ಡೆಲಿವರಿ ಬಾಯ್ ತನ್ನ ಪಕ್ಕದಲ್ಲಿಯೇ ನಟಿ ಬಂದರೂ ನೋಡಿಲ್ಲ. ಇದೀಗ ವಿಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮುಂಬೈ: ಪಕ್ಕದಲ್ಲಿಯೇ ಸ್ಟಾರ್ ನಟಿ ಬಂದ್ರೂ ಕಣ್ಣೆತ್ತಿಯೂ ನೋಡದೇ ಹೋದ ಡೆಲಿವರಿ ಬಾಯ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಸ್ವಿಗ್ಗಿ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಯಾವುಕ್ಕೂ ತಲೆಕೆಡಿಸಿಕೊಳ್ಳದೇ ಸಂತೋಷದಿಂದ ನಮ್ಮ ಕೆಲಸ ಮುಂದುವರಿಯುಯತ್ತಿರುತ್ತದೆ. ನಮ್ಮ ಗುರಿಯನ್ನು ತಲುಪಲು ಕೆಲಸ ಮುಂದುವರಿಯುತ್ತಿರುತ್ತದೆ ಎಂದು ಬರೆದುಕೊಂಡಿರುವ ಸ್ವಿಗ್ಗಿ ತನ್ನ ಸಿಬ್ಬಂದಿಯ ಕೆಲಸದ ಪ್ರಜ್ಞೆಗೆ ಮೆಚ್ಚುಗೆ ಸೂಚಿಸಿದೆ.
ಸಿನಿಮಾ ಕಲಾವಿದರನ್ನು ನೋಡಬೇಕು ಮತ್ತು ಅವರ ಜೊತೆ ಮಾತನಾಡಿ ಒಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು ಎಂಬುವುದು ಬಹುತೇಕ ಎಲ್ಲಾಅಭಿಮಾನಿಗಳ ಆಸೆ ಆಗಿರುತ್ತದೆ. ತಮ್ಮ ನೆಚ್ಚಿನ ಕಲಾವಿದರನ್ನು ಕಾಣಲು ದೂರ ದೂರದ ಊರುಗಳಿಂದ ಅಭಿಮಾನಿಗಳು ಬರುತ್ತಾರೆ. ಇನ್ನು ತಾವು ವಾಸಿಸುವ ಸ್ಥಳದಲ್ಲಿ ಶೂಟಿಂಗ್ ನಡೆಯುತ್ತಿದ್ರೆ, ಇರೋ ಕೆಲಸವನ್ನು ಬಿಟ್ಟು ಚಿತ್ರೀಕರಣದ ಸ್ಥಳಕ್ಕೆ ತೆರಳುತ್ತಾರೆ.
ಮುಂಬೈನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಶೂಟಿಂಗ್ ಸ್ಪಾಟ್, ಸ್ಟುಡಿಯೋ, ಜಿಮ್, ಸ್ಟಾರ್ ಕಲಾವಿದರ ಮನೆ ಮುಂಭಾಗ ಪಾಪರಾಜಿಗಳು ಸುತ್ತುವರಿದಿರುತ್ತಾರೆ. ಕಲಾವಿದರು ಹೊರಗೆ ಬರುತ್ತಲೇ ಫೋಟೋ ಕ್ಲಿಕ್ ಮಾಡಲು ಮುಂದಾಗುತ್ತಾರೆ. ಆದ್ರೆ ಇಲ್ಲೊಬ್ಬ ಡೆಲಿವರಿ ಬಾಯ್ ತನ್ನ ಪಕ್ಕದಲ್ಲಿಯೇ ನಟಿ ಬಂದರೂ ನೋಡಿಲ್ಲ. ಇದೀಗ ವಿಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಡೆಲಿವರಿ ಬಾಯ್ ಗ್ರಾಹಕರನ್ನು ಹುಡುಕುತ್ತಿರೋದನ್ನು ವಿಡಿಯೋಲದಲ್ಲಿ ನೋಡಬಹುದಾಗಿದೆ.
ಏನಿದು ಘಟನೆ? ಇಲ್ಲಿದೆ ವಿವರ
ಮುಂಬೈನ ಕಟ್ಟಡದ ಗೇಟ್ ಮುಂಭಾಗ ಸ್ವಿಗ್ಗಿ ಡೆಲಿವರಿ ಬಾಯ್ ನಿಂತಿರುತ್ತಾನೆ. ಅಲ್ಲಿಯೇ ಪಾಪರಾಜಿಗಳು ಸಹ ನಿಂತಿರುತ್ತಾರೆ. ಆಗ ಎಲ್ಲಾ ಪಾಪರಾಜಿಗಳು ಡೆಲಿವರಿ ಬಾಯ್‌ಗೆ ಫ್ರೇಮ್‌ನಿಂದ ಹೊರ ಬರುವಂತೆ ಹೇಳುತ್ತಾರೆ. ಆದ್ರೆ ಇದು ಡೆಲಿವರಿ ಬಾಯ್‌ಗೆ ಅರ್ಥ ಆಗಲ್ಲ. ಆಗ ನೀನು ಪಕ್ಕಕ್ಕೆ ಬಾ ಎಂದು ಜೋರಾಗಿ ಕೂಗಿ ಹೇಳುತ್ತಾರೆ. ಆನಂತರ ಡೆಲಿವರಿ ಬಾಯ್ ಕಟ್ಟಡದೊಳಗೆ ಹೋಗುತ್ತಾನೆ.
Unbothered. Moisturized. Happy. In My Lane. Focused. Flourishing. https://t.co/6R765T8I6X
— Swiggy (@Swiggy)ಇದೇ ವೇಳೆ ನಟಿ ತಾಪ್ಸಿ ಪನ್ನು ಕಟ್ಟಡದಿಂದ ಹೊರಗೆ ಬರುತ್ತಾರೆ. ಡೆಲಿವರಿ ಬಾಯ್ ಮಾತ್ರ ತಾಪ್ಸಿ ಪನ್ನು ಅವರನ್ನು ಕಣ್ಣೆತ್ತಿಯೂ ನೋಡದೇ ತನ್ನ ಗ್ರಾಹಕರು ಎಲ್ಲಿದ್ದಾರೆ ಎಂಬುದನ್ನು ಹುಡುಕುತ್ತಿರುತ್ತಾನೆ. ತಾಪ್ಸಿ ಪನ್ನು ಬ್ಲಾಕ್ ಡ್ರೆಸ್ ಧರಿಸಿದ್ದು, ಕನ್ನಡಕ ಧರಿಸಿದ್ದರು. ತಾಪ್ಸಿ ಹೊರಗೆ ಬರುತ್ತಿದ್ದಂತೆ ಪಾಪರಾಜಿಗಳು ಫೋಟೋ ಕ್ಲಿಕ್ಕಿಸಲು ಆರಂಭಿಸುತ್ತಾರೆ.
ನೆಟ್ಟಿಗರ ಕಮೆಂಟ್
ಈ ವಿಡಿಯೋ ನೋಡಿದ ನೆಟ್ಟಿಗರು ಡೆಲಿವರಿ ಬಾಯ್‌ನ ಕೆಲಸದ ಶ್ರದ್ಧೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಪಕ್ಕದಲ್ಲಿಯೇ ಅಪ್ಸರೆ ಬಂದರೂ ನೋಡಲಿಲ್ಲ ಯಾಕೆ? ಎಂತಹ ಒಳ್ಳೆಯ ಚಾನ್ಸ್ ಮಿಸ್ ಮಾಡ್ಕೊಂಡಿದ್ದೀರಿ? ಈ ವಿಡಿಯೋ ನೋಡಿದ್ಮೇಲೆ ನಿಮಗೆ ಏನು ಮಿಸ್ ಮಾಡಿದ್ದೀರಿ ಅನ್ನೋದು ತಿಳಿಯಲಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.