
ತಾರಾ ಸುತಾರಿಯಾ, ತನ್ನ ಅದ್ಭುತ ಸೌಂದರ್ಯ, ಚುರುಕಾದ ಮಾತು ಮತ್ತು ಮುದ್ದಾದ ನಗುವಿನಿಂದ ಲಕ್ಷಾಂತರ ಹೃದಯಗಳನ್ನು ಗೆದ್ದಿರುವ ನಟಿ. ಸದ್ಯ ಈಕೆ ಯಶ್, ನಯನತಾರಾ ಮತ್ತು ಕಿಯಾರಾ ಅಡ್ವಾಣಿ ಜೊತೆ 'ಟಾಕ್ಸಿಕ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಸುದ್ದಿ ಹೊರಬಿದ್ದಾಗಿನಿಂದ ತಾರಾ ಒಂದಾದ ಮೇಲೊಂದರಂತೆ ಸಖತ್ ಸ್ಟನ್ನಿಂಗ್ ಲುಕ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಆದರೆ, ಅವರ ಈ ಸೌಂದರ್ಯ ಮತ್ತು ಫಿಟ್ನೆಸ್ ಹಿಂದಿನ ಡಯಟ್ ಸೀಕ್ರೆಟ್ ಏನು ಗೊತ್ತಾ? ಬನ್ನಿ, ನಾವೇ ಹೇಳ್ತೀವಿ.
ತಾರಾ ಡಯಟ್ ಸೀಕ್ರೆಟ್ಸ್
ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡಿದ್ದ ತಾರಾ, "ನನಗೆ ಇಷ್ಟ ಬಂದಿದ್ದನ್ನು ತಿನ್ನದೇ ಇರುವುದರಲ್ಲಿ ನನಗೆ ನಂಬಿಕೆ ಇಲ್ಲ. ಬ್ಯಾಲೆನ್ಸ್ ಮತ್ತು ಪೋರ್ಷನ್ ಕಂಟ್ರೋಲ್ (ಮಿತವಾಗಿ ತಿನ್ನುವುದು) ಮುಖ್ಯ. ನನಗೆ ಇಷ್ಟವಾದದ್ದನ್ನು ತಿನ್ನುತ್ತೇನೆ, ಆದರೆ ಅಳತೆ ಮೀರುವುದಿಲ್ಲ" ಎಂದು ಹೇಳಿದ್ದರು. "ಶೂಟಿಂಗ್ ಸೆಟ್‌ನಲ್ಲಿ ನಾನು ಯಾವಾಗಲೂ ಬಾದಾಮಿ ಅಥವಾ ಹಣ್ಣುಗಳಂತಹ ಹೆಲ್ದಿ ಸ್ನ್ಯಾಕ್ಸ್ ಇಟ್ಟುಕೊಂಡಿರುತ್ತೇನೆ. ಇದರಿಂದ ಹೆಚ್ಚು ಹೊತ್ತು ಕೆಲಸ ಮಾಡಿದರೂ ಸುಸ್ತಾಗಲ್ಲ, ಹೊಟ್ಟೆಯೂ ಭಾರ ಎನಿಸುವುದಿಲ್ಲ" ಅಂತಾನೂ ಅವರು ಹೇಳಿದ್ದಾರೆ.
ತಾರಾಗೆ ಸಿಹಿ ತಿಂಡಿಗಳೆಂದರೆ ಸಿಕ್ಕಾಪಟ್ಟೆ ಇಷ್ಟವಂತೆ. "ಖಂಡಿತವಾಗಿಯೂ ಡೆಸರ್ಟ್‌ಗಳು... ನನಗೆ ಸ್ವೀಟ್ಸ್ ಅಂದ್ರೆ ಪಂಚಪ್ರಾಣ! ಹಾಗೇ, ಏನಾದ್ರೂ ಉಪ್ಪುಪ್ಪು ತಿನ್ನಬೇಕು ಅನಿಸಿದಾಗ ನಾನು Red Rock Deli ಚಿಪ್ಸ್ ತಿನ್ನುತ್ತೇನೆ. ಇದು ನನ್ನ ಫೇವರಿಟ್. ಎಲ್ಲದರಲ್ಲೂ ಬ್ಯಾಲೆನ್ಸ್ ಇರಬೇಕು ಅನ್ನೋದು ನನ್ನ ಪಾಲಿಸಿ" ಎನ್ನುತ್ತಾರೆ 'ಟಾಕ್ಸಿಕ್' ಬೆಡಗಿ.
ತಾರಾ ಸ್ಕಿನ್‌ಕೇರ್ ಸೀಕ್ರೆಟ್ಸ್
Grazia ಮ್ಯಾಗಜಿನ್ ಪ್ರಕಾರ, ತಾರಾ ತನ್ನ ತ್ವಚೆಯ ಕಾಂತಿಗಾಗಿ ತುಂಬಾನೇ ಸಿಂಪಲ್ ರೂಟಿನ್ ಫಾಲೋ ಮಾಡ್ತಾರೆ. ಕ್ಲೆನ್ಸಿಂಗ್, ಟೋನಿಂಗ್ ಮತ್ತು ಮಾಯಿಶ್ಚರೈಸಿಂಗ್ ಜೊತೆಗೆ, ತಮ್ಮ ಅಜ್ಜಿ ಹೇಳಿಕೊಟ್ಟ ಮನೆಮದ್ದು ಫೇಸ್‌ಪ್ಯಾಕ್‌ಗಳನ್ನು ಬಳಸುತ್ತಾರೆ. ವಾರಕ್ಕೊಮ್ಮೆ ಮೊಸರು, ಕಡಲೆ ಹಿಟ್ಟು (ಬೇಸನ್), ಅರಿಶಿನ, ಜೇನುತುಪ್ಪ ಮತ್ತು ಸ್ವಲ್ಪ ನಿಂಬೆರಸ ಸೇರಿಸಿ ಮಾಡಿದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಾರೆ.
ವರದಿಗಳ ಪ್ರಕಾರ, 'ಟಾಕ್ಸಿಕ್' ಸಿನಿಮಾದಲ್ಲಿ ರೆಬೆಕ್ಕಾ ಪಾತ್ರಕ್ಕಾಗಿ ತಾರಾ ಸುತಾರಿಯಾ 2 ರಿಂದ 3 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.