
ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಸೈರಾ ನರಸಿಂಹ ರೆಡ್ಡಿ'ಅದ್ಧೂರಿ ಪ್ರದರ್ಶನ ಕಾಣುತ್ತಿದ್ದು, ಕಿಚ್ಚ ಸುದೀಪ್ ಸೇರಿ ಎಲ್ಲ ನಟರ ಅಭಿನಯನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಸೈರಾ ನರಸಿಂಹ ರೆಡ್ಡಿ ಚಿತ್ರದ ನಿರ್ಮಾಪಕ ರಾಮ್ ಚರಣ್ ಸಕ್ಸಸ್ ಪಾರ್ಟಿ ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಂಡ ತಮನ್ನಾಳ ಕೈಯಲಿದ್ದ ವಜ್ರದ ಉಂಗುರ ನೋಡಿ ಜನರು ಫುಲ್ ಚಕಿತಗೊಂಡಿದ್ದಾರೆ.
ಸ್ವಿಮ್ ಸೂಟ್‌ನಲ್ಲಿ ತಮನ್ನಾ ವಾಕ್... ಅಲ್ಲ ಅವರಲ್ಲ ಬಿಡಿ, ಮತ್ಯಾರು?
ಸೈರಾ ಚಿತ್ರ ಹಿಟ್‌ನಲ್ಲಿ ಮುಳುಗಿರುವ ಚಿತ್ರತಂಡ ನಟಿ ತಮನ್ನಾಳಿಗೆ 350 ಕೋಟಿ ರೂ. ಮೌಲ್ಯದ ವಜ್ರದ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದಾರೆನ್ನಲಾಗುತ್ತಿದೆ. ಈ ಬಗ್ಗೆ ಉಪಾಸನಾ ತಮ್ಮ ಟ್ಟಿಟರ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
'ಮಿಸಸ್ ನಿರ್ಮಾಪಕಿಯಿಂದ ಸೂಪರ್ ನಟಿ ತಮನ್ನಾಳಿಗೆ ಒಲವಿನ ಉಡುಗೊರೆ. ಮಿಸ್ ಯು, ಬೇಗ ಸಿಗೋಣ' ಎಂದು ಟ್ಟೀಟ್ ಮಾಡಿದ್ದರು.
ಉಂಗುರ ವಜ್ರನೋ, ಅಲ್ವಾ ಎಂದು ಅನುಮಾನ ಇರುವ ಜನರಿಗೆ ತಮನ್ನಾ ಟ್ಟೀಟ್‌ನಲ್ಲಿ , 'ನೀವು ಅಂದುಕೊಂಡಂತೆ ಇದು ವಜ್ರದ ಉಂಗುರವಲ್ಲ, ಇದು ಬಾಟಲ್ ಓಪನರ್' ಎಂದು ಹರಡಿದ್ದ ಎಲ್ಲ ವದಂತಿಗೂ ಬ್ರೇಕ್ ಹಾಕಿದ್ದಾರೆ.
ಮೆಗಾಸ್ಟಾರ್ ಕುಟುಂಬಕ್ಕೆ ತಮನ್ನಾ ಲಕ್ಕಿ ಗರ್ಲ್ ಇದ್ದಂತೆ. ಅವರೊಂದು ಯಾವ ಸಿನಿಮಾ ಮಾಡಿದರೂ ಸೂಪರ್ ಹಿಟ್ ಆಗುವುದಂತೂ ಗ್ಯಾರಂಟಿ. ಅಷ್ಟೇ ಅಲ್ಲದೇ ತಮ್ಮ ಮುಂದಿನ ಪ್ರಾಜೆಕ್ಟ್‌ನಲ್ಲೂ ತಮನ್ನಾಳೇ ನಟಿಸಬೇಕೆಂಬ ಬೇಡಿಕೆ ಇಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.