
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚಿಗೆ ಕಷ್ಟದಲ್ಲಿರುವವರ ಪಾಲಿಗೆ ಆಶಾಕಿರಣ. ಯಾರೇ ಕಷ್ಟ ಎಂದು ಬಂದರೂ ಸಹಾಯ ಮಾಡುತ್ತಾರೆ. ಇತ್ತೀಚಿಗೆ ಅದೇ ಕಾರಣಕ್ಕೆ ಹೆಚ್ಚು ಸುದ್ದಿಯಲ್ಲಿದ್ದಾರೆ.
ಆಹಾರ ಕೊಡದೆ ನಾರಾಯಣ ಮೂರ್ತಿಗೆ ಹಿಂಸೆ ನೀಡಿದ ಸಿಬ್ಬಂದಿ!
ಭಾರತೀಯ ಥ್ರೋ ಬಾಲ್ ತಂಡದ ನಾಯಕಿ ಕೃಪಾ ಜೆ ಪಿ ದರ್ಶನ್ ಬಳಿ ಮನವಿಯೊಂದನ್ನು ಮಾಡಿದ್ದಾರೆ. ಕೃಪಾ ದರ್ಶನ್ ಅಭಿಮಾನಿ. ಅವರು ಮಾಡುವ ಸಹಾಯದ ಮನೋಭಾವ ಇವರಿಗೆ ಸಿಕ್ಕಾಪಟ್ಟೆ ಇಷ್ಟವಾಗುತ್ತಂತೆ. ದರ್ಶನ್ ರನ್ನು ಸದಾ ಫಾಲೋ ಮಾಡ್ತಾ ಇರ್ತಾರಂತೆ. ಥ್ರೋ ಬಾಲ್ ಆಟಗಾರರಿಗೆ ಸಹಾಯ ಮಾಡಿ ಎಂದು ದರ್ಶನ ರನ್ನು ಕೇಳಿಕೊಂಡಿದ್ದಾರೆ.
‘ರಾಜ್ಯದಲ್ಲಿ ಸಾಕಷ್ಟು ಪ್ರತಿಭಾನ್ವಿತ ಮಹಿಳಾ ಆಟಗಾರರಿದ್ದರೂ ಥ್ರೋ ಬಾಲ್ ಅಷ್ಟೊಂದು ಫೇಮಸ್ ಆಗಿಲ್ಲ. ಥ್ರೋಬಾಲ್ ಖ್ಯಾತಿ ಪಡೆಯಬೇಕೆಂದರೆ ದರ್ಶನ್ ಥ್ರೋಬಾಲ್ ಮಹಿಳಾ ತಂಡಕ್ಕೆ ಪ್ರೋತ್ಸಾಹ ನೀಡಬೇಕು. ಇದರಿಂದ ಅನೇಕ ಕ್ರೀಡಾಪಟುಗಳಿಗೆ ಸಹಾಯವಾಗುತ್ತದೆ. ದಯವಿಟ್ಟು ಸಹಾಯ ಮಾಡಿ, ನಮ್ಮನ್ನು ಬೆಂಬಲಿಸಿ‘ ಎಂದು ಮನವಿ ಮಾಡಿದ್ದಾರೆ.
ಹಾಡಿನ ಮೂಲಕ ಅಣ್ಣಾಮಲೈಗೆ ಬಹುಪರಾಕ್ ಎಂದ ಅಭಿಮಾನಿ
ಕೃಪಾ ಜೆ ಪಿ ಸದ್ಯ ಭಾರತೀಯ ಥ್ರೋಬಾಲ್ ತಂಡದ ನಾಯಕಿಯಾಗಿದ್ದಾರೆ. ಕೃಪಾ ಮನವಿಗೆ ದರ್ಶನ್ ಸಹಾಯ ಮಾಡ್ತಾರಾ ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.