ನಿಶ್ಚಿತಾರ್ಥದ ನಂತರ ಕೈ-ಕಾಲು ಮುರಿದುಕೊಂಡ ಖ್ಯಾತ ನಟ!

By Web DeskFirst Published Mar 29, 2019, 3:39 PM IST
Highlights

ಕಾಲಿವುಡ್ ಖ್ಯಾತ ನಟ ವಿಶಾಲ್ ಚಿತ್ರೀಕರಣದ ವೇಳೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು ಸದ್ಯಕ್ಕೆ ಖಾಸಗಿ ಆಸ್ಪತ್ರೆವೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದೆ.

ಕೆಲದಿನಗಳ ಹಿಂದೆ ಕಾಲಿವುಟ್ ನಟ ವಿಶಾಲ್ ಹಾಗೂ ಅನಿಶಾ ರೆಡ್ಡಿ ಅಧಿಕೃತವಾಗಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದು ಮರುದಿನ ಶೂಟಿಂಗ್ ಗೆ ತೆರಳಿದಾಗ ಸಾಹಸ ದೃಶ್ಯ ಮಾಡುವಾಗ ಕೈ-ಕಾಲುಗಳಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ತಿಂಗಳುಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕಿದ್ದು ಶೂಟಿಂಗ್ ಮುಂದೂಡಲಾಗಿದೆ.

 

ಇನ್ನು ಸಾಮಾಜಿಕ ಜಾಲತಾಣದಲ್ಲಿ ವಿಶಾಲ್ ಫೋಟೋ ವೈರಲ್ ಆಗಿದ್ದು ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ವಿಶಾಲ್ ಆರೋಗ್ಯವಾಗಿದ್ದು ಯಾವುದೇ ಗಂಭೀರ ಗಾಯ ಅಥವಾ ಪ್ರಾಣಕ್ಕೆ ತೊಂದರೆ ಆಗಿಲ್ಲ ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆ.

click me!