಾ ದರ್ಶನ್ ಬಗ್ಗೆ ವಿವಾದತ್ಮಕ ಹೇಳಿಕೆ ನೀಡಿ ಮತ್ತೆ ಕ್ಷಮೆಯಾಚಿಸಿದ್ದಾರೆ.
'ನಾನು ದರ್ಶನ್ ಬಗ್ಗೆ ಹೇಳಿರುವ ಮಾತುಗಳಿಂದ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇನೆ. ನಾನು ನಿರೂಪಕ ಕೇಳಿದ ಪ್ರಶ್ನೆಗೆ ನೇರವಾಗಿ ಉತ್ತರ ಹೇಳಿದ್ದೇನೆ ಅಷ್ಟೇ.ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ನನಗಿರಲಿಲ್ಲ.ನನ್ನ ಮಾತುಗಳಿಂದ ಬೇಸರವಾಗಿದ್ದರೆ ಕ್ಷಮಿಸಿಬಿಡಿ. ದರ್ಶನ್ ಮತ್ತು ಆತನ ಅಭಿಮಾನಿಗಳಿಗೆ ಕ್ಷಮೆಯಾಚಿಸುತ್ತೇವೆ. ದರ್ಶನ್ ಚಿತ್ರಗಳಲ್ಲಿ ಬಿಲ್ಡಪ್ ಆಗಿರುತ್ತವೆ ಎಂದು ಹೇಳಿದ್ದೆ. ಆದರೆ ಈ ವಿಷಯ ಇಷ್ಟೊಂದು ಗಂಭೀರವಾಗುತ್ತೆ ಎಂದು ತಿಳಿದಿರಲಿಲ್ಲ' ಎಂದು ಕ್ಷಮೆಯಾಚಿಸಿದ್ದಾರೆ.
'ಇತ್ತೀಚೆಗೆ ಖಾಸಗಿ ಶೋನಲ್ಲಿ ದರ್ಶನ್ ಸಿನಿಮಾಗಳಲ್ಲಿ ಹೆಚ್ಚಾಗಿ ಬಿಲ್ಡಪ್ ಇರುತ್ತೆ ಅಂತಾ ಹೇಳಿದ್ದರು. ಇದು ದರ್ಶನ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿ ಸಂಜನಾ ಪೋಟೋಗೆ ಹೂವಿನ ಹಾಕಿ ಸತ್ತು ಹೋದಳು' ಅಂತಾ ತಮ್ಮ ಆಕ್ರೋಶವನ್ನ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.