ಕಿಚ್ಚನ ಖುಷಿಗೆ ಕಾರಣವೇನು ಗೊತ್ತಾ?

Published : Nov 09, 2017, 07:35 PM ISTUpdated : Apr 11, 2018, 12:58 PM IST
ಕಿಚ್ಚನ ಖುಷಿಗೆ ಕಾರಣವೇನು ಗೊತ್ತಾ?

ಸಾರಾಂಶ

ಕಿಚ್ಚ ಸುದೀಪ್ ಬಾಕ್ಸಾಫೀಸ್ ಬಹದ್ದೂರ್. ಹೆಬ್ಬುಲಿ ನಂತರ ದಿ ವಿಲನ್ ಸಿನಿಮಾ ಶೂಟಿಂಗ್'ನಲ್ಲಿ ಬಿಜಿಯಾಗಿದ್ದಾರೆ.  ಇದರ ಜೊತೆ ಜೊತೆಗೆ ಬಿಗ್'ಬಾಸ್ ನಿರೂಪಣೆ ಸಿಸಿಎಲ್ ಪ್ರಾಕ್ಟೀಸ್​, ಹಾಲಿವುಡ್ ಸಿನಿಮಾ ಶೂಟಿಂಗ್ , ಪೈಲ್ವಾನ್ ಸಿನಿಮಾ ತಯಾರಿ ಎಲ್ಲದರಲ್ಲೂ ಬಿಜಿಯಾಗಿದ್ದಾರೆ. ಇಷ್ಟು ಬಿಜಿಯಾಗಿರೋ ನಟನಿಗೆ ಸಣ್ಣ ಸಣ್ಣ ವಿಚಾರಗಳೂ ಖುಷಿ ಕೊಡುತ್ತವೆ. ಸದ್ಯಕ್ಕೆ ಕಿಚ್ಚನಿಗೆ ಖುಷಿ ಕೊಟ್ಟಿರೋದು ಸಿನಿಮಾ ಅಲ್ಲ ಬದಲಿಗೆ ಪತ್ನಿ ಪ್ರಿಯಾರಿಂದ  ಗುಡ್​ನ್ಯೂಸ್​ ಬಂದಿದೆ.

ಬೆಂಗಳೂರು (ನ.09): ಕಿಚ್ಚ ಸುದೀಪ್ ಬಾಕ್ಸಾಫೀಸ್ ಬಹದ್ದೂರ್. ಹೆಬ್ಬುಲಿ ನಂತರ ದಿ ವಿಲನ್ ಸಿನಿಮಾ ಶೂಟಿಂಗ್'ನಲ್ಲಿ ಬಿಜಿಯಾಗಿದ್ದಾರೆ.  ಇದರ ಜೊತೆ ಜೊತೆಗೆ ಬಿಗ್'ಬಾಸ್ ನಿರೂಪಣೆ ಸಿಸಿಎಲ್ ಪ್ರಾಕ್ಟೀಸ್​, ಹಾಲಿವುಡ್ ಸಿನಿಮಾ ಶೂಟಿಂಗ್ , ಪೈಲ್ವಾನ್ ಸಿನಿಮಾ ತಯಾರಿ ಎಲ್ಲದರಲ್ಲೂ ಬಿಜಿಯಾಗಿದ್ದಾರೆ. ಇಷ್ಟು ಬಿಜಿಯಾಗಿರೋ ನಟನಿಗೆ ಸಣ್ಣ ಸಣ್ಣ ವಿಚಾರಗಳೂ ಖುಷಿ ಕೊಡುತ್ತವೆ. ಸದ್ಯಕ್ಕೆ ಕಿಚ್ಚನಿಗೆ ಖುಷಿ ಕೊಟ್ಟಿರೋದು ಸಿನಿಮಾ ಅಲ್ಲ ಬದಲಿಗೆ ಪತ್ನಿ ಪ್ರಿಯಾರಿಂದ ಗುಡ್​ನ್ಯೂಸ್​ ಬಂದಿದೆ.

ಸ್ಯಾಂಡಲ್​ವುಡ್​ನ ಮುದ್ದಾದ ದಂಪತಿಗಳಲ್ಲಿ ಕಿಚ್ಚ ಸುದೀಪ್ ಪ್ರಿಯಾ ದಮಪತಿಯ ಜೋಡಿಯೂ ಒಂದು. ಲೈಫಲ್ಲಿ ಎಲ್ಲ ಸಮಸ್ಯೆ ಬಗೆಹರಿಸಿಕೊಂಡು ಮತ್ತೆ  ಸುಂದರ ಸಂಸಾರ ನಡೆಸುತ್ತಿದ್ದಾರೆ. ಗಂಡ ಹೆಂಡತಿ ಅಂದ್ರೆ ಹೀಗೆ ಇರಬೇಕು ಎನ್ನುವಂತೆ ಒಬ್ಬರಿಗೊಬ್ಬರು ಸಂತಸ ಸಂಭ್ರಮ ಶುಭಾಶಯ ಎಲ್ಲವನ್ನೂ ಪರಸ್ಪರ ಹಂಚಿಕೊಳ್ಳುತ್ತಾರೆ. ಕಾರ್ಯಕ್ರಮಗಳಿಗೆ ಒಟ್ಟಿಗೆ ಹೋಗಿ ಬರುತ್ತಾರೆ. ಇದೀಗ ಪ್ರಿಯಾ ಕಿಚ್ಚನಿಗೆ ಕೊಟ್ಟ ಗುಡ್ ನ್ಯೂಸ್ ಏನಂದ್ರೆ  ಪ್ರಿಯಾ ಸುದೀಪ್ ಕಿರುತೆರೆಯಲ್ಲಿ ನಿರ್ಮಾಪಕಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತ ಸೋಷಿಯಲ್ ಮೀಡಿಯಾದಲ್ಲೂ ಆಕ್ಟೀವ್  ಆಗಿದ್ದಾರೆ. ಇತ್ತೀಚೆಗಷ್ಟೆ ಪ್ರಿಯಾ ಸುದೀಪ್ ಟ್ವಿಟ್ಟರ್ ಎಂಟ್ರಿ ಪಡೆದಿದ್ದು ಇಷ್ಟು ಬೇಗ 50 ಸಾವಿರ ಫಾಲೋವರ್ಸ್​​ನ್ನು ಗಳಿಸಿದ್ದಾರೆ. ಈ ಬಗ್ಗೆ ಕಿಚ್ಚ ಸುದಿಪ್ ರೀಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಲ್ಲದೆ, ಈ ಬಗ್ಗೆ ನಂಗೂ ತುಂಬಾ ಖುಷಿಯಾಗುತ್ತಿದೆ  ಎಂದಿದ್ದಾರೆ. ಜೀವನದಲ್ಲಿ  ಕೆಲವೊಮ್ಮ  ಸಣ್ಣ ಸಣ್ಣ ವಿಚಾರಗಳು ಅದೆಷ್ಟು ಖುಷಿಕೊಡುತ್ತೆ  ಅನ್ನೋದಕ್ಕೆ  ಪತ್ನಿಯ ಸಂತಸವನ್ನ ತನ್ನ ಖುಷಿಯಾಗಿ ಹಂಚಿಕೊಂಡ ಕಿಚ್ಚನ ಈಸಂದರ್ಭವೇ ಸಾಕ್ಷಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!